ನಟಿಗೆ ವಂಚನೆ: ತೇಜಸ್‌ಗೌಡ ಬಂಧನ

ಮಂಗಳವಾರ, ಜೂಲೈ 16, 2019
25 °C

ನಟಿಗೆ ವಂಚನೆ: ತೇಜಸ್‌ಗೌಡ ಬಂಧನ

Published:
Updated:
Prajavani

ಚಿಕ್ಕಬಳ್ಳಾಪುರ: ಮದುವೆಯಾಗುವುದಾಗಿ ನಂಬಿಸಿ ಕಿರುತೆರೆ ನಟಿಯೊಂದಿಗೆ ಕಳೆದ ಏಳು ವರ್ಷಗಳಿಂದ ದೈಹಿಕ ಸಂರ್ಪಕ ಬೆಳೆಸಿ, ವಂಚಿಸಿದ ಆರೋಪದ ಮೇಲೆ ಮೈಸೂರಿನ ಕಿರುತೆರೆ ನಟ ಹಾಗೂ ಪ್ರೋಡಕ್ಷನ್ ಮ್ಯಾನೇಜರ್ ತೇಜಸ್ ಗೌಡನನ್ನು (27) ನಗರ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

2012ರಲ್ಲಿ ನಗರದ ಖಾಸಗಿ ಕಾಲೇಜೊಂದರಲ್ಲಿ ಓದುತ್ತಿದ್ದ ವೇಳೆ ಸಂತ್ರಸ್ತ ನಟಿ ಮತ್ತು ಆರೋಪಿ ಸಹಪಾಠಿಗಳಾಗಿದ್ದರು. ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ತನ್ನ ಪ್ರೇಯಸಿಗೆ ಮದುವೆಯಾಗುವುದಾಗಿ ಹೇಳಿ ತೇಜಸ್‌ ಗೌಡ ಅನೇಕ ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ. ಶಿಕ್ಷಣ ಮುಗಿಯುತ್ತಿದ್ದಂತೆ ಇಬ್ಬರು ಖಾಸಗಿ ವಾಹಿನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಬಳಿಕ ಮದುವೆ ವಿಚಾರಕ್ಕೆ ಅನೇಕ ಬಾರಿ ಗಲಾಟೆ ಆಗಿತ್ತು ಎಂದು ಪೊಲೀಸರು ತಿಳಿಸಿದರು.

ಕಳೆದ ಜನವರಿಯಲ್ಲಿ ಸಂತ್ರಸ್ತೆ ಗರ್ಭಿಣಿಯಾಗುತ್ತಿದ್ದಂತೆ ಆರೋಪಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದ. ಅದರಂತೆ ನಟಿ ನಡೆದುಕೊಂಡಿದ್ದರು. ಈ ನಡುವೆ ತೇಜಸ್‌ಗೌಡ ತನ್ನ ವರಸೆ ಬದಲಿಸಿ ಬೇರೆ ಹುಡುಗಿಯೊಂದಿಗೆ ಮದುವೆಯಾಗಲು ಮುಂದಾಗಿದ್ದ. ಪ್ರಶ್ನಿಸಿದ್ದಕ್ಕೆ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮತ್ತು ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರು ದಾಖಲಿಸಿದ್ದಾರೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 1

  Frustrated
 • 5

  Angry

Comments:

0 comments

Write the first review for this !