ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: 20ನೇ ಬಾರಿ ಮತದಾನ ಮಾಡಿದ 86ರ ವೃದ್ಧ

Published 26 ಏಪ್ರಿಲ್ 2024, 6:14 IST
Last Updated 26 ಏಪ್ರಿಲ್ 2024, 6:14 IST
ಅಕ್ಷರ ಗಾತ್ರ

ಬೆಂಗಳೂರು: ಸಿ.ವಿ.ರಾಮನ್ ನಗರ ನಿವಾಸಿ ಶಿವರಾಮಕೃಷ್ಣ ಶಾಸ್ತ್ರಿ ಅವರು ತಮ್ಮ 86ನೇ ವಯಸ್ಸಿನಲ್ಲೂ ಉತ್ಸಾಹದಿಂದ ಮತಗಟ್ಟೆಗೆ ಬಂದು 20ನೇ ಬಾರಿ ಮತದಾನ ಮಾಡಿದರು.

ಹಿರಿಯ ನಾಗರಿಕರಿಗೆ ಮನೆಯಲ್ಲಿ‌ ಮತದಾನ ಮಾಡಲು ಅವಕಾಶವಿತ್ತು. ಆದರೆ, ಮತಗಟ್ಟೆಯಲ್ಲೇ ಮತದಾನ ಮಾಡಬೇಕೆಂದು ಶಿವರಾಮಕೃಷ್ಣ ಶಾಸ್ತ್ರಿ ಅವರು ತೀರ್ಮಾನಿಸಿದ್ದರು. ಹೀಗಾಗಿ, ಮಗ ಹಾಗೂ ಸೊಸೆ ಜೊತೆ, ಡಿಆರ್‌ಡಿಒ ಕೇಂದ್ರಿಯ ವಿದ್ಯಾಲಯದ ಮತಗಟ್ಟೆಗೆ ಬಂದು‌ ಮತ ಚಲಾವಣೆ ಮಾಡಿದರು. ಅವರನ್ನು ಪೊಲೀಸರು, ವ್ಹೀಲ್ ಚೇರ್‌ನಲ್ಲಿ‌ ಮತಗಟ್ಟೆಗೆ ಕರೆದೊಯ್ದು ಮತ ಚಲಾಯಿಸಲು ಅನುಕೂಲ‌ಮಾಡಿ ಕೊಟ್ಟರು.

'ಮತದಾನ ನಮ್ಮ ಹಕ್ಕು. ಮನೆಯಲ್ಲಿ ಮತದಾನ ಮಾಡಿದರೆ ಅದರ ಮಹತ್ವ ತಿಳಿಯುವುದಿಲ್ಲ. ಜನರೂ ಭೇಟಿಯಾಗುವುದಿಲ್ಲ. ಅದಕ್ಕೆ‌ ಮತಗಟ್ಟೆಗೆ ಬಂದಿದ್ದೇನೆ. ಇಲ್ಲಿ ಎಲ್ಲರೂ‌ ಭೇಟಿಯಾಗುತ್ತಾರೆ. ಖುದ್ದು ಮತಗಟ್ಟೆಯಲ್ಲಿ‌ ಮತ ಚಲಾಯಿಸಿದರೆ ಮನಸ್ಸಿಗೆ ಖುಷಿ' ಎಂದು ಶಿವರಾಮಕೃಷ್ಣ ಶಾಸ್ತ್ರಿ‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT