ಮಂಗಳವಾರ, ಏಪ್ರಿಲ್ 13, 2021
31 °C

ನವಭಾರತದ ಕನಸಿನೊಂದಿಗೆ ಮಾರುಕಟ್ಟೆಯತ್ತ ನೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 2019ರ ಬಜೆಟ್‌ ನ್ನು ಶುಕ್ರವಾರ ಸಂಸತ್ತಿನಲ್ಲಿ ಅನಾವರಣಗೊಳಿಸಿದರು. ಭಾರತದ ಮೊತ್ತ ಮೊದಲ ಮಹಿಳಾ ಹಣಕಾಸು ಸಚಿವೆಯೊಬ್ಬರು ಮಂಡಿಸುತ್ತಿರುವ ಪೂರ್ಣ ಪ್ರಮಾಣದ ಬಜೆಟ್‌ ಇದಾಗಿದ್ದು, ‘ನವಭಾರತದ ನಿರ್ಮಾಣ ಚಟುವಟಿಕೆ ಆರಂಭಿಸುತ್ತಿದ್ದೇವೆ’ ಎಂದು ತಮ್ಮ ಆರಂಭಿಕ ಮಾತುಗಳಲ್ಲಿ ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಎರಡನೇ ಅವಧಿಗೆ ಅಧಿಕಾರ ಸ್ವೀಕರಿಸಿದ ಬಳಿಕ ಮಂಡನೆಯಾಗುತ್ತಿರುವ ಬಜೆಟ್‌ನತ್ತ ಜನರ ನಿರೀಕ್ಷೆ ಬಹಳವಿದೆ. ‘ಜನಸಾಮಾನ್ಯರ ಕಡೆಗೆ ಬಂಡವಾಳ ಮಾರುಕಟ್ಟೆಯನ್ನು ಕೊಂಡೊಯ್ಯಲು ಇದು ಸೂಕ್ತ ಕಾಲ’ ಎಂದು ನಿರ್ಮಲಾ ಹೇಳಿದರು. ‌

ಷೇರುಬಂಡವಾಳವನ್ನು ಜನರ ಬಳಿಗೆ ಕೊಂಡೊಯ್ಯುವುದಷ್ಟೇ ಅಲ್ಲ, ಸರ್ಕಾರಿಪಾಲು ಬಂಡವಾಳವನ್ನು ಕನಿಷ್ಠ ಶೇ 25ರಿಂದ ಶೇ 35ಕ್ಕೆ ಏರಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಸಾಮಾಜಿಕ ಉದ್ಯಮ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಪಟ್ಟಿ ತಯಾರಿಸುವ ನಿಟ್ಟಿನಲ್ಲಿ ವಿದ್ಯುನ್ಮಾನ ಮಾಧ್ಯಮದ ಮೂಲದ ಬಂಡವಾಳ ಸಂಗ್ರಹಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. 

ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಸೆಬಿಯೊಡನೆ ಸಮಾಲೋಚನೆ ಮಾಡಿ, ಕಾರ್ಪೊರೇಟ್‌ ಷೇರು ಮಾರುಕಟ್ಟೆಯನ್ನು ಬಲಪಡಿಸಲು ಯತ್ನಿಸಲಾಗುವುದು. ಅಲ್ಲದೆ ಷೇರು ಮಾರುಕಟ್ಟೆಗೆ ಸಂಬಂಧಿಸಿದ ಅನೇಕ ಹೊಸ ಕ್ರಮಗಳನ್ನು ಪ್ರಕಟಿಸುವ ಇರಾದೆಯನ್ನು ವ್ಯಕ್ತಪಡಿಸಿದರು.  

ಬಜೆಟ್‌ ಲೈವ್‌ ಅಪ್‌ಡೇಟ್ಸ್‌ಗಾಗಿ http://bit.ly/2YB34Wy ಲಿಂಕ್ ಕ್ಲಿಕ್ ಮಾಡಿ.

ಬಜೆಟ್‌ನ ಸಮಗ್ರ ಮಾಹಿತಿಗೆ https://www.prajavani.net/budget-2019 ಲಿಂಕ್ ಕ್ಲಿಕ್ ಮಾಡಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.