ಭಾನುವಾರ, ಜೂನ್ 20, 2021
26 °C

ಅಧಿಕಾರಿಗಳ ಬದ್ಧತೆ ಹೆಚ್ಚಿಸುವ ಸಕಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸಾರ್ವಜನಿಕರಿಗೆ ಸರ್ಕಾರದ ಎಲ್ಲ ಇಲಾಖೆಗಳು ವಿವಿಧ ಸೇವಾ ಸೌಲಭ್ಯಗಳನ್ನು ನಿಗದಿತ ಅವಧಿಯಲ್ಲಿ ಒದಗಿಸುವುದು ಆದ್ಯ ಕರ್ತವ್ಯವಾಗಿದ್ದು, ಕರ್ನಾಟಕ ನಾಗರಿಕ ಸೇವಾ ಖಾತರಿ ಮಸೂದೆ-2011ರ `ಸಕಾಲ~ ಯೋಜನೆಯು ಎಲ್ಲ ಇಲಾಖಾಧಿಕಾರಿಗಳ ಬದ್ಧತೆ ಹೆಚ್ಚಿಸಿದೆ ಎಂದು ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್. ಹೇಳಿದರು.ಕರ್ನಾಟಕ ನಾಗರಿಕ ಸೇವಾ ಖಾತರಿ ಮಸೂದೆ-2011ರ ಅನುಷ್ಠಾನದ ಬಗ್ಗೆ  ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗಾಗಿ ಗುರುವಾರ ಗುಲ್ಬರ್ಗದಲ್ಲಿ ಆಯೋಜಿಸಿದ ಎರಡು ದಿನಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಈ ಮಸೂದೆಯಡಿ 11 ಇಲಾಖೆಗಳು ಎಲ್ಲ 151 ಸೇವೆಗಳನ್ನು ನಿಗದಿತ ಅವಧಿಯಲ್ಲಿ ಸಾರ್ವಜನಿಕರಿಗೆ ಒದಗಿಸಲು ಸಮರ್ಪಕ ಹಾಗೂ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.  ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದೀಪಕನಾಗ್ ಪುಣ್ಯಶೆಟ್ಟಿ ಮಾತನಾಡಿ, ಈ ಮಸೂದೆಯು ರಾಜ್ಯದ ವಿವಿಧ ಇಲಾಖೆಗಳ ಸೇವೆಯನ್ನು ಪಡೆಯುವ ಕ್ರಾಂತಿಕಾರಕ ಹೆಜ್ಜೆಯಾಗಿದೆ. ಮಾಹಿತಿ ಹಕ್ಕು ಕಾಯ್ದೆಯಂತೆ ಸಾರ್ವಜನಿಕ ಸೇವೆ ಪಡೆಯಲು  `ಸಕಾಲ ಯೋಜನೆ~ ನಾಗರಿಕರಿಗೆ ಹೆಚ್ಚು ಅನುಕೂಲ ಮತ್ತು ಸಹಕಾರಿಯಾಗಿದೆ ಎಂದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಜಿ. ವಿಜಯಕುಮಾರ, ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಅಧಿಕಾರಿಗಳಾದ ಮನೋಜ್‌ಕುಮಾರ, ಜಿ.ಎಂ. ಸರ್ವೇಶ್ವರ, ಜಿಲ್ಲಾ ವಿಜ್ಞಾನ ಸೂಚನಾಧಿಕಾರಿ ಅವಧಾನಿ ಇದ್ದರು.ಈ ಕಾರ್ಯಾಗಾರದಲ್ಲಿ ಜನಸ್ನೇಹಿ ಆಡಳಿತ ನಾಗರಿಕ ಸನ್ನದು, ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಕಾಯ್ದೆ-2011ರ ಪರಿಚಯ ಮತ್ತು ಕೈಗೊಳ್ಳಬೇಕಾದ ಕ್ರಮ, ಕಾರ್ಯಸೂಚಿ ಕಚೇರಿ ಸೇವೆಗಳ ಅನುಷ್ಠಾನ ಪದ್ಧತಿ, ಕೆ.ಜಿ.ಎಸ್.ಸಿ. ಕಾಯ್ದೆಯಡಿ ಗುರುತಿಸಲಾದ 11 ಇಲಾಖೆಗಳ 151 ಸೇವೆಗಳಿಗೆ ತಂತ್ರಾಂಶ ಮತ್ತು ಗಣಕ ಸೇವೆ ಮುಂತಾದ ವಿಷಯಗಳ ಬಗ್ಗೆ ವಿವಿಧ ತಜ್ಞರು ವಿವರಿಸಿದರು. ಆಡಳಿತ ತರಬೇತಿ ಸಂಸ್ಥೆ ಮೈಸೂರು, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.