ಭಾನುವಾರ, ಮೇ 16, 2021
29 °C

ತಾಲ್ಲೂಕು ಕಸಾಪ: ಆಟಕ್ಕುಂಟು ಲೆಕ್ಕಕ್ಕಿಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಬಾದ: ನೇಮಕಗೊಂಡ ನಂತರ ಮೂರು ವರ್ಷದ ಅವಧಿಯಲ್ಲಿ ಒಂದೆ ಒಂದು ಸಾಹಿತ್ಯ, ಸಾಂಸ್ಕೃತಿ, ಕನ್ನಡ ಪರ ಚಟುವಟಿಕೆಗಳನ್ನು ನಡೆಸದ ಕೀರ್ತಿ ಚಿತ್ತಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಲ್ಲುವುದರಿಂದ ತಾಲ್ಲೂಕು ಕಸಾಪ ಆಟಕ್ಕುಂಟು... ಲೆಕ್ಕಕ್ಕಿಲ್ಲ~ ಎಂದು ಸದಸ್ಯರು ಆಕ್ಷೇಪಿಸುತ್ತಿದ್ದಾರೆ.ಜಿಲ್ಲಾ ಮಟ್ಟದ ಚುನಾವಣೆ ಸಂದರ್ಭದಲ್ಲಿ ಮಾತ್ರ ಗರಿಗೆದರಿ ನಿಲ್ಲುವ ತಾಲ್ಲೂಕುಗಳಲ್ಲಿನ ಪುಢಾರಿಗಳು ತಾಲ್ಲೂಕು ಘಟಕದ ಅಧ್ಯಕ್ಷರಾಗಬೇಕು ಎಂಬ ಕನಸು ಕಾಣುತ್ತಾರೆಯೆ ಹೊರತು ಯಾವುದೆ ಚಟುವಟಿಕೆ ನಡೆಸಲು ಪ್ರಯತ್ನಿಸುವುದಿಲ್ಲ. ಹೀಗಾಗಿ ತಾಲ್ಲೂಕು ಕಸಾಪ ಅಧ್ಯಕ್ಷ ಸ್ಥಾನ ಬಹುತೇಕ ಕಡೆ `ನಾಮಕಾವಾಸ್ತೆ~ ಎಂಬಂತಾಗಿವೆ ಎಂದು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.ಚಿತ್ತಾಪುರ ತಾಲ್ಲೂಕಿನಲ್ಲಿ ಚಿತ್ತಾಪುರ ತಾಲ್ಲೂಕು ಘಟಕ ಹಾಗೂ ಕಾಳಗಿ, ಕಮಲಾಪುರ, ನರೋಣವನ್ನು ಒಳಗೊಂಡಂತೆ ಗುಲ್ಬರ್ಗ ಗ್ರಾಮೀಣ ಘಟಕ, ಹೀಗೆ ಎರಡು ಘಟಕಗಳಿವೆ. ಗ್ರಾಮೀಣ ಘಟಕದ ಅಧ್ಯಕ್ಷ ಎನ್.ಸಿ.ವಾರದ್ ಪ್ರಕಾರ, `ಕಸಾಪ ಗ್ರಾಮೀಣ ಘಟಕದ ತಮ್ಮ ಅವಧಿಯಲ್ಲಿ ಸಂಗೀತ ಸಮ್ಮೇಳನ, ದತ್ತಿ ಉಪನ್ಯಾಸ, ಬೆಳದಿಂಗಳ ಕವಿಗೋಷ್ಠಿ, ರಾಜ್ಯೋತ್ಸವ ಸಮಾರಂಭದ ಸಾಂಸ್ಕೃತಿಕ, ಸಾಹಿತ್ಯಕ ಚಟುವಟಿಕೆ ನಡೆಸಿದೆ~ ಎನ್ನುತ್ತಾರೆ. `ಗ್ರಾಮೀಣ ಘಟಕ ವ್ಯಾಪ್ತಿಯ ಕಾಳಗಿ, ಕೋರವಾರ, ನರೋಣಾ, ಕಮಲಾಪುರಗಳಲ್ಲಿ ಕಸಾಪ ಎನೆಂದು ದೀಪ ಹಾಕಿ ಹುಡುಕುವ ಸ್ಥಿತಿ ಇದೆ. ತಾಲ್ಲೂಕು ಕಸಾಪ ಜನರನ್ನು ತಲುಪುವ ಯೋಜನೆ ಹಾಕಿಕೊಂಡು, ಹೊಸ ಉತ್ಸಾಹದೊಂದಿಗೆ ಜನರ ಮಧ್ಯೆ ಬಂದರೆ ಮಾತ್ರ ಕನ್ನಡ ಬೆಳೆಯಲು, ಉಳಿಯಲು ಸಾಧ್ಯ~ ಎನ್ನುತ್ತಾರೆ ಯುವ ಸದಸ್ಯ ನಾಗಣ್ಣ ರಾಂಪುರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.