ಬುಧವಾರ, ಏಪ್ರಿಲ್ 1, 2020
19 °C

‘ಬೆಂಬಲ ಬೆಲೆ’ಯಲ್ಲಿ ಕಡಲೆ ಖರೀದಿ ಆರಂಭ: ಕ್ವಿಂಟಲ್‌ಗೆ ₹4,875 ದರ ನಿಗದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಸರ್ಕಾರದ ನಿರ್ದೇಶನದಂತೆ, ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಲ್ಲಿ ಕಡಲೆ ಕಾಳು ಖರೀದಿ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

‘ಅಥಣಿ ತಾಲ್ಲೂಕಿನ ಅಥಣಿ, ತೆಲಸಂಗ ಮತ್ತು ಕನ್ನಾಳ, ಗೋಕಾಕ, ರಾಮದುರ್ಗ ತಾಲ್ಲೂಕಿನ ರಾಮದುರ್ಗ ಮತ್ತು ಹುಲಕುಂದ, ಸವದತ್ತಿ ತಾಲ್ಲೂಕಿನ ಸವದತ್ತಿ ಮತ್ತು ಮುರಗೋಡ, ಬೈಲಹೊಂಗಲ ತಾಲ್ಲೂಕಿನ ಬೈಲಹೊಂಗಲ ಮತ್ತು ದೊಡವಾಡದಲ್ಲಿ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಎಫ್.ಎ.ಕ್ಯೂ. ಗುಣಮಟ್ಟದ ಕಡಲೆಯನ್ನು ಕ್ವಿಂಟಲ್‌ಗೆ ₹ 4,875 ದರದಲ್ಲಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಖರೀದಿಸಲಿದೆ. ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಲ್ ಖರೀದಿ ಮಿತಿ ನಿಗದಿಪಡಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಕೇಂದ್ರದಲ್ಲಿ ಕಡಲೆ ಮಾರಲು ಬಯಸುವ ರೈತರು ಗುರುತಿನ ಚೀಟಿ, ಪಹಣಿ ಪ್ರತಿ, ಕಡಲೆ ಬೆಳೆದ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಯಿಂದ ಪಡೆದ ಪ್ರಮಾಣಪತ್ರ ಮತ್ತು ಐ.ಎಫ್.ಎಸ್.ಸಿ. ಕೋಡ್ ಇರುವ ಹಾಗೂ ಆಧಾರ್‌ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆ ಸಂಖ್ಯೆಯನ್ನು ತಂದು ನೋಂದಣಿ ಮಾಡಿಕೊಳ್ಳಬೇಕು. 50 ಕೆ.ಜಿ. ಚೀಲಗಳಲ್ಲೇ ಕಡಲೆ ತರಬೇಕು. ಹಣವನ್ನು ಆರ್.ಟಿ.ಜಿ.ಎಸ್. ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.

‘ರೈತರನ್ನು ಹೊರತುಪಡಿಸಿ ಮಧ್ಯವರ್ತಿಗಳು ಅಥವಾ ವರ್ತಕರು ಖರೀದಿ ಕೇಂದ್ರಕ್ಕೆ ಕಡಲೆಯನ್ನು ಮಾರಲು ತಂದಿದ್ದು ಕಂಡುಬಂದಲ್ಲಿ ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಆಸಕ್ತರು ಹೆಚ್ಚಿನ ಮಾಹಿತಿಗೆ ಅಥಣಿ ಶಾಖೆ ವ್ಯವಸ್ಥಾಪಕ ಮೊ:9449864471, ಗೋಕಾಕ ಶಾಖಾ ವ್ಯವಸ್ಥಾಪಕ ಮೊ: 9449864466, ಬೆಳಗಾವಿ ವ್ಯವಸ್ಥಾಪಕರ ಮೊ: 9449864445 ಸಂಪರ್ಕಿಸಬಹುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)