ಗುರುವಾರ , ಜನವರಿ 21, 2021
22 °C
ಹೂಕೋಸು, ಕುಂಬಳ ಬೆಳೆದು ಯಶಸ್ವಿ ಪ್ರಯೋಗದತ್ತ ಹೆಜ್ಜೆ ಇಟ್ಟಿರುವ ರೈತ ಮುನಿನಂಜಪ್ಪ

ವಿದೇಶಿ ತರಕಾರಿ ಬೆಳೆದು ರೈತನ ಯಶಸ್ಸು: ಯಾವುದದು ವಿದೇಶಿ ಬೆಳೆ? ಇಲ್ಲಿದೆ ಮಾಹಿತಿ

ವಡ್ಡನಹಳ್ಳಿ ಭೋಜ್ಯಾನಾಯ್ಕ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಸತತ ಬರಗಾಲ ಎಂಬ ಹಣೆಪಟ್ಟಿಗೆ ಒಳಗಾಗಿರುವ ತಾಲ್ಲೂಕಿನ ಕೆ.ಹೊಸೂರು ಗ್ರಾಮದ ರೈತ ಮುನಿನಂಜಪ್ಪ ಅವರ ಹೊಸ ಪ್ರಯೋ ಗದ ಬೆಳೆ ಎಲ್ಲರ ಗಮನ ಸೆಳೆದಿದೆ. ‌

ಬಯಲುಸೀಮೆಯಲ್ಲಿ ಅಂತರ್ಜಲ ತಳಮುಟ್ಟಿದೆ. ಇರುವ ಅಲ್ಪ ನೀರಿನಲ್ಲೇ ಬೆಳೆ ಬೆಳೆದು ಆರ್ಥಿಕ ಚೇತರಿಕೆ ಕಂಡಿ
ದ್ದಾರೆ ರೈತ ಮುನಿನಂಜಪ್ಪ. ತೈವಾನ್ ಮೂಲದ ಹಸಿರು ಹೂಕೋಸು (ಬ್ರೋಕೋಲಿ) ಮತ್ತು ಹಸಿರು ಹಾಗೂ ಹಳದಿ ಬಣ್ಣದ ಕುಂಬಳಕಾಯಿ (ಜುಕ್ ಚಿನಿ) ಬೆಳೆದು ಯಶಸ್ವಿ ಪ್ರಯೋಗದತ್ತ ಹೆಜ್ಜೆ ಇಟ್ಟಿದ್ದಾರೆ.

ಬೆಳೆಯ ಪ್ರತಿ ತಾಕಿನ ಮಾಹಿತಿ ನೀಡಿದ ಅವರು, ಹಸಿರು ಮತ್ತು ಹಳದಿ ಕುಂಬಳಕಾಯಿ ನಾಟಿ ಮಾಡಲು ಐದು ಅಡಿ ಅಂತರದ ಸಾಲು, ಎರಡು ಅಡಿಗೊಂದರಂತೆ ಸಸಿ ನಾಟಿ ಮಾಡಬೇಕು. 35ದಿನಕ್ಕೆ ಕೊಯ್ಲು ಆರಂಭ. 75ರಿಂದ 90 ದಿನದವರೆಗೆ ದಿನ ಬಿಟ್ಟು ದಿನ ಕೊಯ್ಲು ಮಾಡಬೇಕು ಎಂದರು.

ಬೆಳೆಗೆ ಕೀಟ ಮತ್ತು ವಿವಿಧ ರೋಗಗಳ ಬಾಧೆ ತೀರ ಕಡಿಮೆ. ಬೆಳೆ ಆರಂಭದ ಹೂವಿನ ಹಂತದಿಂದ ಕಟ್ಟಕಡೆ ಕೊಯ್ಲು ಆಗುವವರೆಗೆ ಬೆಲ್ಲದ ಸಿಹಿ ನೀರು ಮೂರು ದಿನಕ್ಕೊಮ್ಮೆ ಸಿಂಪಡಣೆ ಮಾಡಿದರೆ ಜೇನುಹುಳು ಅತಿ ಹೆಚ್ಚಾಗಿ ಬಂದು ಪರಾಗಸ್ಪರ್ಶದಲ್ಲಿ ತೊಡಗುತ್ತವೆ. ಇದರಿಂದ ಇಳುವರಿ ಪ್ರಮಾಣ ಹೆಚ್ಚಾಗುತ್ತದೆ. ಇಲ್ಲದಿದ್ದರೆ ಬೆಳೆ ನಷ್ಟವಾಗುತ್ತದೆ ಎಂದು ಬೆಳೆ ಪ್ರಾತ್ಯಕ್ಷಿಕೆ ವಿವರಿಸಿದರು.

ಒಂದು ಎಕರೆಯಲ್ಲಿ ಮೂರು ಹಂತದಲ್ಲಿ ಬ್ರೋಕೋಲಿ ನಾಟಿ ಮಾಡಲಾಗಿದೆ. ಉತ್ತಮ ಫಸಲು ಕಟ್ಟಿದೆ. ಇನ್ನೆರಡು ತಾಕಿನಲ್ಲಿ ಬೆಳೆ ಬೆಳೆಯಲಾಗುವುದು. ‌‌ಮತ್ತೊಂದು ಕಡೆ ಒಂದು ಎಕರೆಯಲ್ಲಿ ಹೈಬ್ರೀಡ್ ಹಾಗಲಕಾಯಿ ಕಟಾವು ಮಾಡಲಾಗುತ್ತಿದೆ. 15 ಕುಂಟೆಯಲ್ಲಿ ಟೊಮೊಟೊ ಬೆಳೆ ಇದೆ. 5ಗುಂಟೆಯಲ್ಲಿ ಈಗಷ್ಟೇ ಈರುಳ್ಳಿ ಬಿತ್ತನೆ ಮಾಡಲಾಗಿದೆ ಎಂದು ಹೇಳಿದರು.

ಎರಡು ಬಣ್ಣದ ಕುಂಬಳಕಾಯಿ ಪ್ರತಿ ಕೆ.ಜಿ.ಗೆ ₹50ರಿಂದ ₹60 ಇದೆ. ಬ್ರೋಕೋಲಿಗೆ ₹70ರಿಂದ ₹80 ಸಿಗುತ್ತಿದೆ. ವಿದೇಶಕ್ಕೆ ರಫ್ತು ಮಾಡುವ ಖಾಸಗಿ ಕಂಪನಿ ಜಮೀನಿನ ಬಳಿ ಬಂದು ತೂಕಹಾಕಿ ಸಾಗಣೆ ಮಾಡಿಕೊಳ್ಳುತ್ತದೆ. ಇದು ನೇರವಾಗಿ ರೈತರಿಗೆ ಒಂದಿಷ್ಟು ಲಾಭವಾಗಲಿದೆ. ಮಾರುಕಟ್ಟೆಗೆ ಹೋದರೆ ಸಾಗಣೆ ವೆಚ್ಚ ಪ್ರತಿ ಚೀಲಕ್ಕೆ ₹20 ಕಮೀಷನ್ ಜತೆಗೆ ತರಕಾರಿ ವಿಂಗಡಿಸಿ ಖರೀದಿಸುತ್ತಾರೆ. ಇದರಿಂದ ಶೇ40ರಷ್ಟು ಹಣ ರೈತರಿಗೆ ನಷ್ಟವಾಗಲಿದೆ ಎಂದರು.

ವಿದೇಶಿ ತರಕಾರಿಗೆ ಹೆಚ್ಚಿನ ಬೇಡಿಕೆ ಇದೆ. ಪ್ರತಿಷ್ಠಿತ ಹೋಟಲ್ ಗಳಿಗೂ ಬೇಡಿಕೆ ಇದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವ ತರಕಾರಿ ಕುಂಬಳಕಾಯಿ ಇದಾಗಿದೆ. ರೈತರು ಒಂದೇ ತರಕಾರಿ ಬೆಳೆಗೆ ಸೀಮಿತವಾಗಬಾರದು. ಹೊಸ ತಳಿಗಳನ್ನು ಪ್ರಯೋಗಾತ್ಮಕವಾಗಿಯೂ ನೋಡಬೇಕು. ಎಲ್ಲ ಬೆಳೆಗಳಿಗೂ ₹1.5 ಲಕ್ಷ ಬಂಡವಾಳ ಹಾಕಲಾಗಿದೆ. ಕನಿಷ್ಠ ₹8ಲಕ್ಷ ಲಾಭದ ನಿರೀಕ್ಷೆ ಇದೆ ಎಂದು ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು