ಗುರುವಾರ , ಆಗಸ್ಟ್ 13, 2020
23 °C
ಅಭಿವೃದ್ಧಿಯ ಮಾತು ಗೌಣ; ಟೀಕೆ, ಟ್ವೀಟಾಸ್ತ್ರಗಳದೇ ಪಾರುಪತ್ಯ

ವ್ಯಕ್ತಿಗತ ಟೀಕೆ, ವ್ಯಂಗ್ಯ, ನಿಂದನೆಯೇ ಪ್ರಚಾರ ವಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಭಾನುವಾರ ನಡೆಯಲಿದೆ. ಈ ಮೂಲಕ ಪ್ರಜಾಮತದ ಹಬ್ಬದ ಒಂದು ಹಂತದ ಪ್ರಕ್ರಿಯೆಗೆ ತೆರೆಬೀಳಲಿದೆ.

ಏಳು ಹಂತಗಳ ಸುದೀರ್ಘ ಚುನಾವಣೆಯಲ್ಲಿ, ಅಭಿವೃದ್ಧಿ ಮತ್ತು ದೇಶದ ಜ್ವಲಂತ ಸಮಸ್ಯೆಗಳು ಗೌಣವಾಗಿ, ವೈಯಕ್ತಿಕ ನಿಂದನೆಗಳೇ ಮುನ್ನೆಲೆಗೆ ಬಂದಿದ್ದವು. ಎಲ್ಲ ಪಕ್ಷಗಳೂ ಇಂಥ ನಿಂದನೆಗಳನ್ನು ಯಥೇಚ್ಛವಾಗಿ ಬಳಸಿವೆ. ವಿರೋಧಿಗಳ ಟೀಕೆಗೆ ಗತಿಸಿ ಹೋದ ನಾಯಕರಷ್ಟೇ ಅಲ್ಲ ದೇವರನ್ನೂ ಎಳೆದುತರಲಾಗಿತ್ತು.

ರಾಷ್ಟ್ರೀಯತೆ ಹಾಗೂ ದೇಶದ ಭದ್ರತೆಯ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದ ಮೋದಿ ಅವರು ತಮ್ಮನ್ನು ತಾವು ‘ಚೌಕೀದಾರ’ ಎಂದು ಕರೆದುಕೊಂಡರು. ರಾಹುಲ್‌ಗಾಂಧಿ ಅವರು ‘ಚೌಕೀದಾರನೇ ಕಳ್ಳ’ ಎಂದು ಟೀಕಿಸಿದರು.

ಪುಲ್ವಾಮಾ ದಾಳಿ, ಅದಕ್ಕೆ ಪ್ರತಿಯಾಗಿ ನಡೆಸಿದ ಬಾಲಾಕೋಟ್‌ ವಾಯುದಾಳಿಗಳೂ ಚುನಾವಣಾ ಪ್ರಚಾರದ ವಸ್ತುಗಳಾದವು. ಇದೇ ಮೊದಲಬಾರಿಗೆ ಎಂಬಂತೆ ಸೇನೆಯನ್ನೂ ಚುನಾವಣಾ ಪ್ರಚಾರಕ್ಕೆ ಎಳೆದುತರಲಾಯಿತು. ರಾಷ್ಟ್ರಪಿತ ಮಹಾತ್ಮಗಾಂಧಿ, ನಾಥೂರಾಂ ಗೋಡ್ಸೆ, ಮಾಜಿ ಪ್ರಧಾನಿಗಳಾದ ಜವಾಹರಲಾಲ್‌ ನೆಹರೂ, ಇಂದಿರಾಗಾಂಧಿ, ರಾಜೀವ್‌ ಗಾಂಧಿ ಮುಂತಾದವರೂ ಟೀಕೆಗಳಿಗೆ ವಸ್ತುವಾದರು.

ಕಾಂಗ್ರೆಸ್‌ ವಿರುದ್ಧ ಆರೋಪಗಳನ್ನು ಮಾಡುವಾಗ ಬಿಜೆಪಿ ಮುಖಂಡರು ನೆಹರೂ, ಇಂದಿರಾ ಗಾಂಧಿ ಅವರನ್ನೂ ಟೀಕಿಸಿದರು. ರಾಜೀವ್‌ಗಾಂಧಿ ‘ಭ್ರಷ್ಟಾಚಾರಿ ನಂ 1 ಆಗಿ ಸತ್ತರು’ ಎಂಬ ಮೋದಿ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಯಿತು.

ಪ್ರಚಾರದ ಕೊನೆಯ ಹಂತದಲ್ಲಿ ಗೋಡ್ಸೆ ಕುರಿತು ಬಿಜೆಪಿಯ ಕೆಲವು ನಾಯಕರು ನೀಡಿದ್ದ ಹೇಳಿಕೆಗಳು ಬಿಜೆಪಿಗೆ ಇರುಸುಮುರುಸು ಉಂಟುಮಾಡಿದವು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು