ಕರಾಟೆ ಮಾಸ್ಟರ್ ಸತೀಶರಾಜು

ಗುರುವಾರ , ಜೂನ್ 27, 2019
29 °C

ಕರಾಟೆ ಮಾಸ್ಟರ್ ಸತೀಶರಾಜು

Published:
Updated:
Prajavani

ಕರಾಟೆ ಎಂಬುದು ಒಂದು ತಪಸ್ಸು, ದೇಹ ಮತ್ತು ಮನಸ್ಸು ಎರಡನ್ನೂ ನಿಯಂತ್ರಣದಲ್ಲಿಟ್ಟುಕೊಂಡು ನಿರಂತರ ಸಾಧನೆ ಮಾಡುವ ಕಲೆ ಕರಾಟೆ. ಆತ್ಮರಕ್ಷಣೆ ಮತ್ತು ಆರೋಗ್ಯ ರಕ್ಷಣೆಗೆ ಅವಶ್ಯಕ.

ಆತ್ಮರಕ್ಷಣೆ ಮತ್ತು ಫಿಟ್‌ನೆಸ್‌ಗಾಗಿ ಬಾಲ್ಯದಲ್ಲಿ ಕರಾಟೆ ಕಲಿಯಲು ಆರಂಭಿಸಿದ ಮೈಸೂರಿನ ಸತೀಶರಾಜು ಇವತ್ತು ನೂರಾರು ಶಿಷ್ಯರಿಗೆ ಈ ಕಲೆಯನ್ನು ಧಾರೆಯೆರೆಯುತ್ತಿದ್ದಾರೆ.

ಅವರ ಶಿಷ್ಯ ಬಳಗದಲ್ಲಿ ವಿದ್ಯಾರ್ಥಿಗಳು, ಮಹಿಳೆಯರು, ಪೊಲೀಸ್ ಅಧಿಕಾರಿಗಳು, ಸರ್ಕಾರಿ ಸಿಬ್ಬಂದಿಗಳು ಇದ್ದಾರೆ. ವಯಸ್ಸಿನ ಮಿತಿ ಇಲ್ಲ. ಎಲ್ಲರಲ್ಲೂ ಕಲಿಕೆಯ ಆಸಕ್ತಿ ಬಿತ್ತಿ ಬೆಳೆಯುವಲ್ಲಿ ಗ್ರ್ಯಾಂಡ್‌ಮಾಸ್ಟರ್‌ ಸತೀಶರಾಜು ಯಶಸ್ವಿಯಾಗಿದ್ದಾರೆ. 

ಮೈಸೂರಿನಲ್ಲಿ ಕರಾಟೆಗೆ ಹುರುಪು ತುಂಬಿದ ಸತೀಶರಾಜು ಮೂಲತಃ ಬೆಂಗಳೂರಿನವರು. ರಾಮರಾಜು ಚಾಮಮ್ಮ ದಂಪತಿಗಳ ಕಿರಿಯ ಪುತ್ರ ಪ್ರಾಥಮಿಕ ಶಾಲೆ ಹಂತದಲ್ಲಿಯೇ ಕ್ರೀಡೆಗಳಲ್ಲಿ ಪ್ರಶಸ್ತಿ ಗಳಿಸಿದರು. 1997ರಲ್ಲಿ ಶಿವಮೊಗ್ಗದಲ್ಲಿ ಪ್ರೌಢಶಿಕ್ಷಣ ಪಡೆಯುವ ಸಂದರ್ಭದಲ್ಲಿ ಶೋಟೋಕಾನ್ ಕರಾಟೆ ಇಂಟರ್ ನ್ಯಾಷನಲ್ ಫೆಡರೇಷನ್ ಮುಖ್ಯಸ್ಥರಾದ ಕೆ.ವಿ. ಸುಬ್ರಹ್ಮಣ್ಯ ಅವರ ಬಳಿ ಕರಾಟೆ ತರಬೇತಿ ಪಡೆದರು.

18ನೇ ವಯಸ್ಸಿನಲ್ಲಿ ಬ್ಯಾಕ್‌ಬೆಲ್ಟ್ ಗಳಿಸಿದರು. ಈ ಸಾಧನೆ ಮಾಡಿದ ಕರ್ನಾಟಕದ ಅತಿ ಕಿರಿಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

1988-89ರಲ್ಲಿ ವಿಶ್ವಕರಾಟೆ ಫೆಡೆರೇಷನ್ ಸದಸ್ಯತ್ವ, 2000ರಲ್ಲಿ ಅಖಿಲ ಭಾರತ ಕರಾಟೆ ಫೆಡರೇಷನ್ ಅಧ್ಯಕ್ಷರಾದರು. 2005ರಲ್ಲಿ ಮಲೇಷಿಯಾದ ಕೌಲಾಲಂಪುರದಲ್ಲಿ ನಡೆದ ಕರಾಟೆ ಶಿಬಿರದಲ್ಲಿ ಭಾರತದಿಂದ ಸತೀಶರಾಜು ಅಲ್ಲಿಯ ಕರಾಟೆಯ ಕ್ರೀಡಾಪಟುಗಳಿಗೆ ತರಬೇತುದಾರರಾಗಿದ್ದರು. 1987ರಿಂದ 1990 ರವರೆಗೆ ಪಂಜಾಬ್, ಆಂಧ್ರಪ್ರದೇಶ, ದೆಹಲಿ, ತಮಿಳುನಾಡುಗಳಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಟೂರ್ನಿಗಳಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇವರಿಂದ ಕಲಿತ ಹಲವಾರು ವಿದ್ಯಾರ್ಥಿಗಳು ಹಲವಡೆ ಕರಾಟೆ ಮಾಸ್ಟರ್‌‌ಗಳಾಗಿದ್ದಾರೆ.

ಇವರ ಸಾಧನೆಯನ್ನು ಗುರುತಿಸಿದ ಮೈಸೂರಿನ ಪೊಲೀಸ್ ವರಿಷ್ಠಾಧಿಕಾರಿ ಡಿ.ಎನ್.ಮುನಿಕೃಷ್ಣ 1985ರಲ್ಲಿ ಮೈಸೂರಿನ ಚೆನ್ನಯ್ಯ ಅಖಾಡದಲ್ಲಿ ಕರಾಟೆ ತರಬೇತಿ ನೀಡಲು ಆಹ್ವಾನಿಸಿದರು.

ಮೈಸೂರಿನ ಕರಾಟೆ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿಯಲ್ಲಿರುವ (ಕೆ.ಪಿ.ಎ) ಪೊಲೀಸ್ ಸಬ್ ಇನ್‍ಸ್ಪೆಕ್ಟರ್, ಹಾಗೂ ಪ್ರೊಬೆಷನರಿ ಡಿವೈಎಸ್‍ಪಿ ಮತ್ತು (ಡಿ.ಎ.ಆರ್) ಮಹಿಳಾ ಪೊಲೀಸ್ ಸಿಬಂದಿಗಳಿಗೆ ತರಬೇತಿ ನೀಡುತ್ತಿದ್ದಾರೆ. 

ಸತೀಶ್‍ರಾಜು ಅವರ ಸಾಧನೆಯನ್ನು ಗಮನಿಸಿದ್ದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಸುಮಾರು 25 ವರ್ಷಗಳ ಹಿಂದೆ ತಮ್ಮ ವಸ್ತು ಸಂಗ್ರಾಹಾಲಯದ ಭದ್ರತಾಧಿಕಾರಿಯನ್ನಾಗಿ ನೇಮಕ ಮಾಡಿಕೊಂಡರು.

ಅಂದಿನಿಂದ ಅವರು ಅರಮನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಮಾರ್ಗದರ್ಶನ ಪಡೆದ 16 ಕರಾಟೆ ಪಟುಗಳು ಮೈನವಿರೇಳಿಸುವ ಸಾಹಸ ಪ್ರದರ್ಶಸಿ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸೇರ್ಪಡೆಯಾಗಿದ್ದಾರೆ. ಇದರ ಜೊತೆಯಲ್ಲಿ ಇವರ ಮಕ್ಕಳಾದ ಅಭಿಷೇಕ್, ಧಾಮಿನಿ, ತೇಜಸ್ ಅವರೂ  ಕರಾಟೆ ಕಲೆಯನ್ನು ಪ್ರದರ್ಶಿಸಿ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸೇರಿದ್ದಾರೆ.

ಇವರ ಸಾಧನೆಗಾಗಿ ಕೇರಳ ಸರಕಾರದಿಂದ ಕೇರಳ ಕೇಸರಿ ಪ್ರಶಸ್ತಿ, ಕರ್ನಾಟಕದಿಂದ ಹಂಸರತ್ನ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಈಚೆಗೆ ಸತೀಶ್ ರಾಜು ಅವರಿಗೆ ನ್ಯಾಷನಲ್ ವರ್ಚುವಲ್ ಯೂನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಷನ್ ವತಿಯಿಂದ ಗೌರವಿಸಲಾಯಿತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !