ಜನರಲ್ ಕೆ.ಎಸ್. ತಿಮ್ಮಯ್ಯನವರ ಬದುಕಿನ ಎಲ್ಲಾ ಪ್ರಮುಖ ಘಟನಾವಳಿಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶದಿಂದ ಅವರು ಹುಟ್ಟಿ ಬೆಳೆದ ‘ಸನ್ನಿ ಸೈಡ್’ ಮನೆಯನ್ನು ವಿಶೇಷ ವಸ್ತು ಸಂಗ್ರಹಾಲಯವಾಗಿ ಮಾರ್ಪಡಿಸಲಾಗಿದೆ...

ಕಣ್ಣು ಹಾಯಿಸಿದ ಕಡೆಯೆಲ್ಲಾ ಕವಿ ಕುವೆಂಪು ಹೇಳಿದಂತೆ ದೇವರ ರುಜುವಿನ ಹಾಗೆ ಗೋಚರಿಸುವ ಹಸಿರು ಸಿರಿ ಸೊಬಗಿನ ಪ್ರಕೃತಿಯ ನೆಲೆವೀಡು ನಮ್ಮ ಕೊಡಗು. ಇದು ದೇಶವನ್ನು ರಕ್ಷಿಸುವ ವೀರ ಸೈನಿಕರ ತವರೂರು ಹೌದು. ನಮ್ಮ ದೇಶದ ರಕ್ಷಣಾ ಪಡೆಗಳನ್ನು ಮುನ್ನಡೆಸಿದ ಇಲ್ಲಿನ ಹಲವಾರು ವೀರಯೋಧರ ಪಟ್ಟಿಯಲ್ಲಿ ಎದ್ದು ಕಾಣಿಸುವವರು ಫೀಲ್ಡ್ ಮಾರ್ಷಲ್ ಕಾರಿಯಪ್ಪ ಹಾಗೂ ಜನರಲ್ ಕೆ. ಎಸ್. ತಿಮ್ಮಯ್ಯ.

ಜನರಲ್ ಕೆ. ಎಸ್. ತಿಮ್ಮಯ್ಯನವರು ಹುಟ್ಟಿ ಬೆಳೆದ ಮಡಿಕೇರಿಯ ಬೃಹತ್ ಬಂಗಲೆ ‘ಸನ್ನಿ ಸೈಡ್’ ಅನ್ನು ವಿಶೇಷ ವಸ್ತು ಸಂಗ್ರಹಾಲಯವಾಗಿ ಮಾರ್ಪಾಡು ಮಾಡಲಾಗಿದೆ. ಇದು 2021ರಲ್ಲಿ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಉದ್ಘಾಟನೆಗೊಂಡಿತು. ಈ ಸಂಗ್ರಹಾಲಯವು ಕೊಡಗಿಗೆ ಭೇಟಿ ನೀಡಿ, ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುವ ಪ್ರವಾಸಿಗರಿಗೆ ವಿಶೇಷ ಮಾಹಿತಿಗಳನ್ನು ನೀಡಿ ತಮ್ಮ ಪ್ರವಾಸವನ್ನು ಇನ್ನಷ್ಟು ಅರ್ಥಪೂರ್ಣವಾಗಿಸುವ ತಾಣವಾಗಿದೆ. ಇದು ಸುಪ್ರಸಿದ್ಧ ಸೈನಿಕನೋರ್ವನ ಅದ್ಭುತ ಸಾಧನೆಗಳ ಅನಾವರಣ ಮಾಡುವುದರ ಜೊತೆಗೇ ನಮಗೆ ಕೊಡವ ಜನಪದದ ವಿಶಿಷ್ಟ ಸಂಸ್ಕೃತಿಯನ್ನೂ ಬಹಳ ಚೆನ್ನಾಗಿ ಪರಿಚಯಿಸುತ್ತದೆ.

1906ರಲ್ಲಿ ಇದೇ ಮನೆಯಲ್ಲಿ ಜನಿಸಿದ ಕೊಡೆಂಡರ ಸುಬ್ಬಯ್ಯ ತಿಮ್ಮಯ್ಯ (ಕೆ.ಎಸ್.ತಿಮ್ಮಯ್ಯ) ನವರು ಕೊಡಗಿನ ಅತ್ಯಂತ ಶ್ರೀಮಂತ ಹಾಗೂ ಪ್ರತಿಷ್ಠಿತ ಮನೆತನವಾದ ಚಪ್ಪುದಿರ ಕುಟುಂಬದಲ್ಲಿ ಹುಟ್ಟಿದವರು. ಅವರ ತಂದೆ ಸುಬ್ಬಯ್ಯ ಬಹಳ ಸಿರಿವಂತರು ಹಾಗೂ ತಾಯಿ ಸೀತಮ್ಮ ಪ್ರಸಿದ್ಧ ಸಮಾಜ ಸೇವಕಿಯಾಗಿದ್ದರು. ತಮ್ಮ ಸಮಾಜ ಸೇವೆಗೆ ಕೈಸರ್- ಇ- ಹಿಂದ್ ಪದಕವನ್ನು ಪಡೆದಿದ್ದರು. ತಿಮ್ಮಯ್ಯನವರ ಪತ್ನಿ ನೀನಾ ಸಹ ಸುಪ್ರಸಿದ್ಧ ನೃತ್ಯಗಾರ್ತಿ ಹಾಗೂ ಸಮಾಜ ಸೇವಕಿ.
ತಿಮ್ಮಯ್ಯನವರ ಅತ್ಯಂತ ವಿಶಿಷ್ಟವಾದ ಸೇನಾ ಸೇವೆ 35 ವರ್ಷಗಳಷ್ಟು ಸುದೀರ್ಘವಾದದ್ದು. ಇದರಲ್ಲಿ ಅವರು ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಬರ್ಮಾದ ಇನ್ಫ್ಯಾಂಟರಿ ಬ್ರಿಗೇಡ್ ಅನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಅಷ್ಟೇ ಅಲ್ಲದೆ ಸ್ವಾತಂತ್ರ್ಯಾನಂತರ 1948ರಲ್ಲಿ ನಡೆದ ಪಾಕಿಸ್ತಾನ ದಾಳಿಯನ್ನು ಅತ್ಯಂತ ಯಶಸ್ವಿಯಾಗಿ ಹಿಮ್ಮೆಟ್ಟಿಸಿ ನಮ್ಮ ದೇಶದ ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತೀಯ ಸೇನೆಯಲ್ಲಿ ಅತ್ಯುನ್ನತ ಹುದ್ದೆಯಾದ ಆರ್ಮಿ ಚೀಫ್ ಪದವಿಗೇರಿದ್ದರು ಹಾಗೂ ಅತ್ಯುನ್ನತ ರ್ಯಾಂಕ್ ಆದ ಜನರಲ್ ಸಹ ಆಗಿದ್ದವರು. ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿಯೇ ಸೇನೆಯ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದ ತಿಮ್ಮಯ್ಯನವರು ಆಗಿನ ಸಂದರ್ಭದಲ್ಲಿ, ಬ್ರಿಟಿಷರು, ಸೈನ್ಯದಲ್ಲಿದ್ದು ಭಾರತೀಯರನ್ನು ತಿರಸ್ಕಾರದಿಂದ ನೋಡುತ್ತಿದ್ದ ಅವಮಾನಗಳನ್ನೂ ಅನುಭವಿಸಿದ್ದರು. ಬ್ರಿಟಿಷರ ಆಳ್ವಿಕೆಯಲ್ಲಿ ಬಾಗ್ದಾದ್, ಹೈದರಾಬಾದ್, ಅಲಹಾಬಾದ್ ರೆಜಿಮೆಂಟ್ಗಳಲ್ಲಿ ಸೇವೆ ಸಲ್ಲಿಸಿದ್ದ ತಿಮ್ಮಯ್ಯನವರು, 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ಉತ್ತುಂಗ ಸ್ಥಿತಿಯಲ್ಲಿದ್ದಾಗ, ಭಾರತೀಯ ಹೋರಾಟಗಾರರ ಮೇಲೆ ಆಕ್ರಮಣ ನಡೆಸದೆ ಹೋರಾಟಗಾರರ ಜೊತೆಗೆ ಶಾಂತಿಯುತವಾದ ಸಂಧಾನ ಮಾಡಿದ್ದರು. ಅಂದಿನ ಅವಿಭಜಿತ ಭಾರತದಲ್ಲಿದ್ದ ಈಗಿನ ಪಾಕಿಸ್ತಾನದ ಕ್ವೆಟ್ಟಾದಲ್ಲಿ ಸಂಭವಿಸಿದ ಭಯಾನಕ ಭೂಕಂಪದಲ್ಲಿ ಸಂತ್ರಸ್ತರನ್ನು ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1943ರಲ್ಲಿ ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ, ಜಪಾನೀಯರ ವಿರುದ್ಧ ಹೋರಾಡಲು ಬರ್ಮಾಕ್ಕೆ ತೆರಳಿ, ಜಪಾನೀಯರ ಮೇಲೆ ಅನಿರೀಕ್ಷಿತ ದಾಳಿ ಮಾಡಿ ಭಾರತೀಯ ಸೈನಿಕರ ರಕ್ಷಣೆ ಮಾಡಿದ್ದರು. ನಂತರ ಸಿಂಗಪುರದಲ್ಲಿಯೂ ಸೈನ್ಯದ ಕಾರ್ಯವನ್ನು ನಿರ್ವಹಿಸಿದ್ದರು.

ಸ್ವಾತಂತ್ರ್ಯ ನಂತರ ಭಾರತೀಯ ಸೇನೆ ಅತ್ಯಂತ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ ತಿಮ್ಮಯ್ಯನವರು 1948ರಲ್ಲಿ ಪಾಕಿಸ್ತಾನದ ವಿರುದ್ಧದ ಭಾರತದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ ಮೇಜರ್ ಜನರಲ್, ಜನರಲ್ ರ್ಯಾಂಕ್ಗಳಿಗೆ ಏರಿ, ಆರ್ಮಿ ಚೀಫ್ ಕೂಡ ಆಗಿದ್ದರು. ನಿವೃತ್ತಿಯ ನಂತರವೂ ಕೊರಿಯಾ ಹಾಗೂ ಸೈಪ್ರಸ್ ದೇಶಗಳಲ್ಲಿ ವಿಶ್ವಸಂಸ್ಥೆಯ ಸೈನ್ಯವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ತಿಮ್ಮಯ್ಯನವರದು.

ಇಂತಹ ಅತ್ಯಂತ ಸಂಭ್ರಮದ, ಯಶಸ್ಸಿನ ಜೀವನ ನಡೆಸಿದ ಜನರಲ್ ತಿಮ್ಮಯ್ಯನವರ ಬದುಕಿನ ಈ ಎಲ್ಲಾ ಪ್ರಮುಖ ಘಟನಾವಳಿಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ಹಾಗೂ ಪ್ರೇರಣೆ ನೀಡುವ ಉದ್ದೇಶದಿಂದ ಜನರಲ್ ಕೆ. ಎಸ್. ತಿಮ್ಮಯ್ಯ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲಾಗಿದೆ. ಇಲ್ಲಿ ತಿಮ್ಮಯ್ಯನವರ ಸೇನಾ ಸಾಧನೆಯ ಹಲವು ಮಾಹಿತಿಪೂರ್ಣ ಫಲಕಗಳು, ಅವರ ಕುಟುಂಬದ ಚಿತ್ರಣ, ಅವರು ಬಳಸುತ್ತಿದ್ದ ಮಂಚ, ಟೇಬಲ್, ಡೆಸ್ಕ್ ಮುಂತಾದವುಗಳನ್ನು ಈ ನಿವಾಸದ ಇಪ್ಪತ್ತೆರಡು ಕೋಣೆಗಳಲ್ಲಿ ಅತ್ಯಂತ ವ್ಯವಸ್ಥಿತವಾಗಿ ಜೋಡಿಸಿಡಲಾಗಿದೆ. ಜೊತೆಗೆ ಸೇನೆಯ ಯೋಧರು ಬಳಸುವ ವಿಭಿನ್ನ ಶಸ್ತ್ರಾಸ್ತ್ರಗಳು, ಅವರ ಉಡುಗೆ ತೊಡುಗೆಗಳನ್ನು, ಅವುಗಳ ಕುರಿತು ಪರಿಚಯಾತ್ಮಕ ಮಾಹಿತಿಗಳೊಂದಿಗೆ ಸಂಗ್ರಹಿಸಿಡಲಾಗಿದೆ. ಇದಲ್ಲದೇ ಹೊರಾಂಗಣದಲ್ಲಿ ಸೇನೆಯಲ್ಲಿ ಬಳಸುವ ಟ್ಯಾಂಕರ್, ನೌಕಾದಳದ ನೌಕೆಗಳನ್ನು ಸಹ ಇರಿಸಲಾಗಿದೆ.

ಈ ಸಂಗ್ರಹಾಲಯದಲ್ಲಿ ತಿಮ್ಮಯ್ಯನವರು ವಿಶ್ವಸಂಸ್ಥೆಯ ಪ್ರತಿನಿಧಿಯಾಗಿ ಕೊರಿಯಾದ ಯುದ್ಧ ಕೈದಿಗಳ ಬಿಡುಗಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಅನನ್ಯ ಕ್ಷಮತೆಯನ್ನು ಸ್ಮರಿಸಿ, ಈ ರೀತಿ ಬಿಡುಗಡೆಯಾದ ಕೊರಿಯಾದ ‘ವೂ’ ಎಂಬ ವ್ಯಕ್ತಿ, 2005ರಲ್ಲಿ ಕೊರಿಯಾದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕೊಡಗಿನ ಅಧಿಕಾರಿ ಒಬ್ಬರಿಗೆ ಕೊಡುಗೆಯಾಗಿ ನೀಡಿದ ಚಿನ್ನಲೇಪಿತ ವಿಶೇಷ ಕೈಗಡಿಯಾರವನ್ನು ‘ಸ್ಟೋರಿ ಆಫ್ ದ ವೂ ವಾಚ್’ ಎಂದು ಸಂಗ್ರಹಿಸಿಡಲಾಗಿದೆ.

ಇದರ ಜೊತೆಯಲ್ಲಿಯೇ ಕೊಡವ ಜನಪದದ ವಿಶಿಷ್ಟ ಸಂಸ್ಕೃತಿಯ ಅನಾವರಣವೂ ಈ ಸಂಗ್ರಹಾಲಯದಲ್ಲಿದೆ. ಕೊಡವ ಪುರುಷ ಹಾಗೂ ಮಹಿಳೆಯರ ವಿಶಿಷ್ಟ ಉಡುಗೆ -ತೊಡುಗೆ, ಅವರ ಸಾಂಪ್ರದಾಯಿಕ ಆಭರಣಯುಕ್ತ ಆಯುಧ ಮುಂತಾದವುಗಳನ್ನು ತುಂಬಾ ಚೆನ್ನಾಗಿ, ಪರಿಚಯಾತ್ಮಕವಾಗಿ ಸಂಗ್ರಹಿಸಿಡಲಾಗಿದೆ. ಪ್ರವೇಶದಲ್ಲಿಯೇ ನಮ್ಮನ್ನು ಸ್ವಾಗತಿಸುವ ಸೈನಿಕನ ಬೂಟಿನ ಬೃಹತ್ ಪ್ರತಿಕೃತಿ ಅತ್ಯಂತ ಆಕರ್ಷಕವಾಗಿದೆ. ಇದಲ್ಲದೇ ಜನರಲ್ ತಿಮ್ಮಯ್ಯನವರು ಪ್ರಮುಖ ಪಾತ್ರ ವಹಿಸಿದ ವಿವಿಧ ಯುದ್ಧಗಳ, ಸೇನಾ ಚಟುವಟಿಕೆಗಳ ಪರಿಚಯಾತ್ಮಕ ವಿಡಿಯೊ ಶೋ ಕೂಡ ಇಲ್ಲಿದೆ.

ಒಟ್ಟಾರೆಯಾಗಿ ಈ ವಸ್ತು ಸಂಗ್ರಹಾಲಯದ ಒಳಹೊಕ್ಕರೆ ನಮ್ಮ ದೇಶದ ಸೈನಿಕರ ಕುರಿತು ಹೆಮ್ಮೆ ಮೂಡಿಸುವಂತಹ ವಿಶೇಷ ಚಿತ್ರಣಗಳ ಜೊತೆಗೇ ಕೇವಲ ತಮ್ಮ 59 ವರ್ಷಗಳ ಜೀವಿತಾವಧಿಯಲ್ಲಿ, ದೇಶದ ಅತ್ಯುತ್ತಮ ಸೈನಿಕರಲ್ಲಿ ಒಬ್ಬರು ಎಂಬ ಖ್ಯಾತಿಗೆ ಪಾತ್ರರಾಗಿದ್ದ ತಿಮ್ಮಯ್ಯನವರ ಬದುಕಿನ ಚಿತ್ರಣವನ್ನು ಯುವ ಜನತೆಗೆ ತಾವೂ ಸೈನಿಕರಾಗಬೇಕೆಂದು ಪ್ರೇರಣೆ ಮೂಡಿಸುವಂತೆ ಸಂಯೋಜಿಸಲಾಗಿದೆ. ಇದಲ್ಲದೇ ವಿಶಿಷ್ಟ ಕೊಡವ ಜನಜೀವನದ ಪರಿಚಯವನ್ನೂ ನಾಡಿನ ಬೇರೆ ಬೇರೆ ಭಾಗದ ಜನರಿಗೆ ಮಾಡಿಕೊಡುವ ಈ ಸಂಗ್ರಹಾಲಯ, ಬಹಳ ಅಪರೂಪದ್ದಾಗಿದೆ. ಮಡಿಕೇರಿಗೆ ಭೇಟಿ ನೀಡುವ ಪ್ರವಾಸಿಗರೆಲ್ಲರೂ ತಪ್ಪದೇ ನೋಡಬೇಕಾದ ವಿಶೇಷವಾದ ತಾಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.