ಈ ಮನೆಯ ಮುಂಭಾಗದಲ್ಲಿ ಇರುವ ಪ್ಲಾಸ್ಟಿಕ್ ಡ್ರಮ್ ಮೈಯೆಲ್ಲಾ ಕಣ್ಣು. ಹತ್ತಿರ ಹೋಗಿ ಗಮನಿಸಿದರೆ ಪ್ರತಿ ಕಣ್ಣೂ ಹಸಿರು, ಹಸಿರು. ಒಂದು ಕಣ್ಣಿನಿಂದ ಟೊಮೆಟೊ ಹೊರಬಂದಿದ್ದರೆ, ಇನ್ನೊಂದರಿಂದ ಸೀಮೆ ಬದನೆ, ಮತ್ತೊಂದರಿಂದ ಮೆಣಸಿನಕಾಯಿ, ಬಳ್ಳಿ ಗಿಡಗಳು... ಹೀಗೆ ತರಕಾರಿಗಳ ರಾಶಿ...ಇದು ಬೆಂಗಳೂರಿನ ಯಲಹಂಕ ಉಪನಗರದಲ್ಲಿರುವ ನರೇಂದ್ರ ಅವರ ಮನೆಯ ಚಿತ್ರಣ. ನಗರ ಕೃಷಿಯ ಹೊಸ ಸಾಧ್ಯತೆ ಇವರ ಮನೆಯಲ್ಲಿ ಅನಾವರಣಗೊಂಡಿದೆ.

ಪ್ರತಿ ಕುಟುಂಬ ತನ್ನ ತಿಂಗಳ ಬಜೆಟ್ನ ಬಹುದೊಡ್ಡ ಮೊತ್ತವನ್ನು ತರಕಾರಿಗೆ ವ್ಯಯಿಸುತ್ತದೆ. ಅಷ್ಟು ತೆತ್ತು ನಾವು ತರುವ ತರಕಾರಿಯನ್ನು ಯಾವ ವಿಧಾನದಲ್ಲಿ ಬೆಳೆಯಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಹೀಗಾಗಿ ಲಭ್ಯ ಸ್ಥಳದಲ್ಲಿ ಮನೆಗೆ ಬೇಕಾಗುವಷ್ಟು ತರಕಾರಿಗಳನ್ನು ಸಾವಯವ ವಿಧಾನದಲ್ಲಿ ಸುಲಭವಾಗಿ ಬೆಳೆದುಕೊಳ್ಳುವ ಉದ್ದೇಶದಿಂದ ಅಧ್ಯಯನ ನಡೆಸಿದಾಗ ನರೇಂದ್ರ ಅವರಿಗೆ ಹೈಡ್ರೋಫೋನಿಕ್ ತಂತ್ರದ ಮಾಹಿತಿ ದೊರೆಯಿತು.

ಏನು ಬೇಕು?
ಈ ವಿಧಾನದಲ್ಲಿ ತರಕಾರಿ ಬೆಳೆಯಲು ಬೇಕಾಗಿರುವುದು ಕೆಲವೇ ಉಪಕರಣಗಳು. ಚೆನ್ನಾಗಿ ಬಿಸಿಲು ಬೀಳುವ ೨ ಚದರ ಅಡಿ ಜಾಗ, ಒಂದು ಪ್ಲಾಸ್ಟಿಕ್ ಡ್ರಮ್, ಪಿ.ವಿ.ಸಿ ಪೈಪ್ ತುಂಡುಗಳು, ನೀರು ಕುಡಿಯಲು ಬಳಸುವ ಪ್ಲಾಸ್ಟಿಕ್ ಲೋಟಗಳು, ಎಂ ಸೀಲ್, ೨೫ ಲೀಟರ್ ನೀರು, ಸ್ವಲ್ಪ ಭತ್ತದ ಹುಲ್ಲು ಅಥವಾ ಈರುಳ್ಳಿ ಚೀಲ.

ವಿಧಾನ: ಮನೆಯ ತಾರಸಿ ಮೇಲೆ ಪ್ಲಾಸ್ಟಿಕ್ ಡ್ರಮ್ಗಳನ್ನಿಟ್ಟು, ಅದರ ಮೇಲೆ ಲೋಟದ ಅಗಲದ ರಂಧ್ರ ಮಾಡಿ, ೪೫ ಡಿಗ್ರಿ ಓರೆಯಲ್ಲಿ ಕೊರೆದ ಪಿವಿಸಿ ಪೈಪ್ ತುಂಡುಗಳನ್ನು ಕೂಡಿಸಬೇಕು. ನೀರು ಸೋರದಂತೆ ಎಂಸೀಲ್ನಿಂದ ಮುಚ್ಚಬೇಕು. ಪ್ಲಾಸ್ಟಿಕ್ ಲೋಟಗಳಿಗೆ ೯ ರಂಧ್ರ ಕೊರೆದು ಕೊಂಚ ಭತ್ತದ ಹುಲ್ಲು ತುಂಬಿ ರಂಧ್ರದೊಳಗೆ ಸೇರಿಸಿ ಗಿಡ ಇಡಬೇಕು. ಡ್ರಮ್ನ ಮುಚ್ಚಳದ ಮಧ್ಯಭಾಗದಲ್ಲೊಂದು ರಂಧ್ರ ಕೊರೆದು ತಳದಿಂದ ಪೈಪ್ ಅಳವಡಿಸಿ ಮೋಟರ್ ಜೋಡಿಸಬೇಕು. ಮುಚ್ಚಳದ ಸುತ್ತಲೂ ಸಾಕಷ್ಟು (೪–೫) ಸಣ್ಣಸಣ್ಣ ರಂಧ್ರಗಳನ್ನು ಕೊರೆಯಬೇಕು. ಪ್ರತಿ ಗಂಟೆಗೊಮ್ಮೆ ೫ ನಿಮಿಷ ಗಿಡಗಳ ಬುಡ ನೆನೆಯುವಂತೆ ನೀರು ಹನಿಸಿದರೆ ಸಾಕು. ಸಮಯಕ್ಕೆ ಸರಿಯಾಗಿ ಮೋಟರ್ ಚಾಲು ಆಗುವಂತೆ ಟೈಮರ್ ಬಳಸಬಹುದು.

ಗಿಡಗಳು ಸ್ವಲ್ಪ ದೊಡ್ಡದಾದ ನಂತರ ಪ್ಲಾಸ್ಟಿಕ್ ಲೋಟಗಳ ತಳ ಕೊರೆಯಬೇಕು. ಬೇರುಗಳು ಡ್ರಮ್ನ ಒಳ ಗೋಡೆಗಳಿಗೆ ಬಿಗಿಯಾಗಿ ಹಿಡಿದು ಬೆಳೆಯುತ್ತವೆ. ಡ್ರಮ್ಗಳ ತಳ ತೆಗೆದು ಒಂದರ ಮೇಲೊಂದರಂತೆ ೩ ಡ್ರಮ್ಗಳನ್ನು ಕೂಡಿಸಬಹುದು. ಹೀಗೆ ಮಾಡುವ ಮೂಲಕ ಕೇವಲ ೩ ಅಡಿ ವಿಸ್ತೀರ್ಣದಲ್ಲಿ ೯೬ ಗಿಡಗಳನ್ನು ಬೆಳೆಯಲು ಸಾಧ್ಯವಿದೆ.

ಗಿಡಗಳನ್ನು ಕಾಯರ್ಪಿಟ್ನಲ್ಲಿ (ತೆಂಗಿನನಾರಿನ ಪುಡಿ) ಸಿದ್ಧಪಡಿಸಿಕೊಂಡು ಡ್ರಮ್ಗೆ ಸೇರಿಸಬಹುದು. ನರೇಂದ್ರ ಅವರ ಅನುಭವದ ಪ್ರಕಾರ, ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುವ ರೈತರಿಂದ ಬೀಜ ಅಥವಾ ಕಡ್ಡಿಗಳನ್ನು ತಂದು ನಾಟಿ ಮಾಡಿ ಡ್ರಮ್ಗೆ ಸೇರಿಸುವುದು ಉತ್ತಮ. ಡ್ರಮ್ಗೆ ಸೇರಿಸುವ ಸಸಿಗಳು ೩–೪ ಇಂಚು ಉದ್ದವಿರಬೇಕು. ಬೇರು ಚೆನ್ನಾಗಿ ಬಂದಿರಬೇಕು.

ಪೋಷಕಾಂಶ: ಮಣ್ಣೇ ಇಲ್ಲದೆ ಬೆಳೆಯುವ ಗಿಡಗಳಾದ ಕಾರಣ ಅವುಗಳಿಗೆ ಅವಶ್ಯ ಪೋಷಕಾಂಶಗಳನ್ನು ನೀರಿನ ಮೂಲಕವೇ ಕೊಡಬೇಕಾಗುತ್ತದೆ. ೫೦ ಗ್ರಾಂ ಸೆಗಣಿ, ೫೦ ಮಿ.ಲೀ ಗಂಜಲ, ೨೦ ಗ್ರಾಂ ಕರಿ ಬೆಲ್ಲದ ಪುಡಿ, ೨೦ ಗ್ರಾಂ ಕಡಲೆ ಹಿಟ್ಟನ್ನು ಮಿಶ್ರಣ ಮಾಡಿ, ೩ ದಿನ ಬಿಟ್ಟು ೪ ಲೀಟರ್ ನೀರಿಗೆ ಬೆರೆಸಿ ಒಂದು ವಾರದಲ್ಲಿ ಒಟ್ಟಾರೆ ೧೦೦ ಮಿ.ಲೀ ನಂತೆ ಡ್ರಮ್ಗೆ ಸೇರಿಸಬೇಕು. ಕೆಲವು ಅಂಗಡಿಗಳಲ್ಲಿ ಸಿದ್ಧಪಡಿಸಿದ ರೆಡಿಮೇಡ್ (ಸಾವಯವ) ಸಸ್ಯ ಪೋಷಕಾಂಶಗಳನ್ನು ಮಾರುತ್ತಾರೆ. ಅವನ್ನೂ ತಂದು ಹಾಕಬಹುದು. ಗಿಡಗಳ ಮೇಲೆ ಸ್ವಲ್ಪ ಕಾಲವಾದರೂ ಬಿಸಿಲು ಬೀಳುವಂತೆ ಎಚ್ಚರವಹಿಸಬೇಕು.

ಎಲ್ಲೆಲ್ಲಿ ಏನೇನು?
ಡ್ರಮ್ನ ತಳ ಮಟ್ಟದಲ್ಲಿ ಕುಂಬಳ, ಹಾಗಲ, ತೊಂಡೆ ಸೇರಿದಂತೆ ಯಾವುದೇ ಬಳ್ಳಿ ತರಕಾರಿ ಬೆಳೆಯುವುದು ಸೂಕ್ತ. ಒಂದೊಂದೇ ಹಂತ ಮೇಲೆ ಹೋದಂತೆ ಹೆಚ್ಚು ಆಧಾರ ಬಯಸದ ಹೂಕೋಸು, ಎಲೆಕೋಸು, ಬದನೆಕಾಯಿ, ಸೀಮೆಬದನೆಯಂಥ ಗಿಡಗಳನ್ನು ಹಾಕಬಹುದು. ತಾಂತ್ರಿಕತೆಯಲ್ಲಿ ಕೊಂಚ ಮಾರ್ಪಾಟು ಮಾಡಿಕೊಂಡರೆ ಆಲೂಗಡ್ಡೆ– ಗೆಣಸನ್ನೂ ಬೆಳೆಯಬಹುದು.

ದೊಡ್ಡಮಟ್ಟದಲ್ಲಿ ಮಾರುಕಟ್ಟೆಗೆ ಮಾರಲು ಸಾಧ್ಯವಾಗುವಷ್ಟು ಬೆಳೆಯದಿದ್ದರೂ ಮನೆಯ ಮಟ್ಟಿಗೆ ತರಕಾರಿಗಳನ್ನು ಈ ವಿಧಾನದಲ್ಲಿ ಖಂಡಿತ ಬೆಳೆದುಕೊಳ್ಳಬಹುದು ಎನ್ನುತ್ತಾರೆ ನರೇಂದ್ರ. ಮಾಹಿತಿಗೆ ಈ ಮೇಲ್ drnaren@yahoo.com, ಮೊಬೈಲ್: ೯೦೦೮೪೫೦೪೮೬ (ಸಂಜೆ ೬ರ ನಂತರ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.