ಡಿಕ್ರಿ ಇದೆ ಎಂದಾಕ್ಷಣ ತೆಪ್ಪಗೆ ಕೂರುತ್ತೀರಾ?

ಬುಧವಾರ, ಜೂನ್ 26, 2019
24 °C
ಬಿಬಿಎಂಪಿ ವಿರುದ್ಧ ಹೈಕೋರ್ಟ್ ಅಸಮಾಧಾನ

ಡಿಕ್ರಿ ಇದೆ ಎಂದಾಕ್ಷಣ ತೆಪ್ಪಗೆ ಕೂರುತ್ತೀರಾ?

Published:
Updated:

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸ್ಥಿರಾಸ್ತಿಗೆ ಸಂಬಂಧಿಸಿದ ತಕರಾರುಗಳಲ್ಲಿ, ಸಿವಿಲ್ ಕೋರ್ಟ್ ಡಿಕ್ರಿಗಳನ್ನು ಏಕೆ ಮೇಲ್ಮನವಿ ಮೂಲಕ ಪ್ರಶ್ನಿಸುತ್ತಿಲ್ಲ' ಎಂದು ಹೈಕೋರ್ಟ್, ಬಿಬಿಎಂಪಿ ವಿರುದ್ಧ ಅತೃಪ್ತಿವ್ಯಕ್ತಪಡಿಸಿದೆ.

‘ಮಲ್ಲೇಶ್ವರ ವ್ಯಾಪ್ತಿಯಲ್ಲಿರುವ ಉಭಯ ವೇದಾಂತ ಪ್ರವರ್ತನಾ ಸಭಾ ಬೈ–ಲಾ ಉಲ್ಲಂಘಿಸಿ ತನ್ನ ವಶದಲ್ಲಿರುವ ಕಟ್ಟಡವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿದೆ’ ಎಂದು ಆಕ್ಷೇಪಿಸಿ ‘ಮಲ್ಲೇಶ್ವರಂ ನಿವಾಸಿಗಳ ಸಂಘ’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಹಾಗೂ ನ್ಯಾಯಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ಕೆ.ಎನ್‌.ಪುಟ್ಟೇಗೌಡ ಅವರು, ‘ವಿವಾದಿತ ಪ್ರದೇಶವು ಉಭಯ ವೇದಾಂತ ಪ್ರವರ್ತನಾ ಸಭಾದ ವಶದಲ್ಲಿದ್ದು ಸಿವಿಲ್‌ ಕೋರ್ಟ್‌ನಲ್ಲಿ ಡಿಕ್ರಿ
ಹೊಂದಿರುತ್ತದೆ’ ಎಂದು ಉತ್ತರಿಸಿದರು.

ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಓಕಾ ಅವರು, ‘ಬಿಬಿಎಂಪಿ ಅಧೀನಕ್ಕೆ ಒಳಪಟ್ಟ ಸ್ಥಿರಾಸ್ತಿಗಳ ತಕರಾರುಗಳಲ್ಲಿ ಬೈ–ಲಾ ಉಲ್ಲಂಘಿಸಿದ ಅಥವಾ ಒತ್ತುವರಿ ಮಾಡಿದ ಪ್ರಕರಣಗಳಲ್ಲಿ ಅಧಿಕಾರಿಗಳು ಯಾಕೆ ಸರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ, ಸಿವಿಲ್ ಕೋರ್ಟ್ ಡಿಕ್ರಿ ಇದೆ ಎಂದಾಕ್ಷಣ ನಿಮ್ಮ ಕಾನೂನು ಕೋಶ ತೆಪ್ಪಗಾಗಿಬಿಡುತ್ತದೆಯಲ್ಲವೇ, ಇಂತಹ ಡಿಕ್ರಿಗಳ ವಿರುದ್ಧ ಏಕೆ ಮೇಲ್ಮನವಿ ಸಲ್ಲಿಸುತ್ತಿಲ್ಲ' ಎಂದು ಪ್ರಶ್ನಿಸಿದರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 5 ರೊಳಗೆ ಕೋರ್ಟ್‌ಗೆ ವಿಸ್ತೃತ ಪ್ರಮಾಣ ಪತ್ರ ಸಲ್ಲಿಸಿ’ ಎಂದು ಆದೇಶಿಸಿ ವಿಚಾರಣೆ ಮುಂದೂಡಿದರು.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !