ಮಂಗಳವಾರ, ಮೇ 11, 2021
19 °C

ಬಂದರವಾಡ: ನೀರಿಗಾಗಿ ಹಾಹಾಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಫಜಲಪುರ: ತಾಲ್ಲೂಕಿನ ಬಂದರವಾಡ ಗ್ರಾಮದಲ್ಲಿ ಕೊರೆದಿರುವ ಕೊಳುವೆ ಬಾವಿಗಳ ಅಂತರ್ಜಲ ಮಟ್ಟ ಕುಸಿತವಾಗಿದ್ದರಿಂದ ಕಳೆದ ಒಂದು ವಾರದಿಂದ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು.ಜನರು ದೂರದ ತೋಟದಿಂದ ನೀರು ತರುವುದು ಸಾಮಾನ್ಯವಾಗಿದೆ.ಗ್ರಾಮದಲ್ಲಿ ಎರಡು ಕೊಳವೆ ಬಾವಿಗಳಲ್ಲಿ ಒಂದು ಕೆಟ್ಟು ನಿಂತಿದೆ ಇನ್ನೊಂದರಿಂದ ನೀರು ಕಡಿಮೆ ಬರುತ್ತಿದೆ. ಗ್ರಾಮದ ಮೇಲಿನ ಓಣಿಗೆ ಕಳೆದ ಎರಡು ತಿಂಗಳಿಂದ ಕುಡಿಯುವ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕಲ್ಯಾಣ ಗೌಡ ಗ್ರಾಮಕ್ಕೆ ಬರುವುದಿಲ್ಲ.ಕುಡಿಯುವ ನೀರಿನ ಸಮಸ್ಯೆ ಕುರಿತು ಗ್ರಾ.ಪಂ. ಸದಸ್ಯರನ್ನು ವಿಚಾರಿದಾಗ ಅಧ್ಯಕ್ಷರನ್ನು ಕೇಳಿ ಎಂದು ಹೇಳುತ್ತಾರೆ.ಇಂತಹ  ಬೇಜವಾಬ್ದಾರಿ ವರ್ತನೆ ಮಾಡುವರ ಮೇಲೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ರೈತ ಸಂಘದ ಮುಖಂಡ ಲಕ್ಷ್ಮಣ ಕಟ್ಟಿಮನಿ ಒತ್ತಾಯಿಸಿದ್ದಾರೆ.  ಸದ್ಯಕ್ಕೆ ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆ ಅಡಿಯಲ್ಲಿ ಕುಡಿಯುವ ನೀರಿನ ಕಾಮಗಾರಿ ನಡೆದಿದೆ ಅದನ್ನು ತಕ್ಷಣ ಮುಗಿಸ ಬೇಕೆಂದು  ಒತ್ತಾಯಿಸಿದ್ದಾರೆ.     

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.