ಶನಿವಾರ, ಸೆಪ್ಟೆಂಬರ್ 18, 2021
21 °C

ಯೋಗ ದಿನಾಚರಣೆ ತಾಲೀಮು: ಸಂಚಾರ ಬದಲಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ತಾಲೀಮು ರೇಸ್‍ಕೋರ್ಸ್ ಆವರಣದಲ್ಲಿ ಜೂನ್ 16ರಂದು ನಡೆಯಲಿರುವುದರಿಂದ ಇದರ ಸುತ್ತಮುತ್ತಲಿನ ರಸ್ತೆ ಸಂಚಾರವನ್ನು ಅಂದು ಬೆಳಿಗ್ಗೆ 5 ಗಂಟೆಯಿಂದ 10 ಗಂಟೆಯವರೆಗೆ ಮಾರ್ಪಾಟು ಮಾಡಲಾಗಿದೆ.

ನಂಜನಗೂಡು ರಸ್ತೆಯಲ್ಲಿ ಜೆಎಸ್‍ಎಸ್ ಕಾಲೇಜು ಜಂಕ್ಷನ್‍ನಿಂದ-ಟ್ರಕ್ ಟರ್ಮಿನಲ್ ರಸ್ತೆ ಮೂಲಕ ರೇಸ್‍ಕೋರ್ಸ್ ವೃತ್ತದವರೆಗೆ, ಕುರುಬರಹಳ್ಳಿ ವೃತ್ತದಿಂದ-ಲಲಿತಮಹಲ್ ರಸ್ತೆಯಲ್ಲಿ ರೇಸ್‍ಕೋರ್ಸ್ ವೃತ್ತದವರೆಗೆ, ಎಂ.ಜಿ.ರಸ್ತೆಯಲ್ಲಿ ನಂಜನಗೂಡು ರಸ್ತೆ ಅಂಡರ್‍ಬ್ರಿಡ್ಜ್ ಜಂಕ್ಷನ್‍ನಿಂದ ರೇಸ್‍ಕೋರ್ಸ್ ವೃತ್ತದವರೆಗೆ ಯೋಗ ಪೂರ್ವಭ್ಯಾಸದಲ್ಲಿ ಭಾಗವಹಿಸುವ ಯೋಗಪಟುಗಳ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳು ಸಂಚರಿಸುವಂತಿಲ್ಲ.

ಸಂಚರಿಸಬೇಕಾದ ಬದಲಿ ಮಾರ್ಗಗಳು:
ನಂಜನಗೂಡು ರಸ್ತೆಯಿಂದ ಜೆಎಸ್‍ಎಸ್ ಕಾಲೇಜು ಜಂಕ್ಷನ್‍ನಿಂದ-ಟ್ರಕ್ ಟರ್ಮಿನಲ್ ರಸ್ತೆ ಮೂಲಕ ರೇಸ್‍ಕೋರ್ಸ್ ವೃತ್ತದವರೆಗೆ. ಸಂಚರಿಸುವ ವಾಹನಗಳು ಜೆಎಸ್‍ಎಸ್ ಕಾಲೇಜು ಜಂಕ್ಷನ್‍ನಿಂದ ನಂಜನಗೂಡು ರಸ್ತೆಯಲ್ಲಿ ಮುಂದುವರಿದು ಮುಂದೆ ಸಾಗಬೇಕು.

ಲಲಿತಮಹಲ್ ರಸ್ತೆಯಲ್ಲಿ ಕುರುಬರಹಳ್ಳಿ ವೃತ್ತದಿಂದ ರೇಸ್‍ಕೋರ್ಸ್ ವೃತ್ತದ ಕಡೆಗೆ ಸಾಗುತ್ತಿದ್ದ ವಾಹನಗಳು ಕುರುಬರಹಳ್ಳಿ ವೃತ್ತದಲ್ಲಿ ಬಲಕ್ಕೆ ತಿರುಗಿ ವಾಯುವಿಹಾರ ರಸ್ತೆ ಮೂಲಕ ಎಂಎಂ ರಸ್ತೆ ತಲುಪಿ ಮುಂದೆ ಸಾಗಬೇಕು.

ಮಿರ್ಜಾ ರಸ್ತೆಯಿಂದ ಮೃಗಾಲಯದ ಕಡೆಗೆ ಸಾಗುತ್ತಿದ್ದ ವಾಹನಗಳು ನೇರವಾಗಿ ಮಿರ್ಜಾ ರಸ್ತೆಯಲ್ಲಿ ಸಾಗಿ ನಜರ್‍ಬಾದ್ ವೃತ್ತವನ್ನು ತಲುಪಿ ಮುಂದೆ ಸಾಗಬೇಕು.

ಕೊಳ್ಳೇಗಾಲ-ಟಿಎನ್.ಪುರ ಕಡೆಗೆ ಸಂಚರಿಸಬೇಕಾದ ಕೆಎಸ್‍ಆರ್‍ಟಿಸಿ ಬಸ್ಸುಗಳು ಹಾರ್ಡಿಂಜ್ ವೃತ್ತ ಮಿರ್ಜಾ ರಸ್ತೆ-ವಸಂತಮಹಲ್ ಜಂಕ್ಷನ್ - ನಜರ್‍ಬಾದ್ - ಎಂ.ಎಂ.ರಸ್ತೆ - ವಾಯುವಿಹಾರ ಮಾರ್ಗ - ಕುರುಬರಹಳ್ಳಿವೃತ್ತ-ಎಡತಿರುವು ಲಲಿತಮಹಲ್ ರಸ್ತೆ ತಲುಪಬೇಕು.

ವಾಹನ ನಿಲುಗಡೆ ಸ್ಥಳಗಳು:
ಕಾರಂಜಿ ಕೆರೆ, ಎಟಿಐ ಆವರಣದಲ್ಲಿ, ಸರ್ಕಸ್ ಮೈದಾನ, ವಸ್ತುಪ್ರದರ್ಶನದ ಆವರಣ , ಮಾಲ್ ಆಫ್ ಮೈಸೂರು ಪಾರ್ಕಿಂಗ್ ಸ್ಥಳ, ದೊಡ್ಡಕೆರೆ ಫುಟ್‍ಬಾಲ್ ಮೈದಾನ, ರಾಜಹಂಸ ಜಂಕ್ಷನ್‍ನಿಂದ ನಂಜನಗೂಡು ರಸ್ತೆಯಲ್ಲಿ ಮಂಟಪದವರೆಗೆ, ಜೆಎಸ್‍ಎಸ್ ಕಾಲೇಜು ಆವರಣ, ಚಾಮುಂಡಿಬೆಟ್ಟದ ಪಾದದ ಬಳಿ, ನಗರ ಸಶಸ್ತ್ರ ಮೀಸಲು ಪಡೆ ಕಚೇರಿ (ಸಿಎಆರ್) ಆವರಣದಲ್ಲಿ ವಾಹನ ನಿಲುಗಡೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು