ಮಂಗಳವಾರ, 3–6–1969
ಹೈದರಾಬಾದ್ – ವಾರಂಗಲ್ನಲ್ಲಿ ಗೋಲಿಬಾರ್; 4 ಸಾವು
ಹೈದರಾಬಾದ್, ಜೂನ್ 2– ತೆಲಂಗಾಣ ಚಳವಳಿ ಸಂಬಂಧದಲ್ಲಿ ವಾರಂಗಲ್ ಮತ್ತು ಹೈದರಾಬಾದ್ಗಳಲ್ಲಿ ಇಂದು ಹಿಂಸಾತ್ಮಕ ಗಲಭೆಗಳು ಸಂಭವಿಸಿದಾಗ ನಡೆದ ಗೋಲಿಬಾರ್ನಲ್ಲಿ ನಾಲ್ವರು ಮತ್ತು ಇರಿತದ ಪ್ರಕರಣಗಳಲ್ಲಿ ಒಬ್ಬ, ಒಟ್ಟು ಐವರು ಸತ್ತು, ಹತ್ತೊಂಬತ್ತು ಮಂದಿ ಗಾಯಗೊಂಡರು.
ಲಾಠಿ ಪ್ರಹಾರ ಮತ್ತು ಕಲ್ಲೆಸೆತದ ಪ್ರಕರಣಗಳಲ್ಲಿಯೂ ಅನೇಕ ಮಂದಿ ಗಾಯಗೊಂಡಿದ್ದಾರೆ.
ಸೆಪ್ಟೆಂಬರ್ನಲ್ಲಿ ಭಾರತಕ್ಕೆ ಗಡಿನಾಡಿನ ಗಾಂಧಿ
ನವದೆಹಲಿ, ಜೂನ್ 2– ಮಹಾತ್ಮ ಗಾಂಧಿಯವರ 100ನೇ ಜನ್ಮದಿನೋತ್ಸವದಲ್ಲಿ ಭಾಗವಹಿಸಲು ಗಡಿನಾಡಿನ ಗಾಂಧಿ ಖಾನ್ ಅಬ್ದುಲ್ ಗಫಾರ್ ಖಾನ್ ಅವರು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಭಾರತಕ್ಕೆ ಭೇಟಿ ಕೊಡುವ ನಿರೀಕ್ಷೆಯಿದೆ.
ಫ್ರೆಂಚ್ ನೆರವಿನಿಂದ ಕ್ಷಿಪಣಿ ತಯಾರಿಕೆ
ನವದೆಹಲಿ, ಜೂನ್ 2– ಫ್ರೆಂಚ್ ಸರ್ಕಾರಿ ಉದ್ಯಮವೊಂದರ ಸಹಕಾರದಿಂದ ಭಾರತದಲ್ಲಿ ವಿವಿಧ ಶ್ರೇಣಿಯ ಕ್ಷಿಪಣಿ
ಗಳನ್ನು ತಯಾರಿಸುವ ಬಗ್ಗೆ ಮಾತುಕತೆಗಳು ಬಹುಮಟ್ಟಿಗೆ ಮುಕ್ತಾಯವಾಗಿವೆಯೆಂದು ಗೊತ್ತಾಗಿದೆ.
ವಾಯು ಪ್ರದೇಶದಿಂದ ಭೂಮಿಗೆ, ಭೂಮಿಯ ಒಂದು ಕಡೆಯಿಂದ ಇನ್ನೊಂದು ಕಡೆಗೆ, ನೆಲದಿಂದ ನೀರಿಗೆ ಮತ್ತು ನೀರಿನಿಂದ ನೆಲಕ್ಕೆ ಪ್ರಯೋಗಿಸಬಹುದಾದ ನಾಲ್ಕು ಬಗೆಯ ಕ್ಷಿಪಣಿಗಳನ್ನು ಈ ಫ್ರೆಂಚ್ ಸಹೋದ್ಯಮ ಸಂಸ್ಥೆ ನೋರ್ಡ್ ಏವಿಯೇಷನ್ ತಯಾರಿಸುತ್ತದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.