ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಯಲ್ಲಿ ವೈದ್ಯ, ಪ್ರವೃತ್ತಿಯಲ್ಲಿ ಸಾವಯವ ಕೃಷಿಕ

ಕುಟುಂಬದ ಕಸುಬು ಮರೆಯದ ನೇತ್ರತಜ್ಞ ಡಾ.ನಂಜಪ್ಪ, ಏಳೂವರೆ ಎಕರೆ ಜಮೀನಿನಲ್ಲಿ ಬೆಳೆ
Last Updated 28 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಹನೂರು: ಸರ್ಕಾರಿ ಉದ್ಯೋಗದಲ್ಲಿದ್ದರೂ ಕುಟುಂಬದ ಕಸುಬಾದ ಕೃಷಿಯನ್ನು ಬಿಡದ ವೈದ್ಯರೊಬ್ಬರು ಶೂನ್ಯಬಂಡವಾಳದ ಕೃಷಿಯಲ್ಲಿ ತೊಡಗಿಕೊಂಡು ಗಮನಸೆಳೆಸಿದ್ದಾರೆ.

‌ಸಂತೇಮರಹಳ್ಳಿಯ ಆರೋಗ್ಯ ಕೇಂದ್ರದಲ್ಲಿ ನೇತ್ರ ತಜ್ಞರಾಗಿರುವ ಡಾ.ನಂಜಪ್ಪ ಅವರುಹನೂರುಸಮೀಪದ ಕಣ್ಣೂರುಬಳಿಸಾವಯವಕೃಷಿ ಮಾಡುತ್ತಿದ್ದಾರೆ.

ನಂಜಪ್ಪಅವರುಮೂಲತಃಕೊಳ್ಳೇಗಾಲದವರು. ಕೃಷಿಕ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಇವರು, ತಂದೆ ಮಾಡುತ್ತಿದ್ದ ಕೃಷಿಯನ್ನು ನೋಡಿ ಬೆಳೆದವರು. ಹಾಗಾಗಿ, ಬಾಲ್ಯದಿಂದಲೇ ಕೃಷಿ ಚಟುವಟಿಕೆಯಲ್ಲಿ ಆಸಕ್ತಿ ಇತ್ತು. ಅದೇ ಆಸಕ್ತಿ, ವೃತ್ತಿ ಬದುಕಿನ ನಡೆಯುವೆಯೂ ಇಂದು ಅವರನ್ನು ಉತ್ತಮ ಕೃಷಿಕರನ್ನಾಗಿ ಮಾಡಿದೆ.

ನಿರ್ಜೀವಭೂಮಿಗೆಜೀವ: ವೃತ್ತಯ ಒತ್ತಡದಿಂದಾಗಿ ಕಣ್ಣೂರು ಬಳಿ ಇರುವ ತಮ್ಮ ಏಳೂವರೆ ಎಕರೆ ಜಮೀನನ್ನು ಅವರು ಗುತ್ತಿಗೆ ನೀಡಿದ್ದರು. ಐದು ವರ್ಷಗಳ ಹಿಂದೆ ಅದನ್ನು ನಂಜಪ್ಪ ಅವರು ವಾಪಸ್‌ ಪಡೆದಿದ್ದರು.

ಹೆಚ್ಚಿನ ಇಳುವರಿಪಡೆಯುವಸಲುವಾಗಿ ಜಮೀನು ನೋಡಿಕೊಂಡಿದ್ದವರು ಯಥೇಚ್ಛವಾಗಿ ರಾಸಾಯನಿಕಗೊಬ್ಬರ ಬಳಸಿದ್ದರಿಂದ ಭೂಮಿ ಫಲವತ್ತತೆ ಕಳೆದುಕೊಂಡಿತ್ತು. ಇಳುವರಿಯೂ ಕುಸಿದಿತ್ತು. ಅಲ್ಲದೇ, ಬೆಳೆದಫಸಲೆಲ್ಲಾ ಕೊಳೆರೋಗ,ಬೇರು ರೋಗಗಳಿಗೆತುತ್ತಾಗುತ್ತಿತ್ತು.

ಇದನ್ನುಮನಗಂಡನಂಜಪ್ಪ ಅವರು ಫಲವತ್ತತೆಯನ್ನು ಮರುಸ್ಥಾಪಿಸಲು ಪಣ ತೊಟ್ಟರು. ಅದಕ್ಕಾಗಿ ಸಾವಯವ ಕೃಷಿಯ ಮೊರೆ ಹೋದರು. ಸತತಮೂರು ವರ್ಷಗಳಕಾಲ ಕೊಟ್ಟಿಗೆಗೊಬ್ಬರಹಾಗೂಜೀವಾಮೃತವನ್ನು ಹಾಕಿದರು. ಪರಿಣಾಮವಾಗಿ ಭೂಮಿಯಲ್ಲಿ ಫಲವತ್ತತೆ ಹೆಚ್ಚಿತು. ಏಳೂವರೆ ಎಕರೆ ಜಮೀನಿನಲ್ಲಿಜೋಳ, ಬಾಳೆ,ರಾಗಿಮುಂತಾದ ಬೆಳೆಗಳನ್ನುಬೆಳೆಯುತ್ತಿದ್ದಾರೆ.

ಶೂನ್ಯಬಂಡವಾಳಕೃಷಿ: ಮೂರು ಎಕರೆಯಲ್ಲಿಬಾಳೆಬೆಳೆದಿದ್ದಾರೆ.ಐದುವರ್ಷಗಳ ಹಿಂದೆಬಿತ್ತನೆ ಮಾಡಿದ ಬಾಳೆಇಂದಿಗೂಫಲನೀಡುತ್ತಿದೆ.

‘ಮೊದಲನೇಬಾರಿಗೆ ಬಾಳೆಬಿತ್ತನೆಮಾಡಿಅದಕ್ಕೆಕೊಟ್ಟಿಗೆ ಗೊಬ್ಬರಹಾಕಿಸಾಕಷ್ಟು ನೀರುಣಿಸಿದೆ. ಈಗಐದುವರ್ಷವಾಗಿದೆ. ವರ್ಷದಿಂದ ವರ್ಷಕ್ಕೆ ಇಳುವರಿಹೆಚ್ಚುತ್ತಲೇ ಇದೆ’ ಎಂದು ನಂಜಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿವರ್ಷಕೊಟ್ಟಿಗೆಗೊಬ್ಬರಹಾಗೂಜೀವಾಮೃತಮಾತ್ರ ಹಾಕುತ್ತೇನೆ. ಇದರಜೊತೆಗೆಒಣಗಿ ಬಿದ್ದಬಾಳೆಮರ ಅಲ್ಲೇಕೊಳೆತು ಇನ್ನೊಂದುಗಿಡಕ್ಕೆಗೊಬ್ಬರವಾಗುತ್ತದೆ.ಪರಿಣಾಮ ಒಂದು ಗೊನೆ15ರಿಂದ20ಕೆಜಿವರೆಗೆ ತೂಗುತ್ತದೆ.ಇದುವರೆಗೂ ಒಮ್ಮೆಯೂನಾನುಮಾರುಕಟ್ಟೆಗೆಹೋಗಿ ಬಾಳೆಹಣ್ಣನ್ನು ಮಾರಾಟಮಾಡಿಲ್ಲ. ಹಣ್ಣಿನಗುಣಮಟ್ಟನೋಡಿದಕೆಲವರು ಇಲ್ಲಿಗೆಬಂದುತೆಗೆದುಕೊಂಡು ಹೋಗುತ್ತಾರೆ‌’ ಎಂದು ಅವರು ವಿವರಿಸಿದರು.

ರಜಾ ದಿನಗಳಲ್ಲಿ ಹಾಗೂ ಆಸ್ಪತ್ರೆಯ ಸಮಯ ಕಳೆದ ನಂತರ ನಂಜಪ್ಪ ಅವರು ಕೃಷಿಯಲ್ಲಿ ತೊಡಗಿರುತ್ತಾರೆ. ಕೃಷಿ ಕೆಲಸಕ್ಕಾಗಿ ಇಬ್ಬರು ಆಳುಗಳನ್ನೂ ಆವರು ನೇಮಿಸಿಕೊಂಡಿದ್ದಾರೆ.

ಗೊಬ್ಬರಕ್ಕಾಗಿಹೈನುಗಾರಿಕೆ

ನಂಜಪ್ಪ ಅವರು ಸಾವಯವ ಕೃಷಿ ಜೊತೆಗೆ ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ. ಕೃಷಿ ಭೂಮಿಗೆ ಗೊಬ್ಬರ ಪೂರೈಸುವ ಉದ್ದೇಶದಿಂದ 20 ಹಸು, ಕುರಿ ಹಾಗೂ ಕೋಳಿ ಸಾಕುತ್ತಿದ್ದಾರೆ.

‘ಹೊರಗೆ ಗೊಬ್ಬರಕ್ಕಾಗಿ ಖರ್ಚು ಮಾಡುವ ಬದಲು ಪ್ರಾಣಿಗಳ ಸಾಕಾಣಿಕೆಯಿಂದ ಕೃಷಿಗೆ ಅಗತ್ಯವಾದ ಗೊಬ್ಬರ ಸಿಕ್ಕಿದಂತಾಗುತ್ತದೆ’ ಎಂಬುದು ಇವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT