ಬೆಂಗಳೂರು: ಪ್ರಭಸಿಮ್ರನ್ ಸಿಂಗ್ ನಾಯಕತ್ವದ ಪಂಜಾಬ್ ಮತ್ತು ಹರ್ವಿಕ್ ದೇಸಾಯಿ ಮುನ್ನಡೆಸುತ್ತಿರುವ ಸೌರಾಷ್ಟ್ರ ತಂಡಗಳು ಶುಕ್ರವಾರ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಲಿವೆ.

ಗುಂಪು ಹಂತದ ತನ್ನ ಕೊನೆಯ ಪಂದ್ಯದಲ್ಲಿ ಕೇವಲ 1 ರನ್ ಅಂತರದಿಂದ ಮುಂಬೈ ವಿರುದ್ದ ಗೆದ್ದು, ಕ್ವಾರ್ಟರ್ಫೈನಲ್ನಲ್ಲಿ ಮಧ್ಯಪ್ರದೇಶದ ಸವಾಲನ್ನು ಮೆಟ್ಟಿ ನಿಂತಿದ್ದ ಪಂಜಾಬ್ ತಂಡವು ಭರ್ತಿ ಆತ್ಮವಿಶ್ವಾಸದಲ್ಲಿದೆ. ಪ್ರಭಸಿಮ್ರನ್, ಅನ್ಮೋಲ್ಪ್ರೀತ್ ಸಿಂಗ್, ಹರ್ನೂರ್ ಸಿಂಗ್, ಬೌಲರ್ಗಳಾದ ಗುರ್ನೂರ್ ಬ್ರಾರ್ ಅವರು ಉತ್ತಮ ಲಯದಲ್ಲಿದ್ದಾರೆ.

ಸೌರಾಷ್ಟ್ರ ತಂಡವು ಎಂಟರ ಘಟ್ಟದಲ್ಲಿ ಉತ್ತರ ಪ್ರದೇಶದ ವಿರುದ್ಧ ಜಯಗಳಿಸಿತ್ತು. ಆ ಪಂದ್ಯದಲ್ಲಿ ನಾಯಕ ದೇಸಾಯಿ ಶತಕ ಬಾರಿಸಿದ್ದರು. ತಂಡದ ಎಡಗೈ ವೇಗಿ ಚೇತನ್ ಸಕಾರಿಯಾ ಮೂರು ವಿಕೆಟ್ ಗಳಿಸಿದ್ದರು. ಆಲ್ರೌಂಡರ್ ಪ್ರೇರಕ್ ಮಂಕಡ್ ಅವರೂ ಉತ್ತಮ ಲಯದಲ್ಲಿದ್ದಾರೆ. ಇವರಿಬ್ಬರೂ ಜೊತೆಯಾಟಗಳಿಗೆ ತಡೆಯೊಡ್ಡಬಲ್ಲ ಸಮರ್ಥ ಬೌಲರ್ಗಳಾಗಿದ್ದಾರೆ. ಅನುಭವಿ ಚಿರಾಗ್ ಜಾನಿ ಕೂಡ ತಂಡದಲ್ಲಿದೆ. ಸ್ಪಿನ್ನರ್ ಧರ್ಮೇಂದ್ರಸಿಂಹ ಜಡೇಜಾ ಕೂಡ ಮುಸ್ಸಂಜೆಯ ವಾತಾವರಣದಲ್ಲಿ ಕೈಚಳಕ ತೋರಬಲ್ಲ ಸಮರ್ಥರು.

ಪಂದ್ಯ ಆರಂಭ: ಮಧ್ಯಾಹ್ನ 1.30
ಸ್ಥಳ: ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಕ್ರೀಡಾಂಗಣ
ನೇರಪ್ರಸಾರ: ಜಿಯೊಹಾಟ್ಸ್ಟಾರ್ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.