ನವದೆಹಲಿ: ಕೆಲವು ದೇಶಗಳು ತಮ್ಮ ಇಚ್ಛೆಯನ್ನು ಇತರರ ಮೇಲೆ ಹೇರಲು ಪ್ರಯತ್ನಿಸುತ್ತಿರುವುದೇ ಯುದ್ಧಗಳಿಗೆ ಕಾರಣ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋಬಾಲ್ ಶನಿವಾರ ಹೇಳಿದ್ದಾರೆ.

ವಿಕಸಿತ ಭಾರತ ಯುವ ಪ್ರತಿನಿಧಿಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ದೋಬಾಲ್, 'ಕೆಲವು ದೇಶಗಳು ತಮ್ಮ ಇಚ್ಛೆಯನ್ನು ಇತರ ರಾಷ್ಟ್ರಗಳ ಮೇಲೆ ಹೇರಲು ಪ್ರಯತ್ನಿಸುತ್ತಿವೆ. ಅದಕ್ಕಾಗಿ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತಿವೆ. ಜಗತ್ತಿನಾದ್ಯಂತ ನಡೆಯುತ್ತಿರುವ ಎಲ್ಲ ಸಂಘರ್ಷಗಳಿಗೂ ಇದೇ ಕಾರಣ' ಎಂದು ಹೇಳಿದ್ದಾರೆ.

ಅಮೆರಿಕ ಸೇನೆಯು ವೆನೆಜುವೆಲಾದಲ್ಲಿ ಇತ್ತೀಚೆಗೆ ಕಾರ್ಯಾಚರಣೆ ನಡೆಸಿ, ಅಲ್ಲಿನ ಅಧ್ಯಕ್ಷರನ್ನು ಸೆರೆ ಹಿಡಿದಿದೆ. ರಷ್ಯಾ-ಉಕ್ರೇನ್ ಯುದ್ಧ ಮತ್ತು ಮಧ್ಯಪ್ರಾಚ್ಯದಲ್ಲಿಯೂ ಸಂಘರ್ಷಗಳು ನಡೆಯುತ್ತಿರುವ ಹೊತ್ತಿನಲ್ಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಗ್ರೀನ್ಲ್ಯಾಂಡ್ ಅನ್ನು ವಶಕ್ಕೆ ಪಡೆಯುವ ಬೆದರಿಕೆಯೊಡ್ಡಿದೆ. ಈ ಹೊತ್ತಿನಲ್ಲೇ ದೋಬಾಲ್ ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಜಗತ್ತಿನಾದ್ಯಂತ ತಲೆದೋರುತ್ತಿರುವ ಎಲ್ಲ ಸಂಘರ್ಷಗಳಿಗೂ ಭದ್ರತಾ ಕಳವಳವೇ ಮೂಲ ಎಂದು ದೋಬಾಲ್ ಪ್ರತಿಪಾದಿಸಿದ್ದಾರೆ.

'ಸಂಘರ್ಷಗಳು ಆಗುತ್ತಿರುವುದೇ? ಹೆಣಗಳನ್ನುನೋಡಿ ಸಂಭ್ರಮಿಸಲು ಜನರೇನು ಮನೋರೋಗಿಗಳಲ್ಲ. ಕೆಲವು ರಾಷ್ಟ್ರಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹಾಗೂ ಅವುಗಳ ಷರತ್ತುಗಳನ್ನು ಶತ್ರು ರಾಷ್ಟ್ರಗಳು ಒಪ್ಪಬೇಕು ಎಂಬುದಾಗಿ ಬಯಸುತ್ತವೆ. ಜಗತ್ತಿನಾದ್ಯಂತ ನಡೆಯುತ್ತಿರುವ ಸಂಘರ್ಷಗಳಿಗೆ, ಭದ್ರತೆಯ ಉದ್ದೇಶದಿಂದ ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರದ ಮೇಲೆ ಹೇರುತ್ತಿರುವ ಷರತ್ತುಗಳೇ ಕಾರಣ' ಎಂದು ಒತ್ತಿ ಹೇಳಿದ್ದಾರೆ.

3,000 ಯುವ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ದೋಬಾಲ್, ಭಾರತವು ಯಾವುದೇ ರಾಷ್ಟ್ರದ ಮೇಲೆ ದಾಳಿ ಮಾಡಿಲ್ಲ. ಆದರೆ, ರಾಷ್ಟ್ರೀಯ ಭದ್ರತೆಗೆ ಎದುರಾಗಿರುವ ಆತಂಕಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವಿದೆ. ಗಡಿಯಲ್ಲಿ ಮಾತ್ರವಲ್ಲದೆ, ಆರ್ಥಿಕವಾಗಿ ಸೇರಿದಂತೆ ಎಲ್ಲ ಮಾರ್ಗಗಳಲ್ಲಿಯೂ ತನ್ನನ್ನು ತಾನು ಬಲಪಡಿಸಿಕೊಳ್ಳಬೇಕಿದೆ ಎಂದಿದ್ದಾರೆ.

'ನಾವು ಅತ್ಯುತ್ತಮ ನಾಗರಿಕತೆಯನ್ನು ಹೊಂದಿದ್ದೇವೆ. ನಾವು ಯಾರ ದೇಗುಲಗಳನ್ನೂ ನಾಶ ಮಾಡಿಲ್ಲ. ನಾವು ಯಾರನ್ನೂ ಲೂಟಿ ಮಾಡಲು ಹೋಗಿಲ್ಲ. ಯಾವುದೇ ದೇಶ ಅಥವಾ ವಿದೇಶಿಯರ ಮೇಲೆ ದಾಳಿ ಮಾಡಿಲ್ಲ. ಆದರೆ, ಭದ್ರತೆಯ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಿದ್ದೇವೆ' ಎಂದು ವಿವರಿಸಿದ್ದಾರೆ.

'ನಾವು ಮತ್ತೊಬ್ಬರ ಬಗ್ಗೆ ಉದಾಸೀನ ತೋರಿದಾಗ ಏನಾಯಿತು ಎಂಬ ಪಾಠವನ್ನು ಇತಿಹಾಸ ನಮಗೆ ಕಲಿಸಿದೆ. ಅದನ್ನು ಕಲಿತಿದ್ದೇವೆಯೇ? ನೆನಪಿನಲ್ಲಿಟ್ಟುಕೊಳ್ಳುತ್ತೇವೆಯೇ? ಒಂದು ವೇಳೆ, ಮುಂಬರುವ ತಲೆಮಾರು ಅದನ್ನೆಲ್ಲ ಮರೆತರೆ ದೊಡ್ಡ ದುರಂತವೇ ಸಂಭವಿಸುತ್ತದೆ' ಎಂದು ಕಳವಳದಿಂದ ಹೇಳಿದ್ದಾರೆ.

ಹಿಂದಿನದನ್ನು ಮರೆಯದಿರಿ ಎಂದು ಯುವಕರನ್ನು ಎಚ್ಚರಿಸಿರುವ ದೋಬಾಲ್, 'ನಮ್ಮ ಹಳ್ಳಿಗಳನ್ನು ಸುಟ್ಟುಹಾಕಲಾಯಿತು. ನಮ್ಮ ನಾಗರಿಕತೆಯನ್ನು ನಾಶಮಾಡಲಾಯಿತು. ನಮ್ಮ ದೇವಾಲಯಗಳನ್ನು ಲೂಟಿ ಮಾಡಲಾಯಿತು. ಆದರೆ, ನಾವು ಮೂಕ ಪ್ರೇಕ್ಷಕರಾಗಿ ಅಸಹಾಯಕತೆರಾಗಿದ್ದೆವು' ಎಂದು ಸ್ಮರಿಸಿದ್ದಾರೆ.

'ಸೇಡು ಎಂಬುದು ಒಳ್ಳೆಯ ಪದವಲ್ಲ. ಆದರೆ, ಸರಿಯಾಗಿ ಬಳಸಿದರೆ ಅದು ದೊಡ್ಡ ಶಕ್ತಿಯಾಗಬಹುದು. ನಾವು ನಮ್ಮ ಇತಿಹಾಸದ ವಿರುದ್ಧ ಸೇಡು ತೀರಿಸಿಕೊಳ್ಳಬೇಕು. ಗಡಿ ಭದ್ರತೆಯ ವಿಷಯದಲ್ಲಿ ಮಾತ್ರವಲ್ಲದೆ ಆರ್ಥಿಕತೆ, ಸಾಮಾಜಿಕ ಅಭಿವೃದ್ಧಿ ಸೇರಿದಂತೆ ಪ್ರತಿಯೊಂದು ವಿಚಾರದಲ್ಲಿಯೂ ಈ ದೇಶವನ್ನು ಶ್ರೇಷ್ಠವಾಗಿರುವ ಹಂತಕ್ಕೆ ಕೊಂಡೊಯ್ಯಬೇಕು' ಎಂದು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.