ಬ್ಯಾಡ್ಮಿಂಟನ್: ಫೈನಲ್‌ಗೆ ಆಯುಷ್–ಸಾತ್ವಿಕ್

ಸೋಮವಾರ, ಮೇ 27, 2019
27 °C

ಬ್ಯಾಡ್ಮಿಂಟನ್: ಫೈನಲ್‌ಗೆ ಆಯುಷ್–ಸಾತ್ವಿಕ್

Published:
Updated:

ಬೆಂಗಳೂರು: ಅಗ್ರಶ್ರೇಯಾಂಕದ ಆಟಗಾರ ಆಯುಷ್ ಆರ್ ಶೆಟ್ಟಿ ಮತ್ತು ಸಾತ್ವಿಕ್ ಶಂಕರ್ ಅವರು ಇಲ್ಲಿ ನಡೆಯುತ್ತಿರುವ ರಾಜ್ಯ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ 15 ವರ್ಷದೊಳಗಿನವರ ಬಾಲಕರ ವಿಭಾಗದ ಫೈನಲ್‌ ಪ್ರವೇಶಿಸಿದ್ದಾರೆ. ‌

ಸೋಮವಾರ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಆಯುಷ್ ಶೆಟ್ಟಿ 21–9, 21–11ರಿಂದ ನಿಕೊಲಸ್ ನೇಥನ್ ರಾಜ್ ವಿರುದ್ಧ ಜಯಿಸಿದರು. ಎರಡನೇ ಶ್ರೇಯಾಂಕದ ಸಾತ್ವಿಕ್ 17–21, 21–16, 21–14 ರಿಂದ ತುಷಾರ್ ಸುವೀರ್ ವಿರುದ್ಧ ಜಯಿಸಿದರು.

15 ವರ್ಷದ ಬಾಲಕಿಯರ ವಿಭಾಗದ ಸೆಮಿಫೈನಲ್‌ನಲ್ಲಿ ಕಾರ್ಣಿಕಾಶ್ರೀ 21–19, 21–19 ರಿಂದ ಇಲೀಶಾ ಪೈ ವಿರುದ್ಧ ಜಯಿಸಿದರು. ಇನ್ನೊಂದು ಸೆಮಿಫೈನಲ್‌ನಲ್ಲಿ ಅಶಿತಾ ಸಿಂಗ್ 21–7, 21–15ರಿಂದ ಎಸ್. ಸ್ನೇಹಾ ವಿರುದ್ಧ ಗೆದ್ದರು.

13 ವರ್ಷದೊಳಗಿನ ಬಾಲಕರ ವಿಭಾಗದ ನಾಲ್ಕರ ಘಟ್ಟದಲ್ಲಿ ಅವಿ ಬಾಸಿಕ್ 19–21, 21–15, 21–10ರಿಂದ ಮಯೂಕ್ ಗೌಡ ವಿರುದ್ಧ ಗೆದ್ದರು. ಇನ್ನೊಂದು ಪಂದ್ಯದಲ್ಲಿ ಪ್ರಣವ್ ವೆಂಪತಿ 21–18, 21–18ರಿಂದ ಓಂ ಮಾಕಾ ವಿರುದ್ಧ ಜಯಿಸಿದರು.

ಬಾಲಕಿಯರ ವಿಭಾಗದಲ್ಲಿ; ರುಜುಲಾ ರಾಮು ಮತ್ತು ಎ.ಎಸ್. ಮೌನಿತಾ ಫೈನಲ್ ಪ್ರವೇಶಿಸಿದರು. ನಾಲ್ಕರ ಘಟ್ಟದಲ್ಲಿ ರುಜುಲಾ 21–13, 21–14ರಿಂದ ಅನುಷ್ಕಾ ಬರೈ ವಿರುದ್ಧ; ಮೌನಿತಾ 21–9, 20–22, 21–7ರಿಂದ ದಿಯಾ ಭೀಮಯ್ಯ ವಿರುದ್ಧ ಜಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !