ಮಂಗಳವಾರ, ಏಪ್ರಿಲ್ 13, 2021
30 °C

ಎಸ್ಸೆಸ್ಸೆಲ್ಸಿ: ಮೌಲ್ಯಮಾಪನಕ್ಕೆ ಹೊಸ ಕ್ರಮ

ರಶ್ಮಿ ಬೇಲೂರು Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅವ್ಯವಹಾರ, ಅಕ್ರಮ ತಡೆಯಲು ಹಾಗೂ ಮೌಲ್ಯಮಾಪನದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧರಿಸಿದೆ. 2020ರಲ್ಲಿ ನಡೆಯುವ ಪರೀಕ್ಷೆಗೆ ಈ ನಿಯಮಗಳು ಅನ್ವಯವಾಗಲಿವೆ.

‘ಹೊಸ ವ್ಯವಸ್ಥೆಯ ಪ್ರಕಾರ, ಪರೀಕ್ಷೆ ಮುಗಿಯುತ್ತಿದ್ದಂತೆಯೇ ಪ್ರತಿಯೊಂದು ಉತ್ತರಪತ್ರಿಕೆಯನ್ನು ಸ್ಕ್ಯಾನ್‌ ಮಾಡಿ, ಅದಕ್ಕೆ ಪ್ರತ್ಯೇಕವಾದ ತಾತ್ಕಾಲಿಕ ಸಂಖ್ಯೆಯೊಂದನ್ನು ನೀಡಲಾಗುವುದು. ಈ ತಾತ್ಕಾಲಿಕ ಸಂಖ್ಯೆಯನ್ನು ಒಎಂಆರ್‌ ಹಾಳೆ ಮತ್ತು ಉತ್ತರಪತ್ರಿಕೆಯ ಮೇಲೂ ನಮೂದಿಸಲಾಗುವುದು.

‘ಉತ್ತರಪತ್ರಿಕೆಯನ್ನು ಮೌಲ್ಯಮಾಪಕರಿಗೆ ನೀಡುವ ಮುನ್ನ ಅದರ ಮೊದಲ ಪುಟ (ಒಎಂಆರ್‌ ಶೀಟ್‌) ತೆಗೆದಿಡಲಾಗುವುದು. ಇದರಿಂದ ವಿದ್ಯಾರ್ಥಿಯ ಮಾಹಿತಿ ಲಭಿಸುವುದಿಲ್ಲ.  ಮೌಲ್ಯಮಾಪನದ ಬಳಿಕ ಸಂಖ್ಯೆಯನ್ನು ಮರುತಾಳೆ ಮಾಡಿ, ಅಂಕಗಳನ್ನು ದಾಖಲಿಸಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.