ಶನಿವಾರ, ಜುಲೈ 31, 2021
28 °C
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಉದ್ಯೋಗಾವಕಾಶ

ರಸ್ತೆ ಸಾರಿಗೆ : 3307 ಹುದ್ದೆ ನೇಮಕಾತಿಗೆ ಅನುಮತಿ: ಹೆಬ್ಬಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ’ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿಯಿರುವ 3,307 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರದಿಂದ ಅನಮತಿ ದೊರಕಿದೆ’ ಎಂದು ಸಂಸ್ಥೆ ಅಧ್ಯಕ್ಷ ಶಿವರಾಮ್ ಹೆಬ್ಬಾರ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2,555 ಚಾಲಕರು, 413 ನಿರ್ವಾಹಕರು, 259 ಚಾಲಕ/ನಿರ್ವಾಹಕರು ಹಾಗೂ 80 ಸಹಾಯಕ ಸಂಚಾರ ನಿರೀಕ್ಷಕರ ನೇಮಕಾತಿ ಶೀಘ್ರವೇ ಆರಂಭಿಸಲಾಗುವುದು ಎಂದರು.

ಪ್ರತಿದಿನ ಸಂಸ್ಥೆಯ ಆದಾಯ ₹5.70 ಕೋಟಿ ಇದ್ದರೆ, ಖರ್ಚು ₹6.30 ಕೋಟಿಯಿದೆ. ಪ್ರತಿ ವರ್ಷ ಅಂದಾಜು 4.95 ಲಕ್ಷ ವಿದ್ಯಾರ್ಥಿಗಳು ಬಸ್‌ ಪಾಸ್‌ ಪಡೆಯುತ್ತಾರೆ. 5 ವರ್ಷಗಳ ಬಸ್‌ ಪಾಸ್‌ ರಿಯಾಯ್ತಿಯ ₹751 ಕೋಟಿ ಮೊತ್ತವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ.

ಅದನ್ನು ಬಿಡುಗಡೆ ಮಾಡಿದರೆ ಸಂಸ್ಥೆಯ ಅಭಿವೃದ್ಧಿಗೆ ಅನುಕೂಲವಾಗಲಿದೆ. ಅಂತರ್ ನಿಗಮ ವರ್ಗಾವಣೆಯ ಸಾಧಕ–ಬಾಧಕ ಕುರಿತಂತೆ ಅಧ್ಯಯನ ಮಾಡಲು ಸಮಿತಿ ರಚಿಸಲಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು