ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯೋತ್ಸವದಂದು ಸಾವಯವ ಸಂತೆ

ಗ್ರೀನ್‌ಪಾತ್‌– ಹಸಿರು ತೋಟದ ಅಂಗಳದಲ್ಲಿ
Published 11 ಆಗಸ್ಟ್ 2023, 23:27 IST
Last Updated 11 ಆಗಸ್ಟ್ 2023, 23:27 IST
ಅಕ್ಷರ ಗಾತ್ರ

‘ಸಾವಯವ ಆಹಾರ ಸಾಮಾನ್ಯರಿಗೂ ತಲುಪಬೇಕು.. ಕೈಗೆಟಕುವ ಬೆಲೆಯಲ್ಲಿ ಉತ್ಪನ್ನಗಳು ಸಿಗಬೇಕು. ಉತ್ಪಾದಕರು – ಗ್ರಾಹಕರ ನಡುವೆ ಸಂಪರ್ಕ ಕಲ್ಪಿಸಬೇಕೆಂಬ ಮಹತ್ವದ ಉದ್ದೇಶಗಳೊಂದಿಗೆ ಗ್ರೀನ್‌ ಪಾತ್‌ ಸಂಸ್ಥೆ ಇದೇ ಸ್ವಾತಂತ್ರ್ಯೋತ್ಸವದ ದಿನದಂದು (ಆಗಸ್ಟ್‌ 15) ‘ಸಾವಯವ ಸಂತೆ’ಯನ್ನು ಆಯೋಜಿಸುತ್ತಿದೆ.

ನಗರದ ಮಂತ್ರಿ ಮಾಲ್ ಮೆಟ್ರೊ ಸ್ಟೇಷನ್ ಎದುರು ಇರುವ ತಮ್ಮ ಸಂಸ್ಥೆಯ ‘ಆರ್ಗಾನಿಕ್ ರೆಸ್ಟೊರೆಂಟ್‌– ಹಸಿರು ತೋಟ’ದ ಅಂಗಳದಲ್ಲಿ ಸಾವಯವ ಸಂತೆ ನಡೆಯಲಿದೆ. ಅಂದು ಬೆಳಿಗ್ಗೆ 7 ಗಂಟೆಯಿಂದ ಸಂತೆ ಆರಂಭವಾಗುತ್ತದೆ. ಚಲನಚಿತ್ರ ನಟ ರಿಷಿ ಸಂತೆ ಉದ್ಘಾಟಿಸುತ್ತಾರೆ. ಅಂದು ದಿನಪೂರ್ತಿ ಸಂತೆ ನಡೆಯುತ್ತದೆ. ಸಂತೆಯ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ.

’ಮನೆ ಮನೆಗೂ ಸಾವಯವ ಮನಕ್ಕೂ ಸಾವಯವ‘ – ಟ್ಯಾಗ್‌ಲೈನ್‌ನೊಂದಿಗೆ ಆರಂಭವಾಗುತ್ತಿರುವ ಈ ಸಾವಯವ ಸಂತೆಯಲ್ಲಿ ಸಾವಯವ ಹಣ್ಣು, ತರಕಾರಿ, ಬೇಳೆಕಾಳುಗಳು, ಗಾಣದ ಎಣ್ಣೆ, ಕರಕುಶಲ ವಸ್ತುಗಳು, ಕೈಮಗ್ಗದ ವಸ್ತ್ರಗಳು, ಸಾವಯವ ಪ್ರಸಾಧನ ಸಾಮಗ್ರಿಗಳು ಸೇರಿದಂತೆ ಪರಿಸರ ಸ್ನೇಹಿ ವಸ್ತುಗಳು ಇರಲಿವೆ.

ಸಂತೆಗೆ ಬರುವ ಗ್ರಾಹಕರಿಕೆ ಬೆಳಗಿನ ಉಪಹಾರಕ್ಕಾಗಿ ಗ್ರೀನ್‌ಪಾತ್‌ ಆರ್ಗಾನಿಕ್‌ ರೆಸ್ಟೊರೆಂಟ್‌ ರಿಯಾಯಿತಿ ದರದಲ್ಲಿ ಸಿರಿಧಾನ್ಯದ ವಿಶೇಷ ಖಾದ್ಯಗಳನ್ನ ನೀಡುತ್ತಿದೆ ಎನ್ನುತ್ತಾರೆ ಗ್ರೀನ್‌ಪಾತ್‌ ಸಂಸ್ಥೆಯ ಮುಖ್ಯಸ್ಥ ಹಾಗೂ ಸಂತೆಯ ರೂವಾರಿ ಜಯರಾಮ್.‌

’ಸ್ವಾತಂತ್ರ್ಯೋತ್ಸವದಿನ ಸಂತೆ ಉದ್ಘಾಟನೆಯಾಗುತ್ತದೆ. ಮುಂದೆ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 7 ರಿಂದ 11 ಗಂಟೆಯವರೆಗೆ ಇದೇ ಜಾಗದಲ್ಲಿ ಪ್ರತಿ ವಾರವೂ ಸಾವಯವ ಸಂತೆ ನಡೆಯುತ್ತದೆ’ ಎಂದು ಜಯರಾಮ್ ತಿಳಿಸಿದರು.

‘ಸಂತೆಯಲ್ಲಿ ಸಾವಯವ ಪ್ರಮಾಣೀಕೃತ/ ದೃಢೀಕೃತ ಉತ್ಪನ್ನಗಳಿರುತ್ತವೆ. ಈ ಉತ್ಪನ್ನಗಳ ಸ್ಕ್ರೀನಿಂಗ್‌ಗಾಗಿಯೇ ಒಂದು ಸಮಿತಿ ಇರುತ್ತದೆ. ಈ ಸಮಿತಿ ಮಳಿಗೆಯಲ್ಲಿ ವಸ್ತುಗಳನ್ನು ಇಡುವ ಮುನ್ನ ಪರಿಶೀಲಿಸುತ್ತದೆ' ಎಂದು ಸಂತೆಯ ಪರಿಕಲ್ಪನೆ ಮತ್ತು ಉದ್ದೇಶವನ್ನು ಅವರು ವಿವಸಿದರು .

ಸಾವಯವ ಉತ್ಪನ್ನ ಮಾರಾಟದ ಜೊತೆಗೆ ಗ್ರಾಹಕರಿಗೆ ಸಾವಯವ ಉತ್ಪನ್ನಗಳ ಮಹತ್ವ, ಅವುಗಳನ್ನು ಬೆಳೆಯುವ ಶ್ರಮ, ಬೆಲೆ ನಿಗದಿ, ಪ್ರಮಾಣೀಕರಣ ಸೇರಿದಂತೆ ಹಲವು ಮಾಹಿತಿಗಳನ್ನು ತಿಳಿಸುವಂತಹ ಕಾರ್ಯಕ್ರಮ‌ಗಳನ್ನೂ ಮುಂದಿನ ದಿನಗಳಲ್ಲಿ ಆಯೋಜಿಸಲಾಗುತ್ತದೆಯಂತೆ.

ಸಮುದಾಯಗಳ ಸಹಕಾರದೊಂದಿಗೆ ಭವಿಷ್ಯದಲ್ಲಿ ನಗರದ ಅಪಾರ್ಟ್‌ಮೆಂಟ್‌ಗಳ ಅಂಗಳದಲ್ಲೂ ಈ ಸಾವಯವ ಸಂತೆಯನ್ನು ಆಯೋಜಿಸಲು ಯೋಜನೆ ರೂಪಿಸಿದ್ದಾರೆ. ಇದರಿಂದ ಗ್ರಾಹಕರಿಗೆ ಮನೆ ಬಾಗಿಲಿಗೆ ಶುದ್ಧ ಆಹಾರ ತಲುಪುತ್ತದೆ, ಬೆಳೆಗಾ ರರಿಗೂ ಉತ್ತಮ ಬೆಂಬಲ ಸಿಗುತ್ತದೆ’ ಆಯೋಜಕರ ಚಿಂತನೆ.

’ಸಾವಯವ ಸಂತೆ’ ಕುರಿತ ಹೆಚ್ಚಿನ ಮಾಹಿತಿಗೆ; 9538256777/9986666778)

ವಿಶೇಷ ಸೂಚನೆ : ‘ಸಾವಯವ ಸಂತೆ’ಗೆ ಬರುವ ಗ್ರಾಹಕರು ತಾವು ಖರೀದಿಸುವ ವಸ್ತುಗಳನ್ನು ಕೊಂಡೊಯ್ಯಲು ಕೈಚೀಲ (ಗಾಣದ ಎಣ್ಣೆಗಾಗಿ ಶೀಶೆ/ಸ್ಟೀಲ್ ಪಾತ್ರೆ ಮತ್ತಿತರ ವಸ್ತುಗಳನ್ನು (Bring Your Own Pakaging) ತರಬೇಕು .

ಗ್ರೀನ್ ಪಾತ್‌ನಲ್ಲಿ ಸಾವಯವ ಸಂತೆ
ಗ್ರೀನ್ ಪಾತ್‌ನಲ್ಲಿ ಸಾವಯವ ಸಂತೆ
ಗ್ರೀನ್ ಪಾತ್‌ನಲ್ಲಿ ಸಾವಯವ ಸಂತೆ
ಗ್ರೀನ್ ಪಾತ್‌ನಲ್ಲಿ ಸಾವಯವ ಸಂತೆ
ಗ್ರೀನ್ ಪಾತ್‌ನಲ್ಲಿ ಸಾವಯವ ಸಂತೆ
ಗ್ರೀನ್ ಪಾತ್‌ನಲ್ಲಿ ಸಾವಯವ ಸಂತೆ
ಗ್ರೀನ್‌ಪಾತ್‌ನಲ್ಲಿ ನಡೆದ ಸಾವಯವ ಸಂತೆ
ಗ್ರೀನ್‌ಪಾತ್‌ನಲ್ಲಿ ನಡೆದ ಸಾವಯವ ಸಂತೆ
ಗ್ರೀನ್‌ ಪಾತ್‌ನಲ್ಲಿ ಸಾವಯವ ಸಂತೆ
ಗ್ರೀನ್‌ ಪಾತ್‌ನಲ್ಲಿ ಸಾವಯವ ಸಂತೆ
ಗ್ರೀನ್‌ಪಾತ್‌ನಲ್ಲಿ ಸಾವಯವ ಸಂತೆ
ಗ್ರೀನ್‌ಪಾತ್‌ನಲ್ಲಿ ಸಾವಯವ ಸಂತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT