ನೋಡಲು ಇದು ಪಕ್ಕಾ ಕೋಳಿಯಂತೆಯೇ. ಆದರೆ ಕೋಳಿಯಲ್ಲ, ಬದಲಿಗೆ ಅದೇ ಜಾತಿಗೆ ಸೇರಿದ ಕಾಡೆ. 200ರಿಂದ 300 ಗ್ರಾಂ ತೂಗುವ ಕಾಡೆಯ ಕಬಾಬ್‌ಗೆ ಅತ್ಯಂತ ಬೇಡಿಕೆಯಿದೆ. ಹೀಗಾಗಿ ಕಾಡೆ ಸಾಕಿದರೆ ಆದಾಯ ಕಟ್ಟಿಟ್ಟ ಬುತ್ತಿ. ದುರದೃಷ್ಟವಶಾತ್ ಇದೊಂದು ಅಪರಿಚಿತವಾಗಿರುವ ಪಕ್ಷಿ. ತಮಿಳುನಾಡು, ಕೇರಳದಲ್ಲಿ ಮರಿಗಳು ಲಭ್ಯ.

ಒಂದು ಜೊತೆ ಮರಿಗೆ ₨ ೬೦. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಮೊಗ್ರು ಗ್ರಾಮದ ಕಡಮ್ಮಾಜೆಯ ದಿನಕರ ಗೌಡ ಅವರು ಒಂದು ಸಾವಿರ ಕಾಡೆಯನ್ನು ಸಾಕಿದ್ದಾರೆ. ಕೋಳಿಗಳಿಗೆ ನೀಡುವ ಅಕ್ಕಿ, ಗೋಧಿ ಇವುಗಳ ಆಹಾರ. ನಾಲ್ಕು ತಿಂಗಳಲ್ಲಿ ಕಾಡೆ ೨೦೦ ರಿಂದ ೩೦೦ ಗ್ರಾಂ ತೂಗುತ್ತದೆ. ಒಂದು ಜೊತೆ ₨ ೧೧೦ ರಂತೆ ಮಾರಾಟ ಮಾಡಿದ್ದಾರೆ.

‘ಕೋಳಿ ಮಾಂಸಕ್ಕಿಂತ ಇದರ ಮಾಂಸ ಹೆಚ್ಚು ರುಚಿ ಎನ್ನುವ ಕಾರಣಕ್ಕಾಗಿ ಕಾಡೆಗೆ ಬೇಡಿಕೆ ಹೆಚ್ಚುತ್ತಿದೆ’ ಎನ್ನುವ ದಿನಕರ್, ಪ್ರಾಯೋಗಿಕವಾಗಿ ತಂದ ಒಂದು ಸಾವಿರ ಕಾಡೆಗಳನ್ನು ಕೆಲವೇ ದಿನಗಳಲ್ಲಿ ಮಾರಾಟ ಮಾಡಿದ್ದಾರೆ. ಕೋಳಿಮರಿಯಂತೆ ಇವನ್ನು ಸಾಕಬಹುದು. ಹೆಚ್ಚಿನ ಮಾಹಿತಿಗಾಗಿ ದಿನಕರ್ ಅವರ ಸಂಪರ್ಕ ಸಂಖ್ಯೆ ೯೭೪೧೮೩೫೮೮೦.
–ಚಂದ್ರಹಾಸ ಚಾರ್ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.