ಮೈಸೂರಿನ ಚಿತ್ರಭಾನು ರಸ್ತೆಯಲ್ಲಿ ಹೊರಟಿದ್ದ ಕೆಲವು ವಿದ್ಯಾರ್ಥಿಗಳು ಬದಿಯಲ್ಲಿದ್ದ ಹಕ್ಕಿಗೂಡಿನಂತಹ ಕಪಾಟನ್ನು ಗಮನಿಸಿದರು. ಅದರ ಮೇಲೆ ಬರೆದಿರುವ ‘ಲಿಟಲ್ ಫ್ರೀ ಲೈಬ್ರರಿ’ ಎನ್ನುವುದನ್ನು ಓದಿ, ಕುತೂಹಲದಿಂದಲೇ ಅತ್ತ ಹೆಜ್ಜೆ ಹಾಕಿದರು. ಜೋಪಾನವಾಗಿ ಬಾಗಿಲು ತೆರೆದು ಪುಸ್ತಕಗಳನ್ನು ಎತ್ತಿಕೊಂಡವರು, ‘ಇದು ನನಗೆ ಇರಲಿ’, ‘ಅದನ್ನು ನಾನು ಓದಿದ್ದೇನೆ’, ನೀನೂ ಓದು’ ಎನ್ನುತ್ತಾ ತಮ್ಮ ತಮ್ಮಲ್ಲೇ ಮಾತನಾಡಿಕೊಂಡರು. ಬಳಿಕ ಖುಷಿಯಿಂದಲೇ ಮನೆಯತ್ತ ಹೊರಟರು.

ಹೀಗೆ ದಾರಿಹೋಕರನ್ನು ಈ ಪುಟಾಣಿ ಗ್ರಂಥಾಲಯಗಳು ಆಕರ್ಷಿಸುತ್ತಿವೆ. ಓದಿನ ಆಸಕ್ತಿಯುಳ್ಳವರು ಪುಸ್ತಕಗಳನ್ನು ತೆಗೆದುಕೊಳ್ಳಬಹುದು. ‘ಒಂದು ಪುಸ್ತಕ ತೆಗೆದುಕೊಳ್ಳಿ, ಇನ್ನೊಂದು ಪುಸ್ತಕ ಇಟ್ಟು ಹೋಗಿ’ ಎಂಬ ಸಲಹೆಯನ್ನೂ ಇಲ್ಲಿ ನೀಡಲಾಗಿದೆ. ಪುಸ್ತಕ ತೆಗೆದುಕೊಂಡ ಮೇಲೆ ಇನ್ನೊಂದು ಪುಸ್ತಕವನ್ನು ಇಡಲೇಬೇಕು ಎಂದೇನೂ ಒತ್ತಾಯಿಸುವುದಿಲ್ಲ. ಪುಸ್ತಕಗಳ ಸೂಕ್ತ ಬಳಕೆಯೇ ಮುಖ್ಯ.

‘ಟಾಸ್ಕ್’ ಎಜುಕೇಷನಲ್ ಚಾರಿಟಬಲ್ ಆ್ಯಂಡ್ ವೆಲ್ಫೇರ್ ಟ್ರಸ್ಟ್ ಎಂಬ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಯ ಸಹಕಾರದಲ್ಲಿ ಇಲ್ಲಿನ ಕುವೆಂಪು ನಗರದ ಇ ಆ್ಯಂಡ್ ಎಫ್ ಬ್ಲಾಕ್ನ ಟಾಸ್ಕ್ ಟ್ರಸ್ಟ್ ಕಚೇರಿ, ಗೋಕುಲಂನ ಟೀನಾಸ್ ಕೆಫೆ ಹಾಗೂ ಬುಕ್ಸ್ ಆ್ಯಂಡ್ ಬ್ರಿವ್ಸ್ ಲೈಬ್ರರಿಯ ಮುಂಭಾಗ ಈ ಪುಟಾಣಿ ಗ್ರಂಥಾಲಯಗಳು ಇವೆ. ಈಗಾಗಲೇ ಓದುಗರ ಮೆಚ್ಚುಗೆಗೂ ಕಾರಣವಾಗಿದ್ದು, ಸುಮಾರು 300ಕ್ಕೂ ಅಧಿಕ ಪುಸ್ತಕಗಳು ಅಂಥವರ ಕೈಸೇರಿವೆ. ಹಲವರು ತಮ್ಮ ಅಭಿಪ್ರಾಯ
ವನ್ನು ಚೀಟಿಗಳ ಮೂಲಕ ಇಲ್ಲಿ ದಾಖಲಿಸಿದ್ದಾರೆ.

ಹೀಗಿವೆ ಗ್ರಂಥಾಲಯಗಳು...

ಗಾಳಿ, ಮಳೆಯಿಂದ ರಕ್ಷಣೆಯುಳ್ಳ ಒಂದು ಸಣ್ಣ, ಆಕರ್ಷಕ ಕಪಾಟೇ ಗ್ರಂಥಾಲಯ. ದೊಡ್ಡಪಕ್ಷಿಗೂಡನ್ನು ಹೋಲುವ ಆಕಾರದ್ದು ಎನ್ನಬಹುದು. ಎರಡು ಅಥವಾ ಮೂರು ರ್ಯಾಕ್ಗಳನ್ನು ಇವು ಹೊಂದಿದ್ದು, ಅದಕ್ಕೆ ಗಾಜಿನಬಾಗಿಲನ್ನು ಅಳವಡಿಸಲಾಗಿದೆ. ಯಾರಾದರೂ ಬಾಗಿಲು ತೆರೆಯಬಹುದು ಮತ್ತು ಅಲ್ಲಿರುವ ಪುಸ್ತಕಗಳಲ್ಲಿ ತಮಗಿಷ್ಟವಾದ ಪುಸ್ತಕವನ್ನು ತೆಗೆದುಕೊಳ್ಳಬಹುದು. ಯಾವುದೇ ನೋಂದಣಿ ಅಗತ್ಯವಿಲ್ಲ. ಮುಂದಿನ ಓದುಗರಿಗಾಗಿ ಪುಸ್ತಕವನ್ನು ಹಿಂದಿರುಗಿಸುವುದು ಅಥವಾ ಪಡೆದ ಪುಸ್ತಕಕ್ಕೆ ಬದಲಿಯಾಗಿ ಇನ್ನೊಂದು ಪುಸ್ತಕ ನೀಡಬಹುದು ಎಂಬ ನಿರೀಕ್ಷೆಯೇ ಈ ಗ್ರಂಥಾಲಯದ ಚಾಲಕಶಕ್ತಿ. ಪುಸ್ತಕ ದಾನಿಗಳೂ ಈ ಯೋಜನೆಗೆ ಬಲ ತುಂಬುತ್ತಿದ್ದಾರೆ.

‘ಲಿಟಲ್ ಫ್ರೀ ಲೈಬ್ರರಿ’ ಕಲ್ಪನೆ ಇದೇ ಮೊದಲಲ್ಲ. ಇದಕ್ಕೆ ದಶಕದ ಇತಿಹಾಸವೇ ಇದೆ. 2009ರಲ್ಲಿ ಅಮೆರಿಕದ ಹಡ್ಸನ್ ನಗರದಲ್ಲಿ ಮೊದಲ ಗ್ರಂಥಾಲಯ ಪ್ರಾರಂಭವಾಯಿತು. ಪುಸ್ತಕ ಪ್ರೇಮಿ ತಾಯಿಯ ನೆನಪಿನಲ್ಲಿ ದಿ. ಟಾಡ್ಬಾಲ್ ಅವರು ಉದ್ಯಾನವೊಂದರಲ್ಲಿ ಪುಟ್ಟ ಗ್ರಂಥಾಲಯವನ್ನು ಆರಂಭಿಸಿದರು. ಈ ಕಲ್ಪನೆಯು ಈಗ 115 ದೇಶಗಳಲ್ಲಿ 1.5 ಲಕ್ಷಕ್ಕೂ ಅಧಿಕ ಪುಟಾಣಿ ಗ್ರಂಥಾಲಯಗಳ ಆರಂಭಕ್ಕೆ ಮುನ್ನುಡಿ ಬರೆಯಿತು. ನಿತ್ಯವೂ ಲಕ್ಷಾಂತರ ಪುಸ್ತಕಗಳು ಜನರ ನಡುವೆ ವಿನಿಮಯವಾಗುತ್ತಿದೆ.

‘ಲಿಟಲ್ ಫ್ರೀ ಲೈಬ್ರರಿ’ ಸಂಸ್ಥೆಯು ಲಾಭರಹಿತವಾಗಿ ಕಾರ್ಯನಿರ್ವಹಿಸುತ್ತಿದೆ. ಅಮೆರಿಕದ ಸೇಂಟ್ ಪಾಲ್ ನಗರದಿಂದ ಕಾರ್ಯಾಚರಣೆ ನಡೆಸುತ್ತಿದೆ. ಸಾಕ್ಷರತೆ ಮತ್ತು ಓದುವ ಪ್ರೀತಿಯನ್ನು ಉತ್ತೇಜಿಸುವ ಕೆಲಸಕ್ಕಾಗಿ ‘ನ್ಯಾಷನಲ್ ಬುಕ್ ಫೌಂಡೇಶನ್’, ‘ಲೈಬ್ರರಿ ಆಫ್ ಕಾಂಗ್ರೆಸ್’ ಮತ್ತು ‘ಲೈಬ್ರರಿ ಜರ್ನಲ್’ ಜಾಗತಿಕ ಪುರಸ್ಕಾರಗಳಿಗೆ ಪಾತ್ರವಾಗಿದೆ.

ಆಸಕ್ತರು ಆರಂಭಿಸಬಹುದು

‘ನಾನು ಟಾಸ್ಕ್ ಟ್ರಸ್ಟ್ ಕಚೇರಿ ಎದುರಿನ ಗ್ರಂಥಾಲಯವನ್ನು ನಿರ್ವಹಿಸುತ್ತಿದ್ದೇನೆ. ನಗರದಲ್ಲಿನ ಉಳಿದ ಎರಡು ಗ್ರಂಥಾಲಯಗಳು ಟ್ರಸ್ಟ್ ಸಹಕಾರದಲ್ಲಿ ಆರಂಭಗೊಂಡಿದ್ದರೂ ಅವುಗಳನ್ನು ಸ್ಥಳೀಯರೇ ನಿರ್ವಹಿಸುತ್ತಿದ್ದಾರೆ. ನಿರ್ವಹಣೆ ಮಾಡುವ ಸ್ಥಳೀಯ ಸ್ವಯಂಸೇವಕರನ್ನು ‘ಸ್ಟೀವರ್ಡ್’ ಎಂದು ಕರೆಯಲಾಗುತ್ತದೆ. ಗ್ರಂಥಾಲಯದ ಸುರಕ್ಷತೆ ಮತ್ತು ಸ್ವಚ್ಛತೆ ನೋಡಿಕೊಳ್ಳುವುದು, ಜನರಿಗೆ ಮಾಹಿತಿ ನೀಡಿ ಬಳಕೆಗೆ ಪ್ರೋತ್ಸಾಹಿಸುವುದು ಅವರ ಕೆಲಸ’ ಎಂದು ಟಾಸ್ಕ್ ಟ್ರಸ್ಟ್ ಕಾರ್ಯದರ್ಶಿ ಓಮರ್ ಹಕ್ ಹೇಳುತ್ತಾರೆ.

ಇಂತದ್ದೇ ಭಾಷೆಯ ಪುಸ್ತಕಗಳನ್ನು ಇರಿಸಬೇಕು ಎಂಬ ನಿಯಮಗಳಿಲ್ಲ. ಜನರು ಓದಿರುವ ಪುಸ್ತಕಗಳು ಮನೆಯಲ್ಲಿಯೇ ಅನುಪ ಯುಕ್ತವಾಗಿ ಉಳಿಯು ವುದಕ್ಕಿಂತ ಅಗತ್ಯ ವುಳ್ಳವರಿಗೆ, ಪುಸ್ತಕಕೊಳ್ಳಲು ಆಗದವರಿಗೆ ಉಪ ಯುಕ್ತವಾಗಲಿ ಎಂಬುದೇ ಯೋಜನೆ ಉದ್ದೇಶ. ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹೆಚ್ಚು ಭೇಟಿ ನೀಡುತ್ತಿದ್ದಾರೆ. ದಾನಿಗಳು ಇಂಗ್ಲಿಷ್ ಪುಸ್ತಕಗಳನ್ನೇ ಹೆಚ್ಚು ನೀಡುತ್ತಿದ್ದು, ಓದುಗರು ಅವನ್ನೇ ಕೊಂಡೊಯ್ಯುತ್ತಿದ್ದಾರೆ. ಸಸ್ಪೆನ್ಸ್ ಮತ್ತು ರೋಚಕ ಮಾದರಿಯ ಪುಸ್ತಕಗಳಿಗೆ ಬೇಡಿಕೆಯಿದೆ.

‘ಇದಕ್ಕೆ ಮಾಲೀಕರು ಇರುವುದಿಲ್ಲ. ಸಮುದಾಯದ ಸಹಕಾರದಿಂದಲೇ ಗ್ರಂಥಾಲಯ ಆರಂಭ ಮಾಡಲಾಗುತ್ತದೆ. ನನಗೂ ಹಲವು ಸ್ನೇಹಿತರು ಸಹಕರಿಸಿದ್ದಾರೆ. ಬಳಕೆದಾರರೇ ಇದರ ಯಶಸ್ಸಿಗೆ ಜವಾಬ್ದಾರರು. ಪುಸ್ತಕಗಳ ಬಗ್ಗೆ ಆಸಕ್ತಿ ಹೊಂದಿರುವವರು, ಸಾರ್ವಜನಿಕರು ಬಂದು ಹೋಗಲು ಸೂಕ್ತ ಸ್ಥಳ ಹೊಂದಿರುವ ಯಾರೂ ಬೇಕಾದರೂ ಪ್ರಾರಂಭಿಸಬಹುದು. ಲಿಟಲ್ ಫ್ರೀ ಲೈಬ್ರರಿ ಸಂಸ್ಥೆಗೆ ಶುಲ್ಕ ನೀಡಿ ನೋಂದಣಿ ಮಾಡಿದರೆ ಗ್ರಂಥಾಲಯಕ್ಕೆ ನಿರ್ದಿಷ್ಟ ಸಂಖ್ಯೆ ದೊರೆಯಲಿದೆ. ಜಾಗತಿಕ ಮ್ಯಾಪ್ನಲ್ಲಿಯೂ ತಮ್ಮ ಸ್ಥಾನವನ್ನು ಗುರುತು ಮಾಡಬಹುದು. ಇದು ಕಡ್ಡಾಯವೇನಲ್ಲ. ಸದ್ಯ ನಮ್ಮಲ್ಲಿನ ಎರಡು ಗ್ರಂಥಾಲಯ ನೋಂದಣಿ
ಯಾಗಿವೆ. ಆಸಕ್ತರಿಗೆ ಗ್ರಂಥಾಲಯ ಆರಂಭಿಸಲು ಅಗತ್ಯ ಮಾಹಿತಿ ನೀಡುತ್ತೇನೆ’ ಎನ್ನುತ್ತಾರೆ ಟಾಸ್ಕ್ ಟ್ರಸ್ಟ್ ಕಾರ್ಯದರ್ಶಿ ಓಮರ್ ಹಕ್.

ಗ್ರಂಥಾ ಲಯಕ್ಕೆ ಭೇಟಿ ನೀಡ ಬಯಸುವವರು, ತಮ್ಮ ಬಡಾವಣೆಯ ಸಮೀಪವಿರುವ ಸ್ಥಳವನ್ನು https://app.littlefreelibrary.org/ourmap ಲಿಂಕ್ ಬಳಸಿ ಪರಿಶೀಲಿಸಬಹುದು. ರಾಜ್ಯದಲ್ಲಿ ಈ ಗ್ರಂಥಾಲಯ ಕಾರ್ಯಾಚರಣೆ ನಡೆಸುತ್ತಿರುವ ಎರಡನೇ ನಗರ ಮೈಸೂರು, ಬೆಂಗಳೂರಿನಲ್ಲಿ ಎಚ್ಬಿಆರ್ ಬಡಾವಣೆ, ವಿದ್ಯಾರಣ್ಯಪುರ, ಕೋರಮಂಗಲ 7ನೇ ಹಂತ ಹಾಗೂ ಮಾರತಹಳ್ಳಿ ಸಮೀಪ ಇಂತಹ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ. (ಸಂಪರ್ಕ ಸಂಖ್ಯೆ 94491 18357)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.