ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಪದ ಸೃಷ್ಟಿ: ಬೆಳ್ಳಚ್ಚರಿ

Published 10 ಮಾರ್ಚ್ 2024, 0:30 IST
Last Updated 10 ಮಾರ್ಚ್ 2024, 0:30 IST
ಅಕ್ಷರ ಗಾತ್ರ

ಬೆಳ್ಳಚ್ಚರಿ

ಬೆಳ್ಳಚ್ಚರಿ (ನಾ). ದಿಗ್ಭ್ರಮೆಯನ್ನು ತರುವ ಆಶ್ಚರ್ಯ

(ಬೆಳ್ + ಅಚ್ಚರಿ)

ಒಂದು ದಿನ ಚಿತ್ರಕೂಟದ ಪರ್ಣಶಾಲೆಯಲ್ಲಿ ರಾಮ ಸೀತೆ ಲಕ್ಷ್ಮಣರು ಕಗ್ಗತ್ತಲಿನಲ್ಲಿ ಕಿಟಕಿಯಾಚೆ ಕಾಣುವ ಕಾಡುಗಿಚ್ಚನ್ನು ಎಳೆಮಕ್ಕಳಂತೆ ಬಾಯ್ದೆರೆದು ಅಚ್ಚರಿಯಿಂದ ನೋಡಿದರು ಎಂದು ಕವಿ ವರ್ಣಿಸಿದ್ದಾರೆ. ಹಾಗೆ ಚಿತ್ರಿಸುವಾಗ ಅವರು ದಿಗ್ಭ್ರಮೆಯನ್ನು ತರುವ ಆಶ್ಚರ್ಯವನ್ನು ನವೀನ ಪದ ‘ಬೆಳ್ಳಚ್ಚರಿ’ಯಿಂದ ಸೂಚಿಸಿದ್ದಾರೆ.

ರಾತ್ರಿ ಆಕಾಶದ ಆ ತಾರಾಸಹಸ್ರಾಕ್ಷ ಇಂದ್ರನ ಓಲಗದಲ್ಲಿ ನರ್ತಿಸುವ ಉರಿಯ ಊರ್ವಶಿ ಎನ್ನುವಂತೆ ಕಾಡುಗಿಚ್ಚು ಹೊಳೆಯುತ್ತಿತ್ತು. ಆ ಚೆಲುವನ್ನು ಎಳೆಯ ಮಕ್ಕಳಂತೆ ಬಾಯಿತೆರೆದು, ದಿಗ್ಭ್ರಮೆಯನ್ನುಂಟು ಮಾಡುವ ಆಶ್ಚರ್ಯಕ್ಕೆ ಮಾರುಹೋದಂತೆ ದಿಟ್ಟಿಸಿದರು!

ರಾತ್ರಿಯಾಕಾಶದಾ

ತಾರಾ ಸಹಸ್ರಾಕ್ಷನೋಲಗದಿ ನರ್ತಿಸುವ

ಉರಿಯ ಉರ್ವಶಿಯೆನಲ್ಕಾ ಕಾಡುಗಿರ್ಚ್ಚೆಸೆಯೆ,

ನಿಟ್ಟಿಸಿದರಾ ಚೆಲ್ವನೆಳಮಕ್ಕಳೋಲಂತೆ

ಬಾಯ್ದೆರೆದ ಬೆಳ್ಳಚ್ಚರಿಗೆ ಮನಂ ಮಾರ್ವೋದವೋಲ್! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT