ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Father's Day | ಅಪ್ಪ ಎಂಬ ಗಂಧದ ಕೊರಡು

Published 17 ಜೂನ್ 2023, 23:44 IST
Last Updated 17 ಜೂನ್ 2023, 23:44 IST
ಅಕ್ಷರ ಗಾತ್ರ

ಆಶಾ ಬಗ್ಗನಡು

ಜೂನ್ 18 ತಂದೆಯಂದಿರ ದಿನ. ತಮ್ಮೊಳಗೆ ತಾಯ್ತನವನ್ನು ಕಾಪಿಟ್ಟುಕೊಂಡು, ಕಾಲದ ಬೀಸಿನೊಳಗೆ ಮಗುವಿನ ಪುಟ್ಟ ಮುಷ್ಟಿಯೊಳಗೆ ಬೆಚ್ಚನೆ ಬೆರಳು ಸಿಕ್ಕಿಸಿಕೊಂಡು ಕುಳಿತ ಅಪ್ಪಂದಿರೂ ಇದ್ದಾರೆ. ಅಂಥವರ ನೆನಕೆಯಲ್ಲಿ ಒಂದು ಲಹರಿ...

ತಾಯಿ ದೇವರೆಂದು ಪೂಜಿಸುವ ಜಗತ್ತಿನಲ್ಲಿ ತಾಯ್ತನಕ್ಕೆ ಇನ್ನಿಲ್ಲದ ಮಹತ್ವವಿದೆ. ಜಗತ್ತು ಮಕ್ಕಳ ಲಾಲನೆ ಪಾಲನೆ ಪೋಷಣೆ ಜವಾಬ್ದಾರಿಯನ್ನು ಹೆಣ್ಣಿನ ಜೈವಿಕತೆಗೆ ಅಂಟಿಸುತ್ತದೆ. ಆದರೆ, ತಂದೆತನಕ್ಕೂ ತಾಯ್ತನಕ್ಕೂ ಸಂಬAಧ ಕಲ್ಪಿಸದೆ ಅವನನ್ನು ಬರಡಾಗಿಸುತ್ತದೆ. ಸಾಮಾಜೀಕರಣದ ಆಚೆಗೂ ತನ್ನೆದೆಯೊಳಗಡೆ ತಾಯ್ತನವನ್ನು, ಹೆಣ್ತನವನ್ನು ಜಾಗೃತಗೊಳಿಸಿಕೊಳ್ಳುವ ತಂದೆಯAದಿರನ್ನು ನಿರ್ಲಕ್ಷಿಸುತ್ತದೆ. ಜೈವಿಕತೆಗೆ ತಾಯ್ತನಕ್ಕೂ ತಳುಕು ಹಾಕಿಕೊಂಡಿರುವ ಹೆಣ್ಣು ಇಡೀ ಜಗತ್ತಿನ ಎಲ್ಲೆಡೆ ಆರಾಧನೆಗೆ ಒಳಗಾಗುತ್ತಿದ್ದಾಳೆ. ಇಂತಹ ಅವಕಾಶವಿಲ್ಲದ ಅಪ್ಪ, ಅಮ್ಮನ ದೈವಿಕ ಆವರಣದೆದುರು ಮಂಕಾಗುತ್ತಾ ನಿರ್ಲಕ್ಷ್ಯಕ್ಕೆ ಒಳಪಡುತ್ತಿದ್ದಾನೆ.

ತಾಯ್ತನವೆಂಬುದು ಬರಿಯ ದೇಹವಲ್ಲ, ಅದೊಂದು ಮನಃಸ್ಥಿತಿ. ಹೊರುವುದು ಹೆರುವುದರಲ್ಲಿ ತಾಯ್ತನ ಅಡಗಿದೆ. ಆದರೆ, ಅದಕ್ಕೆ ಬಹಳ ಸೀಮಿತವಾದ ಅರ್ಥ ಪ್ರಾಪ್ತಿಯಾಗಿ ಬಿಡುತ್ತದೆ. ವಿದ್ವಾಂಸರು ಗುರುತಿಸುವAತೆ ಅದು ವಿಶ್ವಾತ್ಮಕ ಮೌಲ್ಯಗಳಲ್ಲಿ ಒಂದು. ಅದು ಜೀವಕಾರುಣ್ಯ, ಪ್ರೀತಿ, ದೊಡ್ಡತನ. ಹಾಗಾಗಿಯೇ ತಾಯ್ತನವೆಂಬದು ಲಿಂಗಾತೀತವಾದ ಭಾವನೆ. ಅಲ್ಲಿ ಗಂಡು, ಹೆಣ್ಣು ಭೇದವಿಲ್ಲ. ತಂದೆಯೇ ತಾಯಿಯಾದ ಅದೆಷ್ಟೋ ಜೀವಗಳ ಉದಾಹರಣೆ ನಮ್ಮ ಸುತ್ತ ಇದೆ. ಎಷ್ಟೋ ಬಾರಿ ಗಂಡು ಕೂಡ ಹೆಣ್ಣು ಆಗುತ್ತಲೇ ಇರುತ್ತಾನಾದರೂ ಬಹುತೇಕ ಸಂದರ್ಭಗಳಲ್ಲಿ ಅವನು ಈ ತಾಯ್ತನವನ್ನು ಒಳಗೊಳ್ಳದಂತೆ ತಡೆಯುವಲ್ಲಿ ಸಾಮಾಜೀಕರಣದ ಪಾತ್ರ ಬಹಳ ಮಹತ್ವದ್ದು.

ಪುರುಷರು ಮಕ್ಕಳನ್ನು ಬೆಳೆಸುವ ಹೊಣೆಯನ್ನು ಸಮಾನವಾಗಿ ನಿರ್ವಹಿಸಿದಂತೆ ತಡೆಯುವÀ ವ್ಯವಸ್ಥೆ ಬಸಿರು, ಹೆರಿಗೆ ಎಂಬುವು ಹೆಣ್ಣುದೇಹಕ್ಕಷ್ಟೇ ಇರುವ ಅನನ್ಯ ಪ್ರಕ್ರಿಯೆನ್ನಾಗಿ ಗುರುತಿಸುತ್ತದೆ. ಹೆಣ್ಣುಮಕ್ಕಳ ಜೈವಿಕ ಕಾರಣದೊಂದಿಗೆ ಮಕ್ಕಳೊಂದಿಗೆ ತಾಯಂದಿರಿಗೆ ಇರುವ ಆಪ್ತ ಸಂಬAಧ ತAದೆಯರಿಗೆ ಇರುವುದಿಲ್ಲ. ಸಾಮಾಜೀಕರಣ ತರಬೇತಿ ಪುರುಷರಿಗೆ ಮಕ್ಕಳನ್ನು ಬೆಳೆಸುವ ಹೊಣೆಯಿಂದ ಹೇಗೆ ನುಣುಚಿ ಕೊಳ್ಳುವುದು ಎಂಬುದನ್ನು ಕಲಿಸಿದರೆ, ತನ್ನ ಜೈವಿಕತೆಯ ಕಾರಣ ಮಕ್ಕಳ ಜವಾಬ್ದಾರಿ ತನ್ನದೇ ಎಂಬುದನ್ನು ಹೆಣ್ಣುಮಕ್ಕಳಿಗೆ ಕಲಿಸುತ್ತದೆ.

ಹಾಗಾಗಿಯೇ ನಮ್ಮ ಸಮಾಜದಲ್ಲಿ ಅಪ್ಪನೆಂದರೆ ದರ್ಪ, ಅಧಿಕಾರಗಳ ತೋರಿ ಮಕ್ಕಳನ್ನು ಹದ್ದು ಬಸ್ತಿನಲ್ಲಿಡುವವ, ಭೌತಿಕ ಅಗತ್ಯತೆಗಳನ್ನಷ್ಟೇ ಪೂರೈಸುವವ ಎಂಬ ಚಿತ್ರಣವನ್ನೇ ಕಟ್ಟಿಕೊಡುತ್ತಾ ಬರಲಾಗಿದೆ. ಕಾಲ ಬದಲಾದ ಹಾಗೆ ಅಪ್ಪನ ಪಾತ್ರವೂ ಬದಲಾಗುತ್ತಾ ಸಾಗಿದ್ದು, ತನ್ನೆದೆಯ ಒಳಗಡೆ ತಾಯ್ತನವನ್ನು ಜಾಗೃತಗೊಳಿಸಿಕೊಳ್ಳುವ ಹೊರಳು ಹಾದಿಯಲ್ಲಿದ್ದಾನೆ.

ಆಧುನಿಕ ಬದುಕಿನ ಪರಿಣಾಮ ಹೆಚ್ಚುತ್ತಿರುವ ವಿಭಕ್ತ ಕುಟುಂಬಗಳು, ವಿಸ್ತರಿಸಿದ ಆರ್ಥಿಕ ಚಿಂತನೆಗಳು ಹೆಣ್ಣಿಗೆ ಹೊರದುಡಿಮೆಯ ಅವಕಾಶವನ್ನು ತೆರೆದಿದೆ. ಗಂಡು ಹೊತ್ತಿದ್ದ ಆರ್ಥಿಕ ಜವಾಬ್ದಾರಿಯನ್ನ ಹೆಣ್ಣೂ ಹೊರುತ್ತಿರುವುದರಿಂದ ಅವನು ಅನಿವಾರ್ಯವಾಗಿ ಕೌಟುಂಬಿಕ ಜವಾಬ್ದಾರಿ ಹೊರಬೇಕಿದೆ. ಗಂಡ ಹೆಂಡತಿ ಇಬ್ಬರ ದುಡಿಮೆಯ ಕಾರಣ ಇಬ್ಬರೂ ಕೂಡಿಯೇ ಮಕ್ಕಳನ್ನು ಸಾಕುವ ಅಗತ್ಯ ಹೆಚ್ಚುತ್ತಿದೆ. ಮಕ್ಕಳ ಲಾಲನೆ, ಪಾಲನೆ ಪೋಷಣೆ ಅವರೊಂದಿಗಿನ ಆಪ್ತ ಸಂಬAಧ. ಅದು ಅಮ್ಮನಿAದ ಮಾತ್ರ ಸಾಧ್ಯವೆಂಬ ಸವಕಲು ಆಲೋಚನೆಗಳು ಬದಲಾಗಿ ಬರಡಾದ ಅಪ್ಪನೆದೆ ಆರ್ದ್ರಗೊಳ್ಳುತ್ತಾ, ಪ್ರೀತಿ ಕಾಳಜಿ ಕರುಣೆ ಮಮತೆ ವಾತ್ಸಲ್ಯ ಚಿಗುರುತ್ತಿವೆ.

ಹಿಂದೆಲ್ಲಾ ಹೆರಿಗೆ ಕೋಣೆಯಿಂದ ಮಾರು ದೂರ ನಿಂತಿರುತಿದ್ದ ಗAಡAದಿರು, ತಮ್ಮ ಹೆಂಡತಿಯರು ನೋವಿಗೆ ಬಿಗಿ ಹಿಡಿಯುವ ಕೈಗಳಿಗೆ ಆಸರೆಯಾಗಿ ಅವಳ ಬಳಿಯೇ ನಿಂತು ನೋವನ್ನ ಮರೆಸುತ್ತಾ ಅಳುವ ಕಂದನನ್ನ ಎದೆಗಪ್ಪಿ ಮುದ್ದಾಡುತ್ತಿದ್ದಾರೆ. ಆಗತಾನೆ ಹುಟ್ಟಿದ ತಮ್ಮ ಕೂಸುಗಳನ್ನು ತಮ್ಮ ಬರಿ ಎದೆಗೆ ಅವುಚಿಕೊಂಡ, ಕೈಬೀಸಿ ನಡೆವ ಹೆಂಡತಿಯರ ಜೊತೆಯಲ್ಲಿ ಮಕ್ಕಳನೆತ್ತಿ ಸಾಗುವ ಅಸಂಖ್ಯವಾದ ಫೋಟೋಗಳು ಹರಿದಾಡುತ್ತಿವೆ. ಈಗ ಅವರ ಮುಖದಲ್ಲಿ ತಾಯಿಯ ಅದೇ ಮೃದುತ್ವ ಹೊಳೆಯುತ್ತಿದೆ.

ಹೆಂಡತಿಯ ಜವಾಬ್ದಾರಿಯುತ ಕೆಲಸದ ಅರಿವಿರುವ ಪರಿಚಯದ ಆ ಹುಡುಗ ತನ್ನೆಲ್ಲ ಓದು ಬರಹ ಸಂಶೋಧನೆಗಳ ಆಚೆಗೂ ಮಗುವನ್ನು ಎಡತಾಗುತ್ತಾನೆ. ಆ ಕಂದನ ಪಾಲನೆ, ಪೋಷಣೆ ಮಾಡುತ್ತಾನೆ. ಬೇಕು, ಬೇಡಗಳನ್ನು ಗಮನಿಸುತ್ತಲೇ ತನ್ನದೆಯಲ್ಲಿ ಕಾಪಿಟ್ಟುಕೊಂಡಿರುವ ಅವನ ಬಗೆಯನ್ನು ಕಂಡಾಗಲೆಲ್ಲಾ ಅದು ಯಾರು ಹೇಳಿರಬಹುದು, ತಾಯ್ತನ ಹೆಣ್ಣಿನ ಜೈವಿಕ ಸಂಬAಧಿಯಾದುದು ಎAದೆನಿಸುತ್ತದೆ. ಇನ್ನು ಸಾಂಸಾರಿಕ ಚೌಕಟ್ಟಿನಾಚೆಗೂ ತಾಯ್ತನವೆAಬುದು ಒAದು ವಿಶ್ವಾತ್ಮಕ ಮೌಲ್ಯವೇ ಹೌದು. ಜಗತ್ತಿನ ಚರಾಚರಗಳಿಗೂ ಲೇಸನ್ನೇ ಬಯಸಿದ, ಜಗತ್ತಿನ ಎಲ್ಲರಿಗೂ ಪ್ರೀತಿಯನ್ನು ಹಂಚಿದ ಜೀವಕಾರುಣ್ಯದ ಬುದ್ಧ ಬಸವ, ಅಂಬೇಡ್ಕರ್, ಗಾAಧಿ, ಕುವೆಂಪು, ಬೇಂದ್ರೆ ಇವರನ್ನೆಲ್ಲ ತಾಯಿಯಂದಿರಲ್ಲ ಎನ್ನದಿರಲು ಹೇಗೆ ಸಾಧ್ಯವಿಲ್ಲವೋ ಹಾಗೆ ತಾಯ್ತನವನ್ನು ಕೇವಲ ಜೈವಿಕತೆಗೆ ಸೀಮಿತಗೊಳಿಸಲಿಕ್ಕೆ ಸಾಧ್ಯವೇ ಇಲ್ಲ.

ಮೊನ್ನೆಯ ಸಂವಾದ ಒAದರಲ್ಲಿ ದು.ಸರಸ್ವತಿ ತಮ್ಮ ತAದೆಯನ್ನು ನೆನಪಿಸಿಕ್ಕೊಳ್ಳುತ್ತಾ, ‘ನಮಗೆ ಕಕ್ಕಸು ಮಾಡಲು ಅಷ್ಟೇ ಗೊತ್ತಿತ್ತು. ಅದನ್ನು ನಿತ್ಯ ತನ್ನ ಕೈಯಿಂದಲೇ ಸ್ವಚ್ಛಗೊಳಿಸುತ್ತಿದ್ದವನು ನನ್ನಯ್ಯ’ ಎಂದು ತಂದೆಯ ತಾಯ್ತನದ ಅದಮ್ಯತೆಯನ್ನು ತೆರೆದಿಟ್ಟರು..ಇಂತಹ ಅಯ್ಯನ ಬಳಿ ಮೊದಲ ಸಂಬಳವನ್ನು ಹಿಡಿದು ಹೋದಾಗ, ‘ತಣ್ಣಗಿರವ್ವ ಮಗಳೇ ಎಂದನೇ ಹೊರತುಆ ಹಣವನ್ನುಬಯಸಲಿಲ್ಲ’ ಎಂದು ಭಾವುಕರಾಗಿದ್ದರು.

ಮಕ್ಕಳನ್ನು ಸಾಕಿ ಬೆಳೆಸುವಲ್ಲಿ ತಂದೆ–ತಾಯಿ ಎನ್ನುವ ಭೇದವಿಲ್ಲ. ತಂದೆ–ತಾಯಿ ಪ್ರೀತಿಯ ಎರಡು ರೂಪಗಳೇ ಹೌದು. ಮಕ್ಕಳ ಪೋಷಣೆ ತಂದೆಯ ಜವಾಬ್ದಾರಿಯಷ್ಟೇ ಅಲ್ಲ, ಅದು ಒತ್ತಡ ಬದುಕಿನ ನಿರಾಳತೆ. ಬದುಕಿನ ಸಣ್ಣ ಪುಟ್ಟ ಸಂತೋಷಗಳು ಘನವಾದ ಸಾಧನೆಗಳಿಗಿಂತ ಮುಖ್ಯವೇ ಹೌದು. ಹದಗೆಡುತ್ತಿರುವ ಸಾಂಸಾರಿಕ ಸಂಬಂಧಗಳು, ಒತ್ತಡದ ಬದುಕಿಗೆ ಮದ್ದೂ ಹೌದು. ಈ ತಂದೆಯAದಿರ ದಿನದಂದು ಜಗತ್ತಿನ ಎಲ್ಲಾ ಗAಡಸರು ತಮ್ಮೊಳಗಿನ ತಾಯ್ತವನ್ನು ಎಚ್ಚರಿಸಿಕ್ಕೊಳ್ಳುವಂತಾಗಲಿ. ಆ ಮೂಲಕ ಮನುಷ್ಯನ ಬದುಕಷ್ಟೆ ಅಲ್ಲ, ಈ ಜಗತ್ತಿನಚರಾ ಚರಗಳ ಬದುಕೂ ಹಸನಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT