ಗುರುವಾರ , ಏಪ್ರಿಲ್ 2, 2020
19 °C

70ರ ದಶಕದ ರಂಗಭೂಮಿ ನೆನಪು ಮೆಲುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 1970ರ ದಶಕದಲ್ಲಿ ವೃತ್ತಿ ರಂಗಭೂಮಿ ಕಟ್ಟಿದ ನೆನಪುಗಳನ್ನು ಮೆಲುಕು ಹಾಕುವ ಪ್ರಯತ್ನವೊಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ನಡೆಯಿತು.

ಬಿ.ವಿ. ಕಾರಂತ, ಪಿ.ಲಂಕೇಶ್, ಶ್ರೀರಂಗ, ನಾಗೇಶ್, ಸಿ.ಆರ್. ಸಿಂಹ ಅವರ ಒಡನಾಡಿಗಳಾಗಿದ್ದ 50 ಕ್ಕೂ ಹೆಚ್ಚು ಹಿರಿಯ ಕಲಾವಿದರ ಸಮ್ಮಿಲನ ಇಲ್ಲಿ ಏರ್ಪಟ್ಟಿತ್ತು.

ಮೋಹನ್‌ ರಾಂ ಎನ್‌.ಕೆ. ಅವರು 70 ದಶಕದ ನೆನಪುಗಳನ್ನು ದಾಖಲಿಸಿರುವ ‘ಕರ್ಟನ್‌ ಕಾಲ್‌ಗೆ ಲೈಟೇ ಬರಲಿಲ್ಲ’ ಪುಸ್ತಕ ಬಿಡುಗಡೆಯಾಗಿದ್ದು, ಇದರ ಕುರಿತು ಚರ್ಚಿಸುವ ನೆಪದಲ್ಲಿ ರಂಗಕರ್ಮಿಗಳು ಒಂದೆಡೆ ಕಲೆತಿದ್ದರು.

ಮೋಹನ್‌ ರಾಂ ಎನ್‌.ಕೆ. ಮಾತನಾಡಿ, ‘ರಂಗಭೂಮಿಯ ಕುತೂಹಲದ ಕತೆಗಳನ್ನು ಪುಸ್ತಕದಲ್ಲಿ ದಾಖಲಿಸುವ ಪ್ರಯತ್ನ ಮಾಡಿದ್ದೇನೆ. ಅಂದು ರಂಗಭೂಮಿಯಲ್ಲಿ ಅನಾಯಾಸವಾಗಿ ಅವಕಾಶಗಳು ಸಿಗುತ್ತಿದ್ದವು. ಯಾರೂ ಅಷ್ಟಾಗಿ ಶ್ರಮ ಹಾಕುವ ಅಗತ್ಯ ಇರಲಿಲ್ಲ. ಕಾಲವೇ ಎಲ್ಲವನ್ನೂ ಮಾಡಿಸಿತು’ ಎಂದು ಹೇಳಿದರು.

‘ಪ್ರಜಾವಾಣಿ’ಯ ಸಹಸಂಪಾದಕ ಬಿ.ಎಂ. ಹನೀಫ್ ಮಾತನಾಡಿ, ‘ಲಂಕೇಶ್ ಮತ್ತು ಕೆ. ರಾಮದಾಸ್ ಅವರೊಂದಿಗೆ ಸಾಕಷ್ಟು ಒಡನಾಟವಿತ್ತು. ಅವರೊಂದಿಗೆ ಹಲವು ಬಾರಿ ಜಗಳವಾಡಿದ್ದೂ ಉಂಟು, ಕಲಿತಿದ್ದೂ ಉಂಟು’ ಎಂದರು.

ನಿರ್ದೇಶಕ ಟಿ.ಎನ್. ಸೀತಾರಾಂ, ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್, ಮೇಕಪ್ ರಾಮಕೃಷ್ಣ, ಎನ್.ಎ. ಸೂರಿ, ಎಂ.ಎ. ಆನಂದ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು