ಸೋಮವಾರ, ಜೂನ್ 21, 2021
27 °C

ಕುರುಬರಗಲ್ಲಿಗೆ ಕೂಡಿಬಂದ ಭಾಗ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುರುಬರಗಲ್ಲಿಗೆ ಕೂಡಿಬಂದ ಭಾಗ್ಯ!

ಕಾಳಗಿ: ಸ್ವಾತಂತ್ರ್ಯ ಸಿಕ್ಕು ದಶಕ ಗತಿಸಿದರೂ ಇಲ್ಲಿನ ವಾರ್ಡ್ ನಂಬರ್ 2ರಲ್ಲಿನ ಕುರುಬ ಗಲ್ಲಿಗೆ ಸಿಗಬೇಕಾದ ಮೂಲಸೌಕರ್ಯ ದೂರ ಉಳಿದಿದ್ದವು. ಅಸಮರ್ಪಕ ವಿದ್ಯುತ್ ಸರಬರಾಜು ಬಿಟ್ಟರೆ ಬೇರೇನೂ ಇರಲಿಲ್ಲ.ಕುಡಿಯುವ ನೀರಿಗಾಗಿ ಇರುವ ಏಕೈಕ ಹಳೆಯ `ಕುರುಬಾವಿ~ ಸರಿಯಾದ ಮೇಲ್ವಿಚಾರಣೆ ಇಲ್ಲದೆ ಎಲ್ಲೆಲ್ಲಿಂದೆಲ್ಲ ಹರಿದುಬರುವ ಕೊಳಚೆ ನೀರಿಗೆ ಸಂಗ್ರಹಣ ಕೇಂದ್ರವಾಗಿ ಬಾವಿಯ ನೀರೆಲ್ಲ ಮಲಿನವಾಗಿದ್ದವು. ಅಷ್ಟೇ ಅಲ್ಲದೆ, ಬಾವಿಯ ಸುತ್ತಲೆಲ್ಲ ಗಿಡಗಂಟೆ ಬೆಳೆದು ಯಾರೊಬ್ಬರೂ ಬಾವಿಯತ್ತ ಸುಳಿಯದ ಸ್ಥಿತಿ ನಿರ್ಮಾಣವಾಗಿ ವಾರ್ಡಿನ ಜನತೆಗೆ ಸಂಕಷ್ಟ ಎದುರಾಗಿತ್ತು. ಇಷ್ಟಾದರೂ ಒಬ್ಬ ಜನಪ್ರತಿನಿಧಿ ಕೂಡ ಈ ಕಡೆ ನೋಡಿರಲಿಲ್ಲ. ಕುರುಬ ಗಲ್ಲಿಯ ಸಮಗ್ರ ಸಮಸ್ಯೆಗಳ ಕುರಿತು `ಪ್ರಜಾವಾಣಿ~ ವರದಿ ಪ್ರಕಟಿಸಿತ್ತು.ಕೂಡಲೇ ಕಾರ್ಯಪ್ರವೃತ್ತರಾದ ಜನಪ್ರತಿನಿಧಿಗಳು ರಸ್ತೆ ಬದಿಯ ಜಾಲಿಮುಳ್ಳಿಗೆ ಬುಡಸಹಿತ ಕಿತ್ತೊಗೆಯುವ ಕೆಲಸಕ್ಕೆ ಮುಂದಾದರು. ಕೆಸರು ರಾಶಿಯಿಂದ ಕೂಡಿದ್ದ ರಸ್ತೆಗಳನ್ನು ಸಿಮೆಂಟ್ ರಸ್ತೆಯಾಗಿ ಪರಿವರ್ತಿಸುವುದಕ್ಕೆ ಟೆಂಡರ್ ಕರೆದು ಹಸಿರು ನಿಶಾನೆ ತೋರಿಸಿ ಸೋಮವಾರ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದರು.

 

ಹಾಳಾಗುತ್ತಿದ್ದ ಕುಡಿಯುವ ನೀರಿನ ಬಾವಿಗೆ ಅಗತ್ಯವಾದ ಕೆಲಸಗಳು ಮಾಡಿಸಿ ಹಳೆ ನೋಟ ಕಿತ್ತೊಗೆದು ಹೊಸರೂಪ ಕೊಡುವ ಮೂಲಕ ದಿನದ ಉಪಯೋಗಕ್ಕೆ ಎಡೆಮಾಡಿಕೊಟ್ಟರು. ಇಷ್ಟಲ್ಲದೆ ಇನ್ನೂ ಅನೇಕ ಕೆಲಸಗಳು ಇಲ್ಲಿ ಆಗಬೇಕಾಗಿದ್ದು, ಜನನಾಯಕರು ಇನ್ನುಮುಂದೆಯೂ ಕಾಳಜಿ ವಹಿಸುವವರೆಂಬ ಆಶಾಭಾವನೆ ಜನತೆಯಲ್ಲಿ ಚಿಗುರೊಡೆದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.