ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗಂ ವಿಶ್ವಕವಿ ಸಮ್ಮೇಳನ: ದುರಿತಕಾಲದಲಿ ಸತ್ಯದತ್ತ ಕವಿಧ್ವನಿ

ಮಾತಿನಿಂದ ಮೌನದವರೆಗೂ
Last Updated 21 ಅಕ್ಟೋಬರ್ 2022, 8:08 IST
ಅಕ್ಷರ ಗಾತ್ರ

ಬಳ್ಕಾರಿ, (ಡಾ.ಜೋಳದರಾಶಿ ದೊಡ್ನಾಗೌಡರ ವೇದಿಕೆ: ಭಾಷೆಯ ಭಾಷ್ಯ ಯಾವುದು, ಮಾತು, ಮೌನ, ಸ್ಪರ್ಶ ಎಂಬ ಕವಿತೆಯು ಇಸ್ಲೇಲ್‌ನ ಕವಿ ಅಮೀರ್‌ ಔರ್‌ ಹೇಳುತ್ತ ಸಂಗಮ್‌ ವಿಶ್ವಕವಿ ಸಮ್ಮೇಳನದ ಮೊದಲ ಗೋಷ್ಠಿಗೆ ನಾಂದಿ ಹಾಡಿದರು.

ಮೂಕನಾಗಿರಬೇಕು ಜಗದೊಳು ಎಂದು ಕಡಕೋಳ ಮಡಿವಾಳಪ್ಪನವರ ತತ್ವಪದದ ಸಾಲುಗಳೊಂದಿಗೆ ಪ್ರೊ. ರಾಬರ್ಟ್‌ಜೋಸ್‌ ಅವರುಸಾಲನ್ನು ಉದ್ಧರಿಸುತ್ತ, ಹೀಬ್ರು ಭಾಷೆಯಿಂದ ಕನ್ನಡದವರೆಗೂ ಜಗದ ಕವಿತ್ವದ ಬಗ್ಗೆ ಬೆಳಕು ಚೆಲ್ಲಿದರು.

ಬಳ್ಳಾರಿಯಲ್ಲಿ ಶುಕ್ರವಾರ ಆರಂಭವಾದ ಅರಿವು ಸಂಸ್ಥೆಯ ಸಂಗಂ ವಿಶ್ವಕವಿ ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ ಒಟ್ಟು ಎಂಟು ಕವಿತೆಗಳನ್ನು ಓದಲಾಯಿತು. ಆಮೀರ್‌ ಓರ್‌, ಭಾಷೆಯು ಹೇಳುತ್ತಿದೆ, ದೇಗುಲದ ಬಳಿ, ದೇವರ ಬಳಿ ಎಂಬ ಕವಿತೆಗಳನ್ನು ಹೇಳುತ್ತಲೇ ಗೋಷ್ಠಿಗೆ ಸೂಫಿತನ ಸ್ಪರ್ಶ ನೀಡಿದರು. ಈ ಕವಿತೆಗಳನ್ನು ಭಾಗ್ಯ ಸಿಎಚ್‌ ಅವರು ಅನುವಾದಿಸಿದ್ದು, ಸಿದ್ದು ದೇವರಮನಿ ಅವರು ವಾಚಿಸಿದರು.

ನಂತರ ತಮಿಳಚ್ಚಿ ತಂಗಪಾಂಡ್ಯನ್‌ ಕಾವ್ಯನಾಮದಲ್ಲಿ ಕವಿತೆಗಳನ್ನು ಬರೆಯುತ್ತಿರುವ ಟಿ ಸುಮತಿ ಅವರು ವಿಸ್ತೃತ ಮಧ್ಯಾಹ್ನ, ಕೈಗೆಟಕು ಕಡುಗತ್ತಲೆ ಹಾಗೂ ವನ ಅಪ್ಸರೆ ಕವಿತೆಗಳನ್ನು ವಾಚಿಸಿದರು. ‘ನಿಧಾನವಾಗಿ ತ್ವರಿತಗತಿಯಲ್ಲಿ ಮಾಡಬೇಕು’ ಎಂಬಂಥ ವೈರುಧ್ಯಗಳನ್ನು ಸೃಷ್ಟಿಸುವಂಥ ಕಾವ್ಯದ ಗುಣ ಈ ಕವಿತೆಗಳಿಗಿದ್ದವು ಎಂದು ನುಡಿಸ್ಪಂದನೆಯಲ್ಲಿ ಮಾತನಾಡಿದ ರಾಬರ್ಟ್‌ ಜೋಸ್‌ ಅವರು ಈ ಕವಿತೆಗಳ ಸಾರವನ್ನು ಹೇಳಿದರು. ಸುಮತಿ ಅವರ ಕವಿತೆಗಳನ್ನು ಕಮಲಾಕರ ಕಡವೆ ಅನುವಾದಿಸಿದ್ದನ್ನು ಸುಮಾಗುಡಿ ವಾಚಿಸಿದರು

ಮಂಡ್ಯದ ರಾಜೇಂದ್ರ ಪ್ರಸಾದ್‌ ಅವರು ಭಾರತ ನಡೆಯುತ್ತಿದೆ ಮತ್ತು ಹೃದಯ ಎಂಬ ಕವಿತೆಗಳನ್ನು ವಾಚಿಸಿದರು. ಪ್ರತಿ ಕವಿತೆಯ ಆಂಗ್ಲ ಅನುವಾದದ ಬರಹ ವೇದಿಕೆಯ ಮೇಲಿನ ಪರದೆಯ ಮೇಲೆ ಕವಿತೆ ಓದುವಾಗಲೇ ಮೂಡುತ್ತಿತ್ತು. ಕವಿತೆಗಳನ್ನು ಕನ್ನಡದಲ್ಲಿಯೂ ಅನುವಾದಿಸಿದ್ದು, ಅವನ್ನೂ ವಾಚನ ಮಾಡಲಾಯಿತು.


‘ಇದೊಂದು ದುರಿತ ಕಾಲ, ಸತ್ಯದ ಕಾಲ, ಕೋವಿಡ್‌ ನಂತರದ ಕಾಲ, ಕೋವಿಡ್‌ ಪೂರ್ವ ಕಾಲ ಎಂದೆಲ್ಲ ಬಣ್ಣಿಸಲಾಗುತ್ತಿದೆ. ಇದು ಸತ್ಯದ ಕಾಲ ಎಂಬಂತೆ ಹಲವು ಸತ್ಯಗಳನ್ನು ಇಲ್ಲಿ ಕವಿಗಳು ಪ್ರಸ್ತುತ ಪಡಿಸಿದರು. ಸತ್ಯವೆಂಬುದು ಏಕ ಮಾರ್ಗದಲ್ಲಿ ಸಾಗುತ್ತಿದೆಯೇ, ಬಹುತ್ವವಾಗಿದೆಯೇ ಎಂವಬ ವೈರುಧ್ಯಗಳ ನಡುವೆಯೇ, ಕಾಲದೊಂದಿಗೆ ಸ್ಪಂದಿಸುತ್ತ, ಈ ಕವಿಗಳು ಈ ಕಾಲದ ಸಂಘರ್ಷಗಳಿಗೆ ಧ್ವನಿಯಾಗಿದ್ದಾರೆ ಎಂದರು.

ಒಂದು ಗಂಟೆ ತಡವಾಗಿ ಗೋಷ್ಠಿ ಆರಂಭವಾಯಿತು. ಕನ್ನಡದ ಕವಿತೆಗಳನ್ನ ಆಂಗ್ಲಭಾಷೆಯಲ್ಲಿಯೂ ವಾಚಿಸಿದ್ದರೆ ಇಡೀಗೋಷ್ಠಿ ಪರಿಪೂರ್ಣವೆನಿಸುತ್ತಿತ್ತು.

ಕವಿಕಾವ್ಯಗಳ ನಡುವೆ..

ಕುತೂಹಲದ ದೃಷ್ಟಿ, ಸಣ್ಣದೊಂದು ಮುಗುಳು ಕಿವಿಯಿಂದ ಕಿವಿಯವರೆಗೂ ಹರಡುವುದು. ಆಮೇಲೆ ಆತ್ಮೀಯವಾದ ಹಸ್ತಲಾಘವ, ಸಣ್ಣದೊಂದು ಅಪ್ಪುಗೆ.. ಕವಿ ಕಾವ್ಯದ ಓದಿಗೂ ಮುನ್ನವೇ ಹಲವಾರು ಕವಿತೆಗಳು ಮುಗುಳ್ನಕ್ಕವು, ಡಾ.ಜೋಳದರಾಶಿ ದೊಡ್ಡನಗೌಡರ ವೇದಿಕೆಯಲ್ಲಿ.

ಎಚ್‌.ಎಸ್‌.ಶಿವಪ್ರಕಾಶ್‌ ಸಭಾಂಗಣಕ್ಕೆ ಆಗಮಿಸಿದ ತಕ್ಷಣ, ದೇಶದ ಎಲ್ಲೆಡೆಯಿಂದ ಬಂದವರೆಲ್ಲ ಅಪ್ಪಿದರು.ಬಳ್ಳಾರಿಯಲ್ಲಿ 21ರಿಂದ 23ರವರೆಗೆ ನಡೆಯಲಿರುವ ಸಂಗಂ ವಿಶ್ವಕವಿ ಸಮ್ಮೇಳನದ ಝಲಕುಗಳಿವು.

ಕವಿಗಳ ಕೈಲಿದ್ದ ಕ್ಯಾಮೆರಾಗಳು ಈ ಕ್ಷಣಗಳನ್ನು ಸೆರೆಹಿಡಿಯಲು ಕ್ಲಿಕ್ಕಿಸುತ್ತ, ನವ ಸಂಚಲನವನ್ನೇ ಮೂಡಿಸುವಂತೆ ಮಿಂಚುತ್ತಿದ್ದವು. ಇವರ ಮಿಂಚಿಗೆ ಸೆಡ್ಡು ಹೊಡೆಯುವಂತೆ ಕ್ಯಾಮೆರಾ ಸಹ ಮಿಂಚುತ್ತಿದ್ದವು.

ರಮೇಶ್‌ ಗಬ್ಬೂರ್‌ ತಂಡ ಬಸವಣ್ಣನ ವಚನಗಳನ್ನು ಪ್ರಸ್ತುತಪಡಿಸಿದರು. ಅಮರೇಶ್‌ ನುಗಡೋಣಿ, ಜಿ.ಪಿ. ಬಸವರಾಜ್‌, ಸುಜಾತಾ ಎಚ್‌.ಆರ್‌, ಜಿ.ಪಿ. ಬಸವರಾಜು, ಮತ್ತಿತರರು ಕವಿಗೋಷ್ಠಿಯನ್ನು ಆನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT