ಶನಿವಾರ, ಮೇ 28, 2022
27 °C

ಮಲ್ಲಾಬಾದ; ಬಾಲಕನ ಬರ್ಬರ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಫಜಲಪುರ: ತಾಲ್ಲೂಕಿನ ಮಲ್ಲಾಬಾದ ಗ್ರಾಮದಲ್ಲಿ ಭಾನುವಾರ ವಿಜಯಕುಮಾರ ತಂದೆ ಭೀಮರಾಯ್ ಕೊರಳ್ಳಿ (5) ಎಂಬ ಬಾಲಕನನ್ನು, ಗ್ರಾಮದ ಲಕ್ಷೀ ದೇವಸ್ಥಾನ ಹತ್ತಿರದ ಹಳ್ಳದಲ್ಲಿ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ ಬಗ್ಗೆ ವರದಿಯಾಗಿದೆ.

ಹತ್ಯೆಯಾದ ಬಾಲಕನ ತಂದೆ ಭೀಮರಾಯ್ ಅವರು ಮೂಲಥಾ ಸಿಂದಗಿ ತಾಲ್ಲೂಕಿನ ಕೊರಳ್ಳಿ ಗ್ರಾಮದವರು. ಮಲ್ಲಾಬಾದ ಗ್ರಾಮದ ಮಹಿಳೆಯನ್ನು ಮದುವೆಯಾಗಿ ಎಂಟು ವರ್ಷ ಮಲ್ಲಾಬಾದದಲ್ಲಿಯೆ ವಿದ್ಯುತ್ ಪಂಪಸೆಟ್ ದುರಸ್ತಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ ಬಾಲಕನ ತಂದೆ ಭೀಮರಾಯ ನಾಲ್ಕು ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅವನಿಗೆ ಒಂದು ಗಂಡು,ಒಂದು ಹೆಣ್ಣು ಮಕ್ಕಳು ಇದ್ದರು ಅದರಲ್ಲಿ ಈಗ ವಿಜಯಕುಮಾರ ಎಂಬ ಬಾಲಕನನ್ನು ಹತ್ಯೆ ಮಾಡಲಾಗಿದೆ. ಬಾಲಕನ ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಂದು ತಿಳಿದುಬಂದಿದೆ.

ವಯರ್ ಕಳವು

ಗುಲ್ಬರ್ಗ: ಆಜಾದಪುರದ ಬಳಿ ಏರ್‌ಟೆಲ್ ಕಂಪೆನಿಯ ಮೊಬೈಲ್ ಗೋಪುರದ ರೂ. 24,000 ಮೌಲ್ಯದ ಕೇಬಲ್ ವಯರ್ ಕಳವಾಗಿದೆ ಎಂದು ವಿಶ್ವವಿದ್ಯಾಲಯ ಠಾಣೆಯಲ್ಲಿ ದೂರು ದಾಖಲಾಗಿದೆ.

ಜೂಜು: 11ಬಂಧನ

ಗುಲ್ಬರ್ಗ: ಜೇವರ್ಗಿ ತಾಲ್ಲೂಕು ಕೇಂದ್ರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಯಾರ್ಡ್ ಬಳಿ ಜೂಜಾಟದಲ್ಲಿ ನಿರತರಾಗಿದ್ದ 10 ಮಂದಿಯನ್ನು ಬಂಧಿಸಿದ ಪೊಲೀಸರು 9,800 ರೂಪಾಯಿ ಜಪ್ತಿ ಮಾಡಿದ್ದಾರೆ.

ಇಲ್ಲಿಗೆ ಸಮೀಪದ ಹೂಡಿದರ್ಗಾ ಬಳಿ ದಾಳಿ ನಡೆಸಿ ಮಟ್ಕಾ ಬರೆದುಕೊಳ್ಳುತ್ತಿದ್ದ ಬಸವರಾಜ ಪಾಟೀಲ ಎಂಬಾತನನ್ನು ಬಂಧಿಸಿ 4,740 ರೂಪಾಯಿ ಜಪ್ತಿ ಮಾಡಲಾಗಿದೆ.

ಪ್ರೊಬೆಷನರಿ ಎಎಸ್ಪಿ ಚೇತನ್‌ಕುಮಾರ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದ್ಯ ಮಾರಾಟ: ಬಂಧನ

ಗುಲ್ಬರ್ಗ: ನಗರದ ಗಾಜೀಪುರ ಬಡಾವಣೆಯ ಅಂಚೆ ಕಚೇರಿ ಹಿಂಭಾಗದಲ್ಲಿ ಅಕ್ರಮವಾಗಿ ಮದ್ಯ ಹಾಗೂ ಸೇಂದಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಶನಿವಾರ ಬಂಧಿಸಿದ ಪೊಲೀಸರು 4,504 ರೂಪಾಯಿ ಮೌಲ್ಯದ ಸೊತ್ತು ಜಪ್ತಿ ಮಾಡಿದ್ದಾರೆ.

ಸ್ಥಳೀಯ ಮಲ್ಲಿಕಾರ್ಜುನ ಶಹರ ಬಂಧಿತ. ಆತನಿಂದ ವಿಸ್ಕಿ, ಸೇಂದಿ ಹಾಗೂ ನಗದು ಜಪ್ತಿ ಮಾಡಲಾಗಿದೆ. ಇನ್ಸ್‌ಪೆಕ್ಟರ್ ಶರಣಬಸವೇಶ್ವರ ಬಿ. ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಬ್ರಹ್ಮಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.