ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರವಣದೋಷ ಸುಲಲಿತ ಕೈಪಿಡಿ

Last Updated 1 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ಹುಟ್ಟಿದ ಕಂದನಿಗೆ ಶ್ರವಣದೋಷ ಎಂದು ತಿಳಿದಾಗ ಹೆತ್ತವರಿಗಾಗುವ ಆಘಾತ ಎಂಥದ್ದು! ಅವರಿಗಷ್ಟೇ ಗೊತ್ತಿರುವ ಸಂಕಷ್ಟವದು. ಯಾಕೆ ಹೀಗಾಯ್ತು? ತಪ್ಪಿದ್ದೆಲ್ಲಿ? ಮುಂದೇನು? ಮಗುವನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಹೇಗೆ? ಈ ಸಮಸ್ಯೆಯನ್ನು ನೀಗಲಿಕ್ಕೆ ದಾರಿಗಳು ಏನೇನಿವೆ? ಯಾರ ಸಲಹೆ ಪಡೆಯುವುದು?ಪ್ರಶ್ನೆಗಳೇ ಎಲ್ಲಾ, ಉತ್ತರ ಸಿಗುವುದು ಸುಲಭವಲ್ಲ.

ಇಂತಹ ವಿಶೇಷ ಮಕ್ಕಳ ಪಾಲಕರಿಗೊಂದು ಅತ್ಯುಪಯುಕ್ತವಾದ ಕೈಪಿಡಿಯನ್ನು ಪ್ರಕಟಿಸಿದ್ದಾರೆ ವಾಕ್‌ಶ್ರವಣ ತಜ್ಞೆ ಡಾ. ಶಾಂತಾ ರಾಧಾಕೃಷ್ಣ. ಪೋಷಕರಹಲವಾರು ಪ್ರಶ್ನೆಗಳಿಗೆ, ಆತಂಕಗಳಿಗೆ ಉತ್ತರ ಹುಡುಕಿಕೊಡುವ ಪ್ರಯತ್ನ ಇಲ್ಲಿದೆ. ಎಸ್‌.ಜಿ.ಎಸ್. ವಾಗ್ದೇವಿ ಸೆಂಟರ್‌ ಫಾರ್‌ ದಿ ರಿಹ್ಯಾಬಿಲಿಟೇಷನ್‌ ಆಫ್‌ ಕಮ್ಯುನಿಕೇಷನ್‌ ಸಂಸ್ಥೆಯ ನಿರ್ದೇಶಕಿಯೂ ಆಗಿರುವ ಅವರು, ಸುಮಾರು 45 ವರ್ಷಗಳಿಂದ ಶ್ರವಣದೋಷವಿರುವ ಮಕ್ಕಳಿಗಾಗಿ ದುಡಿಯುತ್ತಿದ್ದಾರೆ.ಅಂಥ ಮಕ್ಕಳ ದೈನಂದಿನ ಸಮಸ್ಯೆ–ಸವಾಲುಗಳನ್ನು ಕಣ್ಣಾರೆ ಕಾಣುತ್ತಲೇ, ಅವೇ ಅನುಭವಾಧಾರದ ಮೇಲೆ ಈ ಕೈಪಿಡಿ ರಚಿಸಿದ್ದಾರೆ.

‘ಶ್ರವಣಾಧಾರಿತ ವಾಕ್‌ಶ್ರವಣ ತರಬೇತಿ ಕೈಪಿಡಿ’ ಎನ್ನುವ ಅಡಿಬರಹ ಇರುವ ‘ಕಾಕ್ಲಿಯರ್ ಇಂಪ್ಲಾಂಟ್‌ ಅಳವಡಿಕೆ’ ಎನ್ನುವ ಶೀರ್ಷಿಕೆಯ ಈ ದ್ವಿಭಾಷಾ ಪುಸ್ತಕ, ಶ್ರವಣದೋಷವುಳ್ಳ ಮಕ್ಕಳ ಪುನರ್ವಸತಿ ಹಾಗೂಕಾಕ್ಲಿಯರ್ ಇಂಪ್ಲಾಂಟ್‌ ಕುರಿತು ಸವಿವರ ಮಾಹಿತಿ ಒದಗಿಸುತ್ತದೆ. ಸುಲಭ ಕನ್ನಡ, ಸರಳ ಇಂಗ್ಲಿಷ್‌ ಭಾಷೆಯಲ್ಲಿ, ಸಾಮಾನ್ಯ ಶಿಕ್ಷಣ ಪಡೆದ ಪಾಲಕರಿಗೂ ಅರ್ಥವಾಗುವಂತಿದೆ ಈ ದ್ವಿಭಾಷಾ ಪುಸ್ತಕ.

ಈ ಸಾಧನ ಎಲ್ಲಿ ಸಿಗುತ್ತದೆ, ಹೇಗೆ ಪಡೆಯುವುದು, ಅಳವಡಿಕೆ ಹೇಗೆ, ಮೊದಲ ಬಾರಿ ಸಾಧನವನ್ನು ಅಳವಡಿಸಿದಾಗ ಮಕ್ಕಳ ಪ್ರತಿಕ್ರಿಯೆ ಹೇಗಿರುತ್ತದೆ, ಈ ಸಾಧನವನ್ನು ಅಳವಡಿಸಿದ ನಂತರ ಮಕ್ಕಳೊಂದಿಗೆ ಹೇಗೆ ಸಂವಹನ ಮಾಡಬೇಕು ಎಂಬೆಲ್ಲಾ ವಿಷಯಗಳ ಕುರಿತು ಇಲ್ಲಿ ಮಾಹಿತಿ ಇದೆ.

ಪುಸ್ತಕದ ಬಗ್ಗೆ
ಪುಸ್ತಕ:
ಕಾಕ್ಲಿಯರ್ ಇಂಪ್ಲಾಂಟ್‌ ಅಳವಡಿಕೆ (ಶ್ರವಣಾಧಾರಿತ ವಾಕ್‌ಶ್ರವಣ ತರಬೇತಿ ಕೈಪಿಡಿ)
ಲೇಖಕಿ: ಡಾ. ಶಾಂತಾ ರಾಧಾಕೃಷ್ಣ
ಬೆಲೆ: 100
ಪ್ರಕಾಶಕರು: ಎಸ್‌.ಜಿ.ಎಸ್‌. ವಾಗ್ದೇವಿ ಸೆಂಟರ್
ಪುಟಗಳು: 48

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT