ಬೆನ್ನೆಲುಬು, ಕಿಬ್ಬೊಟ್ಟೆಯ ಆರೋಗ್ಯಕ್ಕೆ ಮಂಡಲಾಸನ

ಗುರುವಾರ , ಜೂನ್ 20, 2019
27 °C

ಬೆನ್ನೆಲುಬು, ಕಿಬ್ಬೊಟ್ಟೆಯ ಆರೋಗ್ಯಕ್ಕೆ ಮಂಡಲಾಸನ

Published:
Updated:
Prajavani

ಮಂಡಲ ಎಂದರೆ ಚಕ್ರ, ವೃತ್ತ ಅಥವಾ ಸುತ್ತು ಎಂದರ್ಥ. ತಲೆಯು ಶೀರ್ಷಾಸನದಲ್ಲಿರುವಂತೆ ಕೈಗಳ ನೆರವು ಪಡೆದು ಒಂದೆಡೆ ನೆಲೆಸಿದ್ದು, ಕಾಲುಗಳು ಚಾಚಿಟ್ಟು ಪಾದಗಳು ನೆಲಕ್ಕೆ ತಾಗಿ ತಲೆಯನ್ನು ಕೇಂದ್ರವಾಗಿಸಿ ವೃತ್ತಾಕಾರವಾಗಿ ದೇಹವನ್ನು ತಿರುಗಿಸುವುದೇ ಆಗಿದೆ. ಆದ್ದರಿಂದ ಯೋಗ ಅಭ್ಯಾಸದಲ್ಲಿ ಇದಕ್ಕೆ ಮಂಡಲಾಸನ ಎಂದು ಹೆಸರಿಸಲಾಗಿದೆ.

ಅಭ್ಯಾಸಕ್ರಮ

ಕಾಲುಗಳನ್ನು ಚಾಚಿಟ್ಟು ಬೆನ್ನನ್ನು ನೆಲಕ್ಕೊರಗಿಸಿ ಮಲಗಿ. ಮೊಳಕೈಗಳನ್ನು ಮಡಚಿ ತಲೆಯ ಮೇಲ್ಭಾಗಕ್ಕೆ ತಂದು ಅಂಗೈಗಳನ್ನು ಭುಜದ ಹಿಂಬದಿಗೆ ನೆಲಕ್ಕೂರಿ(ಬೆರಳುಗಳು ಬೆನ್ನಿನತ್ತ ಒಳಕ್ಕೆ ಮುಖಮಾಡಿರಲಿ). ಮಂಡಿಗಳನ್ನು ಮಡಚಿ ಪಾದಗಳನ್ನು ಒಳಕ್ಕೆ ತಂದು ಪೃಷ್ಠ ಹಾಗೂ ಸೊಂಟದ ಪಕ್ಕಕ್ಕಿರಿಸಿ.

ನಂತರ, ಉಸಿರನ್ನು ಹೊರಹಾಕುತ್ತಾ ಕೈಗಳಿಗೆ ಭಾರವನ್ನು ಹಾಕಿ ಸೊಂಟ ಹಾಗೂ ಮುಂಡವನ್ನು ಮೇಲೆತ್ತಿ. ನೆತ್ತಿಯನ್ನು ನೆಲಕ್ಕೂರಿಟ್ಟು, ಸಮತೋಲನ ಕಾಯ್ದು, ಎಡ ಮತ್ತು ಬಲ ಮೊಳಕೈಗಳನ್ನು ಒಂದೊಂದಾಗಿ ನೆಲಕ್ಕೂರಿ ಅಂಗೈಗಳನ್ನು ತಲೆಯ ಹಿಂಬದಿಗೆ ತಂದು ಬೆರಳುಗಳನ್ನು ಹೆಣೆದು ತಲೆಗೆ ಆಸರೆಯಾಗುವಂತೆ ಹೊಂದಿಸಿಡಿ(ಕೈಗಳ ಆಸರೆ ಪಡೆದ ನೆತ್ತಿಯು ನೆಲಕ್ಕೊರಗಿ ಶೀರ್ಷಾಸನದ ಮೊದಲ ಹಂತದ ಸ್ಥಿತಿಯನ್ನು ಹೊಂದುತ್ತದೆ). ಪಾದಗಳನ್ನು ಜೋಡಿಸಿ ಕಾಲುಗಳನ್ನು ನೇರವಾಗಿಸಿ ಮುಂದಕ್ಕೆ ಚಾಚಿ.

ಬಳಿಕ, ಸಾಮಾನ್ಯ ಉಸಿರಾಟ ನಡೆಸುತ್ತಾ ತಲೆಯನ್ನು ಕೇಂದ್ರ ಸ್ಥಾನದಲ್ಲಿ ಅತ್ತಿತ್ತ ಕದಲದಂತೆ ಭದ್ರಗೊಳಿಸಿ, ಪಾದಗಳಿಗೆ ಚಲನೆಯನ್ನು ನೀಡಿ ದೇಹವನ್ನು ವೃತ್ತಾಕಾರವಾಗಿ ಬಲಕ್ಕೆ ತಿರುಗಿಸಿ. ಕಾಲುಗಳು ತಲೆ ಸಮಾನಾಂತರವಾಗಿ ಬಲ ಪಕ್ಕಕ್ಕೆ ಬಂದಾಗ ಎಡಗಾಲನ್ನು ಮೇಲ್ಭಾಗದಿಂದ ತರುತ್ತಾ ಸೊಂಟವನ್ನು ಬಲಕ್ಕೆ ತಿರುಗಿಸಿ. ಈ ಹಂತದಲ್ಲಿ ಹೊಟ್ಟೆಯು ನೆಲದತ್ತ ಮುಖಮಾಡಿದ್ದು, ಪಾದಗಳು ಮುಖದ ಮುಂಭಾಗ ಚಲನೆಯನ್ನು ಹೊಂದಿ, ಎಡ ಬದಿಗೆ ಬರುತ್ತವೆ.

ಈ ಹಂತದಲ್ಲಿ ಬಲಗಾಲನ್ನು ಮೇಲ್ಭಾಗದಿಂದ ತರುತ್ತಾ ಸೊಂಟವನ್ನು ಎಡಕ್ಕೆ ತಿರುಗಿಸಿ, ಪಾದಗಳಿಗೆ ಚಲನೆಯನ್ನು ನೀಡಿ. ಚಲನೆ ಆರಂಭಿಸಿದ ಸ್ಥಳಕ್ಕೆ ಬರುವವರೆಗೆ ಮುಂದುವರೆದು ಒಂದು ಸುತ್ತು ಪೂರ್ಣಗೊಳಿಸಿ.

ಅವರೋಹಣ ಮಾಡುವಾಗ ಕೈಗಳ ನೆರವಿನಿಂದ ತಲೆಯನ್ನು ಬಿಡಿಸಿಟ್ಟು, ಬೆನ್ನನ್ನು ಬೆನ್ನನ್ನು ನೆಲಕ್ಕೊರಗಿಸಿ ವಿರಮಿಸಿ. ಬಳಿಕ ವಿರುದ್ಧ ದಿಕ್ಕಿನಲ್ಲಿ ಅಭ್ಯಾಸ ನಡೆಸಿ.

* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಇವನ್ನೂ ಓದಿ....

ವಿಶ್ವ ಯೋಗ ದಿನ | ಆರೋಗ್ಯಯುತ ವಿಶ್ವಕ್ಕೆ ಯೋಗ

ಯೋಗ ಶುರು ಮಾಡೋಣ...

ಯೋಗಾಸನಕ್ಕೂ, ವ್ಯಾಯಾಮಕ್ಕೂ ಇದೆ ವ್ಯತ್ಯಾಸ!

ಸೂರ್ಯ ನಮಸ್ಕಾರ ಕಲಿಯೋಣ ಬನ್ನಿ...

ಚೈತನ್ಯ ತುಂಬುವ ಪ್ರಾಣಾಯಾಮ

ಸಮಚಿತ್ತದ ಬೇರು ‘ಧ್ಯಾನ’

‘ಯೋಗ’ ಅರಿತರೆ 100 ವರ್ಷ

ಯೋಗಮಯವಾದ ಮೈಸೂರು ಅರಮನೆ

ಯೋಗಾಸನಕ್ಕೂ, ವ್ಯಾಯಾಮಕ್ಕೂ ಇದೆ ವ್ಯತ್ಯಾಸ!​

ಯೋಗಕ್ಕೂ ಮುನ್ನ ಮಾಡಿ ವಾರ್ಮ್‌ ಅಪ್​

ಸೂರ್ಯ ನಮಸ್ಕಾರ ಏಕೆ?​

ಸೂರ್ಯ ನಮಸ್ಕಾರದ ಲಾಭಗಳು

ಸೂರ್ಯ ನಮಸ್ಕಾರ ಕಲಿಯೋಣ ಬನ್ನಿ...​1

* ಸೂರ್ಯ ನಮಸ್ಕಾರ ಅಭ್ಯಾಸ ಕ್ರಮ 2

ಮಕ್ಕಳ ಗೂನುಬೆನ್ನು ನಿವಾರಣೆಗೆ ಆಸನಗಳು

ಬೆನ್ನೆಲುಬು, ಕಿಬ್ಬೊಟ್ಟೆಯ ಆರೋಗ್ಯಕ್ಕೆ ಮಂಡಲಾಸನ

ಹೃದಯಕ್ಕೆ ಮೃದು ಅಂಗಮರ್ಧನ ನೀಡುವ ಕಪೋತಾಸನ

ಮಂಡಿ, ಕೀಲು ನೋವು ನಿವಾರಣೆಗೆ ಘೇರಂಡಾಸನ

ದುರ್ಗಂಧ ಶ್ವಾಸ ತಡೆಗೆ ಆಸನಗಳು

ಹೊಟ್ಟೆಯಲ್ಲಿನ ದುರ್ಮಾಂಸ ನಿವಾರಣೆಗೆ ಆಸನಗಳು

ಭುಜ - ಕಾಲುಗಳ ಬಲಕ್ಕೆ ವೀರ ಭದ್ರಾಸನ

ಜನನೇಂದ್ರಿಯ ಆರೋಗ್ಯ ಸುಸ್ಥಿತಿಗೆ ಸಮಕೋನಾಸನ

ಜ್ಞಾಪಕ ಶಕ್ತಿ ಹೆಚ್ಚಿಸುವ ಆಸನಗಳು

ಬೇಸಿಗೆಯಲ್ಲಿ ದೈಹಿಕ ಬಳಲಿಕೆ ನಿವಾರಣೆ ಹೇಗೆ?

ಕುದುರೆ ಸವಾರಿಗೆ ಸಹಕಾರಿ ಉತ್ಕಟಾಸನ

ಮನೋಬಲ ವೃದ್ಧಿಸುವ ಊರ್ಧ್ವ ಧನುರಾಸನ

ಮಹಿಳೆಯರೇ, ಯೋಗಾಭ್ಯಾಸಕ್ಕೆ ಮುನ್ನ ಈ ಮುನ್ನೆಚ್ಚರಿಕೆ ಗಮನಿಸಿಕೊಳ್ಳಿ

ಜೀರ್ಣಶಕ್ತಿ ವೃದ್ಧಿಗೆ ಶಲಭಾಸನ

ತಾರುಣ್ಯ ವೃದ್ಧಿಗೆ ಧನುರಾಸನ ಹಂತಗಳು

ಹೊಟ್ಟೆನೋವು ನಿವಾರಕ ಧನುರಾಸನ

ಥೈರಾಯ್ಡ್‌, ಉಸಿರಾಟ ಸಮಸ್ಯೆ ನಿವಾರಕ ಮತ್ಸ್ಯಾಸನ

ಚಳಿ ತಡೆವ ಯೋಗನಿದ್ರಾಸನ

ಸಕ್ಕರೆ ಕಾಯಿಲೆಗೆ ರಾಮಬಾಣ ಮಯೂರಾಸನ

ಸರ್ವಾಂಗಾಸನದ ವಿವಿಧ ಹಂತಗಳ ಪರಿಚಯ

ಸರ್ವ ರೋಗಗಳಿಗೂ ಮದ್ದು ಸರ್ವಾಂಗಾಸನ

ದೈಹಿಕ ಸದೃಢತೆ ನೀಡುವ ಸರ್ವಾಂಗಾಸನ ಹಂತಗಳು

ಸರ್ವಾಂಗಾಸನದ ಹಂತಗಳು

ಅಂಧ ಮಕ್ಕಳ ಯೋಗಾಯೋಗ !

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !