ಗುರುವಾರ , ನವೆಂಬರ್ 14, 2019
18 °C

ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

Published:
Updated:

ನವದೆಹಲಿ: ಆರ್ಥಿಕ ಹಿಂಜರಿತ ಸಮಸ್ಯೆಯಿಂದ ಇಡೀ ದೇಶ ನರಳುತ್ತಿದೆ. ಕೇಂದ್ರ ಸರ್ಕಾರ ಈ ಸಮಸ್ಯೆಯನ್ನು ಒಪ್ಪಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಾರತಕ್ಕೆ ಸುಳ್ಳು ವರದಿಗಳು, ತಿರುಚಿದ ಸುದ್ದಿ, ಮೂರ್ಖತನದ ಸಿದ್ದಾಂತಗಳು ಬೇಕಾಗಿಲ್ಲ. ಬದಲಾಗಿ  ಭಾರತಕ್ಕೆ ಬೇಕಾಗಿರುವುದು ಬಲಿಷ್ಟವಾದ ಆರ್ಥವ್ಯವಸ್ಥೆ ರೂಪಿಸುವ ಯೋಜನೆಗಳು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಮಾಜಿ ಪ್ರಧಾನಿ, ಅರ್ಥಶಾಸ್ತ್ರಜ್ಞ ಮನ್ ಮೋಹನ್ ಸಿಂಗ್  ಅವರ ಹೇಳಿಕೆಯನ್ನು ಟ್ಯಾಗ್ ಮಾಡಿರುವ ರಾಹುಲ್ ಗಾಂಧಿ, ಸಮಸ್ಯೆಯನ್ನು ಒಪ್ಪಿಕೊಂಡು ಅದನ್ನು ಪರಿಹರಿಸುವತ್ತ ಗಮನಹರಿಸುವುದು ಒಳ್ಳೆಯ ನಡೆ ಎಂದು ಹೇಳಿದ್ದಾರೆ.

ಜನರ ಮನಸ್ಸು ಬೇರೆ ಕಡೆ ತಿರುಗಿರುವುದೇ ವಾಹನ ಖರೀದಿ ಕಡಿಮೆಯಾಗಲು ಕಾರಣ ಎಂದಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಇತ್ತೀಚಿನ ಹೇಳಿಕೆಯನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಸಚಿವರ ಪ್ರಕಾರ ಓಲಾ ಮತ್ತು ಊಬರ್ ಕಾರುಗಳು ರಸ್ತೆಯಲ್ಲಿ ಇರುವುದರಿಂದಲೇ ಕಾರು ಖರೀದಿ ಮಾಡುವುದನ್ನು ಕಡಿಮೆ ಮಾಡಿದ್ದಾರೆ ಎಂದು ಹೇಳಬಹುದು ಎಂದು ವ್ಯಂಗ್ಯವಾಡಿದ್ದಾರೆ.

ಭಾರತದ ಅರ್ಥ ವ್ಯವಸ್ಥೆ ಅಭಿವೃದ್ಧಿ ದರ ಜೂನ್ ಮಾಸಾಂತ್ಯಕ್ಕೆ ಶೇ.5ಕ್ಕೆ ತಲುಪಿದೆ. ಇದು ಕಳೆದ ಐದು ಆರುವರ್ಷಗಳಲ್ಲಿ ಇದು ಅತ್ಯಂತ ಕಡಿಮೆ ದರ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಯಾವಾಗ ಅಭಿವೃದ್ಧಿ ದರ 4.7ಕ್ಕೆ ಇಳಿಯುತ್ತದೆಯೋ ಆಗ ದೇಶ ಹೊಸ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆಗ ಖಾಸಗಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಪ್ರಮಾಣ ಕಡಿಮೆಯಾಗುತ್ತದೆ. ಬೇಡಿಕೆ ಕುಸಿಯುತ್ತದೆ. ಇದಕ್ಕೆ ಮೋಟಾರು ವಾಹನ ತಯಾರಿಕಾ ಘಟಕಗಳೇ ಸಾಕ್ಷಿ ಎಂದಿದ್ದಾರೆ.

 

ಇತ್ತೀಚೆಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಪ್ರಕಾಶ್ ಜಾವಡೇಕರ್, ಆರ್ಥಿಕ ಹಿಂಜರಿಕೆ ಅರ್ಥ ವ್ಯವಸ್ಥೆಯಲ್ಲಿ ಸಾಮಾನ್ಯ ಪ್ರಕ್ರಿಯೆ ಎಂದು ಹೇಳಿದ್ದರು.

ಭಾರತದ ಅರ್ಥವ್ಯವಸ್ಥೆಯ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ ತನ್ನ ಬಿಗಿ ಹಿಡಿತವನ್ನು ಸಡಿಲಿಸಿದ್ದು, ವಿದೇಶೀ ನೇರ ಬಂಡವಾಳಗಾರರಿಗೆ ವಿಧಿಸಲಾಗುತ್ತಿದ್ದ ಕೆಲವು ಶುಲ್ಕಗಳಲ್ಲಿ ವಿನಾಯಿತಿ ಘೋಷಿಸಿದೆ. ಅಲ್ಲದೆ, ಮೋಟಾರು ವಾಹನ ತಯಾರಿಕಾ ಕಂಪನಿಗಳ ಪುನಶ್ಛೇತನಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳನ್ನು ಕೇವಲ 4 ನಾಲ್ಕು ಬ್ಯಾಂಕ್ ಗಳನ್ನಾಗಿ ಮಾರ್ಪಡಿಸಲಾಗಿದೆ ಎಂದು ಸರ್ಕಾರ ಹೇಳಿಕೆ ನೀಡಿದೆ.

   ಇದನ್ನೂ ಓದಿ....ದ್ವೇಷ ಬಿಡಿ, ಆರ್ಥಿಕತೆಯತ್ತ ದೃಷ್ಟಿ ನೆಡಿ: ಮನಮೋಹನ್‌ ಸಿಂಗ್‌ ಸಲಹೆ

ಪ್ರತಿಕ್ರಿಯಿಸಿ (+)