ಮಹಾಕವಿ ಕುವೆಂಪು ಅವರ ಹುಟ್ಟೂರಾದ ಕುಪ‍್ಪಳಿಯಲ್ಲಿ ಸ್ಥಾಪಿತವಾಗಿರುವ ಕುವೆಂಪು ಪ್ರತಿಷ್ಠಾನವು ಕುವೆಂಪು ಹೆಸರಿನಲ್ಲಿ ಪ್ರತಿವರ್ಷ ಒಂದೊಂದು ಭಾಷೆಯ ಸಾಹಿತಿಗಳಿಗೆ ಪ್ರಶಸ್ತಿ ನೀಡುತ್ತ ಬಂದಿದೆ. 2025ನೇ ಸಾಲಿನ ಈ ಪ್ರಶಸ್ತಿಯು ಕೊಂಕಣಿ ಭಾಷೆಯ ಪ್ರಸಿದ್ಧ ಕಾದಂಬರಿಕಾರ ಮಹಾಬಳೇಶ್ವರ ಸೈಲ್ ಅವರಿಗೆ ಲಭಿಸಿದೆ. ಡಿ.29ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.