ಶನಿವಾರ, ಜೂನ್ 12, 2021
24 °C

ಜಂಗ್ಲಿಪೀರ್ ತಾಂಡಾ: ನೀರಿಗಾಗಿ ಕೆರೆಗೆ ಮೊರೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ತಾಲ್ಲೂಕಿನಲ್ಲಿ ಬಿಸಿಲಿನ ಬೇಗೆ ಹೆಚ್ಚುತ್ತಿದ್ದಂತೆ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯುತ್ತಿದ್ದು ಹಳ್ಳಿ ಹಾಗೂ ತಾಂಡಾ ನಿವಾಸಿಗಳು ಕುಡಿವ ನೀರಿಗಾಗಿ ಪರದಾಡುವಂತಾಗಿದೆ.ಜಂಗ್ಲಿಪೀರ ತಾಂಡಾದ ಜನರು ಕುಡಿವ ನೀರಿಗಾಗಿ 2 ಕೀ.ಮೀ ದೂರದ ಸಾಲೇಬೀರನಹಳ್ಳಿ ಕೆರೆಗೆ ಮೊರೆ ಇಟ್ಟಿದ್ದು, ನಡೆದುಕೊಂಡು ಹೋಗಿ ನೀರು ತರುವ ದೃಶ್ಯ ಸಾಮಾನ್ಯವಾಗಿದೆ.ಅಗಸಲ ಅಣಿ ತಾಂಡಾ ನಿವಾಸಿಗಳು ಒಂದು ಕೀ.ಮೀ ದೂರದ ನಾಗರಾಳ ಜಲಾಶಯಕ್ಕೆ ಹೋಗಿ ನೀರು ತರುತ್ತಿದ್ದಾರೆ. ಜತೆಗೆ ಕೆಳ ದಂಡೆ ಮುಲ್ಲಾಮಾರಿ ಯೋಜನೆ ಮುಳುಗಡೆಯಿಂದ ಸಂತ್ರಸ್ಥರಾದ ಯಲ್ಮಾಮಡಿ ಪುನರ್ ವಸತಿ ಕೇಂದ್ರ -1 ಹಾಗೂ ಪುನರ್ ವಸತಿ ಕೇಂದ್ರ -2ರಲ್ಲಿ ಕುಡಿವ ನೀರಿಗಾಗಿ ಹಾಹಾಕಾರ ಎದುರಾಗಿದೆ.ತಾಲ್ಲೂಕಿನ ಸೇರಿ ಬಡಾ ತಾಂಡಾ, ಸೇರಿ ಸಣ್ಣ ತಾಂಡಾ, ಗಡಿಲಿಂಗದಳ್ಳಿ ಬಳಿಯ ಕಾನು ನಾಯಕ್, ರೂಪ್ಲಾ ನಾಯಕ, ಫತ್ತು ನಾಯಕ್ ಹಾಗೂ ಚಂದನಕೇರಾ ಹತ್ತಿರದ ಶಿರಸನ್ ಬುಗಡಿ, ಪಸ್ತಪೂರ ತಾಂಡಾ, ಐನಾಪುರ ಹತ್ತಿರದ ಖಾನಾಪುರ ಹಾಗೂ ಕೊಂಚಾವರಂ ವನ್ಯಜೀವಿ ಧಾಮದಲ್ಲಿ ಬರುವ ಚಾಪ್ಲಾ ನಾಯಕ ತಾಂಡಾ, ಒಂಟಿಚಿಂತಾ ಮತ್ತು ಒಂಟಿಗುಡ್ಸಿ ಹಾಗೂ ಧರ್ಮಸಾಗರದಲ್ಲಿ ನೀರಿಗಾಗಿ ಹಾಹಾಕಾರ ಎದುರಾಗಿದೆ.ಮಾರ್ಚ್ ಮೊದಲನೇ ವಾರದಲ್ಲಿಯೇ ಅಂತರ್ಜಲ ಕುಸಿತದಿಂದಾಗಿ ಕುಡಿವ ನೀರಿನ ಸಮಸ್ಯೆ ತಲೆ ದೋರಿದೆ. ಇದು ಏಪ್ರಿಲ್ ತಿಂಗಳಲ್ಲಿ ಇನ್ನಷ್ಟು ದುಪ್ಪಟ್ಟಾಗಲಿದೆ. ಹೀಗಾಗಿ ತಾಲ್ಲೂಕು ಆಡಳಿತ ತಕ್ಷಣ ಚುರುಕುಗೊಂಡು ಕುಡಿವ ನೀರಿನ ಸಮಸ್ಯೆ ಎದುರಿಸಲು ಮುಂದಾಗಬೇಕೆಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಾಮರಾವ್ ರಾಠೋಡ್ ಹಾಗೂ ಈಶ್ವರ್ ನಾಯಕ್ ಒತ್ತಾಯಿಸಿದ್ದಾರೆ.

      

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.