ಸೋಮವಾರ, ಮೇ 25, 2020
27 °C

ಗುಲ್ಬರ್ಗದಲ್ಲಿ ಮತ್ತೆ ಆಪರೇಷನ್ ಕಮಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ‘ಬಿಜೆಪಿ ಪಕ್ಷಕ್ಕೆ ಬರುವ ಜಿಪಂ-ತಾಪಂ ಅಭ್ಯರ್ಥಿಗಳಿಗೆ ಸ್ವಾಗತ’ ಎಂದು ಹೇಳುವ ಮೂಲಕ ‘ಆಪರೇಷನ್ ಕಮಲ’ಕ್ಕೆ ಗುಲ್ಬರ್ಗ ಬಿಜೆಪಿ ಘಟಕವು ಮಂಗಳವಾರ ಚಾಲನೆ ನೀಡಿದೆ.ಜಿಪಂ-ತಾಪಂ ಫಲಿತಾಂಶದ ಬಳಿಕ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಸಚಿವ ರೇವೂನಾಯಕ ಬೆಳಮಗಿ ಅವರು, ಪಕ್ಷಕ್ಕೆ ಬರುವವರಿಗೆ ಸ್ವಾಗತ ಎಂದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ತೇಲ್ಕೂರ ಅವರು, ‘ಅಗತ್ಯ ಬಿದ್ದರೆ ಯಾವುದೇ ರಾಜಕೀಯ ಆಟಕ್ಕೂ ಸಿದ್ಧ. ಜೆಡಿಎಸ್ ಸದಸ್ಯರು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಬಾರದು.ಬಿಜೆಪಿಯನ್ನು ಬೇಷರತ್ ಆಗಿ ಬೆಂಬಲಿಸುವುದಾದರೆ ಸ್ವಾಗತ. ಈ ಬಗ್ಗೆ ಪಕ್ಷದ ಮುಖಂಡರು ಕುಳಿತು ಚರ್ಚಿ ಸುತ್ತೇವೆ’ ಎಂದು ಆಪರೇಷನ್ ಕಮಲದ ಸಾಧ್ಯತೆ ಯನ್ನು ದೃಢಪಡಿಸಿದರು.ಗುಲ್ಬರ್ಗ ‘ಕೋಟೆ’ ಭದ್ರ: ‘ಗುಲ್ಬರ್ಗದ ಬಿಜೆಪಿ ಕೋಟೆಯು ಭದ್ರಗೊಂಡಿದೆ. ಯಡಿಯೂರಪ್ಪ ಅವರ ನಾಯಕತ್ವವನ್ನು ಜನತೆ ಬೆಂಬಲಿಸಿದ್ದಾರೆ. ಜೇವರ್ಗಿ ಮತ್ತು ಚಿತ್ತಾಪುರದಲ್ಲಿ ನಾವು ಕಂಡಿರುವ ಹಿನ್ನಡೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ’ ಎಂದು ಸಚಿವ ರೇವೂನಾಯಕ ಬೆಳಮಗಿ ಹೇಳಿದರು.ಗ್ರಾಮೀಣ ಬೇರು: ಬಿಜೆಪಿಯು ನಗರ ಪ್ರದೇಶದ ಜನಗಳ ಪಕ್ಷ ಎಂಬ ವಿಶ್ಲೇಷಣೆ ಇತ್ತು. ಆದರೆ ಅದೀಗ ಸುಳ್ಳಾಗಿದೆ. ನಮ್ಮ ಪಕ್ಷವು ಪಂಚಾಯಿತಿ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ 50ಕ್ಕೂ ಅಧಿಕ ಸ್ಥಾನ ಪಡೆದಿದೆ. ಆ ಮೂಲಕ ಯಡಿಯೂರಪ್ಪ ನಾಯಕತ್ವದಲ್ಲಿ ಬಿಜೆಪಿ ಬಲಗೊಳ್ಳುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಹೇಳಿದರು.  ಪತ್ರಿಕಾಗೋಷ್ಠಿಯಲ್ಲಿ ಎಚ್‌ಕೆಡಿಬಿ ಅಧ್ಯಕ್ಷ ಅಮರನಾಥ ಪಾಟೀಲ, ಪಕ್ಷದ ಮುಖಂಡ ರಾದ ವಿದ್ಯಾಸಾಗರ ಕುಲಕರ್ಣಿ, ಧರ್ಮಣ್ಣ ಇಟಗಿ, ಮುಕುಂದ ದೇಶಪಾಂಡೆ, ವಿದ್ಯಾಸಾಗರ ಶಹಬಾದಿ, ಹರ್ಷವರ್ಧನ, ಶರಣಪ್ಪ ತಳವಾರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.