ಅಕ್ರಮ ಅನ್ನಭಾಗ್ಯ ಅಕ್ಕಿ ಪತ್ತೆ: ಮಾಲೀಕನ ವಿರುದ್ಧ ದೂರು

ರಾಯಚೂರು: ನಗರದ ಹೊರವಲಯ ಗದ್ವಾಲ್ ಮಾರ್ಗದಲ್ಲಿರುವ ನರಸಿಂಹ ರೈಸ್ ಮಿಲ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಅನ್ನಭಾಗ್ಯ ಅಕ್ಕಿ ಪತ್ತೆಯಾಗಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಭಾರಿ ಉಪನಿರ್ದೇಶಕ ಎನ್. ಅಮರಣ್ಣ ಹಾಗೂ ಇನ್ ಸ್ಪೆಕ್ಟರ್ ವೆಂಕಣ್ಣ ನೇತೃತ್ವದಲ್ಲಿ ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿ ಅಕ್ರಮ ಬಯಲಿಗೆ ತಂದಿದ್ದಾರೆ.

'ಮಿಲ್ ಮಾಲೀಕ ಭಂಗಿ ನರಸರಡ್ಡಿ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಲಾಗುವುದು. ಅಕ್ಕಿಯನ್ನು ರಾಶಿ ಹಾಕಲಾಗಿದ್ದು, ಅದನ್ನು ಮೂಟೆ ತುಂಬಿಸುವ ಕೆಲಸ ನಡೆಯುತ್ತಿದೆ. ಅಕ್ಕಿಯನ್ನು ಕೆಎಸ್ ಎಫ್ ಸಿ ಗೋದಾಮಿಗೆ ಕಳುಹಿಸಲಾಗುವುದು. ಅಂದಾಜು 50 ಕೆಜಿ ತೂಕದ 600 ಮೂಟೆಗಳಷ್ಟು ಅಕ್ಕಿ ಇರಬಹುದು' ಎಂದು ಅಮರಣ್ಣ ತಿಳಿಸಿದ್ದಾರೆ.

ಪ್ರಮುಖ ಸುದ್ದಿಗಳು