ಇಂದು ಡಿಸೆಂಬರ್ 25 ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾಗಿದ್ದು, ಅವರ ದೂರದೃಷ್ಟಿಯ ನಾಯಕತ್ವ ಭಾರತಕ್ಕೆ ಹೇಗೆ ತನ್ನ ಸ್ವಂತ ಯುದ್ಧ ವಿಮಾನವಾದ ತೇಜಸ್ ಅನ್ನು ಹೊಂದಲು ಸಾಧ್ಯವಾಗಿಸಿತು ಎನ್ನುವುದನ್ನು ನಾವು ಸ್ಮರಿಸಬೇಕು.

1924ರಲ್ಲಿ ಗ್ವಾಲಿಯರ್ನಲ್ಲಿ ಜನಿಸಿದ ವಾಜಪೇಯಿ ಅವರು ಭಾರತದ ರಕ್ಷಣಾ ಕ್ಷೇತ್ರಕ್ಕೆ ಅಸಾಧಾರಣ ಕೊಡುಗೆ ನೀಡಿದ್ದರು. ತೇಜಸ್ ವಿಮಾನದ ಕಥೆ ನಿರ್ಣಾಯಕ ಶಕ್ತಿ, ಸ್ವಸಾಮರ್ಥ್ಯದ ಮೇಲಿನ ನಂಬಿಕೆ, ಮತ್ತು ಜಗತ್ತೇ ಅಸಾಧ್ಯ ಎಂದಾಗಲೂ ಸೋಲು ಒಪ್ಪಿಕೊಳ್ಳದ ಮನಸ್ಥಿತಿಯ ಯಶೋಗಾಥೆಯಾಗಿದೆ.
.ವಾಜಪೇಯಿ ಜನ್ಮದಿನ: ಡಿ. 25ಕ್ಕೆ ‘ಶಿಕ್ಷಣದಲ್ಲಿ ಸುಶಾಸನ’ ಕಾರ್ಯಕ್ರಮ.ರಾಜಕಾರಣಕ್ಕೆ ವಾಜಪೇಯಿ ಸ್ಫೂರ್ತಿ: ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅಭಿಮತ.
ಭಾರತ ಎದುರಿಸಿದ ಗಂಭೀರ ಬಿಕ್ಕಟ್ಟು

1980ರ ದಶಕದ ಆರಂಭದಲ್ಲಿ, ಭಾರತೀಯ ವಾಯುಸೇನೆ ಗಂಭೀರ ಸಮಸ್ಯೆಗೆ ಸಿಲುಕಿತ್ತು. 1970ರ ದಶಕದಿಂದಲೂ ನಮ್ಮ ಆಗಸಗಳನ್ನು ರಕ್ಷಿಸಿದ್ದ ಮಿಗ್-21 ಯುದ್ಧ ವಿಮಾನಗಳು ಹಳೆಯದಾಗಿ, ಅಸುರಕ್ಷಿತವಾಗುತ್ತಿದ್ದವು. 1995ರ ವೇಳೆಗೆ, ಭಾರತದ ಬಳಿ ದೇಶ ರಕ್ಷಣೆಗೆ ಬೇಕಾಗುವ ಯುದ್ಧ ವಿಮಾನಗಳ ಕನಿಷ್ಠ ಸಂಖ್ಯೆಯ ಅರ್ಧದಷ್ಟು ವಿಮಾನಗಳು ಮಾತ್ರವೇ ಉಳಿಯಬಹುದು ಎಂದು ಸರ್ಕಾರಿ ವರದಿಗಳು ಎಚ್ಚರಿಕೆ ನೀಡುತ್ತಿದ್ದವು. ಭಾರತದ ಬಳಿ ಆಗ ಎರಡು ಆಯ್ಕೆಗಳಿದ್ದವು: ಒಂದು, ಇತರ ದೇಶಗಳಿಂದ ಯುದ್ಧ ವಿಮಾನಗಳ ಖರೀದಿಯನ್ನು ಮುಂದುವರಿಸುವುದು, ಅಥವಾ ಎರಡನೆಯದಾಗಿ ನಮ್ಮದೇ ಸ್ವಂತ ಯುದ್ಧ ವಿಮಾನವನ್ನು ತಯಾರಿಸುವ ಕಷ್ಟದ ಹಾದಿಯಲ್ಲಿ ಸಾಗುವುದು. ಭಾರತ ಕಷ್ಟಕರವಾದ, ಎರಡನೇ ಆಯ್ಕೆಯಾದ ಸ್ವಂತ ಯುದ್ಧ ವಿಮಾನ ನಿರ್ಮಿಸುವ ಆಯ್ಕೆಯನ್ನೇ ಕೈಗೆತ್ತಿಕೊಂಡಿತು. ಬಳಿಕ, ವಾಜಪೇಯಿ ಅವರ ನಾಯಕತ್ವ ಈ ಆಯ್ಕೆ ಸೂಕ್ತವಾದ ಆಯ್ಕೆಯಾಗಿತ್ತು ಎನ್ನುವುದನ್ನು ಸಾಬೀತುಪಡಿಸಿತು.

ಶೂನ್ಯದಿಂದ ಆರಂಭ

ಒಂದು ಆಧುನಿಕ ಯುದ್ಧ ವಿಮಾನವನ್ನು ನಿರ್ಮಿಸುವುದು ನಿಜಕ್ಕೂ ಅತ್ಯಂತ ಕಷ್ಟಕರವಾದ ಸವಾಲು. ಭಾರತ 1961ರಿಂದ ಯಾವುದೇ ಯುದ್ಧ ವಿಮಾನ ನಿರ್ಮಿಸಿರಲಿಲ್ಲ. ವಿಮಾನ ಉತ್ಪಾದನಾ ಘಟಕ ದಶಕಗಳಿಂದ ಸ್ಥಗಿತಗೊಂಡಿತ್ತು. ಯುದ್ಧ ವಿಮಾನ ನಿರ್ಮಾಣದ ಕುರಿತು ಜ್ಞಾನ ಹೊಂದಿದ್ದ ಇಂಜಿನಿಯರ್ಗಳು ಈಗಾಗಲೇ ನಿವೃತ್ತರಾಗಿದ್ದರು. ಭಾರತ ಅಕ್ಷರಶಃ ಶೂನ್ಯದಿಂದಲೇ ಯುದ್ಧ ವಿಮಾನ ನಿರ್ಮಾಣ ಆರಂಭಿಸಬೇಕಿತ್ತು.

ಭಾರತದ ಮುಂದಿದ್ದ ಸವಾಲು ನಿಜಕ್ಕೂ ಬೃಹತ್ತಾಗಿತ್ತು. ಒಂದು ಆಧುನಿಕ ಯುದ್ಧ ವಿಮಾನಕ್ಕೆ ಅತ್ಯಂತ ಸಂಕೀರ್ಣವಾದ ವ್ಯವಸ್ಥೆಗಳ ಅವಶ್ಯಕತೆಯಿದೆ. 'ಫ್ಲೈ ಬೈ ವೈರ್' ನಂತಹ ತಂತ್ರಜ್ಞಾನ ಪೈಲಟ್ಗಳಿಗೆ ಕೇಬಲ್ಗಳ ಅವಶ್ಯಕತೆ ಇಲ್ಲದೆ, ಕಂಪ್ಯೂಟರ್ಗಳ ನೆರವಿನಿಂದ ವಿಮಾನವನ್ನು ನಿಯಂತ್ರಿಸಲು ನೆರವಾಗುತ್ತದೆ. ಇನ್ನು ಶತ್ರು ಯುದ್ಧ ವಿಮಾನಗಳನ್ನು ದೂರದಿಂದಲೇ ಗುರುತಿಸಲು ಆಧುನಿಕ ರೇಡಾರ್ ವ್ಯವಸ್ಥೆಗಳಿವೆ. ಇದರೊಡನೆ, ಆಯುಧ ವ್ಯವಸ್ಥೆಗಳು, ನ್ಯಾವಿಗೇಶನ್ (ಸಂಚರಣಾ) ಕಂಪ್ಯೂಟರ್ಗಳು, ಮತ್ತು ನೂರಾರು ಅತ್ಯಾಧುನಿಕ ಬಿಡಿಭಾಗಗಳಿವೆ. ಭಾರತ ಇವೆಲ್ಲದರ ನಿರ್ಮಾಣವನ್ನೂ ಕಲಿಯುವುದು ಅನಿವಾರ್ಯವಾಗಿತ್ತು.

ಭಾರತದ ಕನಸಿಗೆ ಅಡ್ಡಗಾಲಿಡಲು ಪ್ರಯತ್ನಿಸಿದ ನಿರ್ಬಂಧಗಳು

1998ರಲ್ಲಿ ನಡೆದ ಬೆಳವಣಿಗೆ ಸಂಪೂರ್ಣ ಯುದ್ಧ ವಿಮಾನ ನಿರ್ಮಾಣ ಯೋಜನೆಗೇ ಅಂತ್ಯ ಹಾಡುವ ಸಾಧ್ಯತೆಯಿತ್ತು. ಪ್ರಧಾನ ಮಂತ್ರಿ ವಾಜಪೇಯಿ ಅವರು ಪೋಖ್ರಾನ್ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸುವ ದಿಟ್ಟ ನಿರ್ಧಾರ ಕೈಗೊಂಡಿದ್ದರು. ಇದರಿಂದ ಪಾಶ್ಚಾತ್ಯ ದೇಶಗಳು, ಅದರಲ್ಲೂ ಅಮೆರಿಕ ಅತ್ಯಂತ ಆಕ್ರೋಶಗೊಂಡಿದ್ದವು. ಈ ದೇಶಗಳು ಭಾರತಕ್ಕೆ ತಂತ್ರಜ್ಞಾನ ಮತ್ತು ಬಿಡಿಭಾಗಗಳನ್ನು ನೀಡಲು ನಿರಾಕರಿಸಿ, ಶಿಕ್ಷೆ ನೀಡಲು ಮುಂದಾದವು. ಇದನ್ನು ನಿರ್ಬಂಧ ಎಂಬ ಹೆಸರಿನಿಂದ ಕರೆಯಲಾಯಿತು.

ಲೈಟ್ ಕಾಂಬ್ಯಾಟ್ ಏರ್ಕ್ರಾಫ್ಟ್ ಯೋಜನೆಗೆ ಇದು ಬಹುದೊಡ್ಡ ಹೊಡೆತವಾಗಿತ್ತು. ಎಂಜಿನ್ಗಳು, ಫ್ಲೈಟ್ ಕಂಟ್ರೋಲ್ ಸಿಸ್ಟಮ್ಗಳು, ಮತ್ತು ರೇಡಾರ್ಗಳನ್ನು ಭಾರತ ವಿದೇಶಗಳಿಂದ ಖರೀದಿಸುವ ಯೋಜನೆ ಹೊಂದಿದ್ದು, ಅವು ಇದ್ದಕ್ಕಿದ್ದಂತೆ ಅಲಭ್ಯವಾದವು. ಡಿಸೆಂಬರ್ 2000ದಲ್ಲಿ, ಅಮೆರಿಕದ ಒಂದು ಪ್ರಸಿದ್ಧ ನಿಯತಕಾಲಿಕೆ ಭಾರತದ ಯುದ್ಧ ವಿಮಾನ ಯೋಜನೆ ಒಂದು ಮುಗಿದುಹೋದ ಅಧ್ಯಾಯ ಎಂದು ಲೇಖನವನ್ನೇ ಪ್ರಕಟಿಸಿತ್ತು. ಯುದ್ಧ ವಿಮಾನ ನಿರ್ಮಾಣ ತಂತ್ರಜ್ಞಾನ ಅತ್ಯಂತ ಸಂಕೀರ್ಣವಾಗಿದ್ದು, ಪಾಶ್ಚಾತ್ಯ ದೇಶಗಳ ನೆರವಿಲ್ಲದೆ ಭಾರತ ಇದರಲ್ಲಿ ಯಶಸ್ವಿಯಾಗಲು ಸಾಧ್ಯವೇ ಇಲ್ಲ ಎಂದಿತ್ತು.

ಆದರೆ, ವಾಜಪೇಯಿ ಈ ಯೋಜನೆಯಲ್ಲಿ ಸೋಲೊಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಅವರು ಭಾರತೀಯ ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳಿಗೆ ಒಂದು ಸರಳ ಸಂದೇಶ ನೀಡಿದ್ದರು: ಒಂದು ವೇಳೆ ಜಗತ್ತು ನಮಗೆ ತಂತ್ರಜ್ಞಾನ ಮಾರಾಟ ಮಾಡಲು ನಿರಾಕರಿಸಿದರೆ, ಅದನ್ನು ನಾವು ಸ್ವತಃ ತಯಾರಿಸೋಣ ಎಂದು ವಾಜಪೇಯಿ ಕರೆ ನೀಡಿದ್ದರು. ಅವರು ಇದಕ್ಕಾಗಿ ಸಂಪೂರ್ಣ ರಾಜಕೀಯ ಬೆಂಬಲ ನೀಡಿ, ಟೀಕೆಗಳಿಂದ ವಿಜ್ಞಾನಿಗಳನ್ನು ರಕ್ಷಿಸಿ, ಅವರಿಗೆ ಅವಶ್ಯಕ ಸಂಪನ್ಮೂಲಗಳ ಪೂರೈಕೆ ನಿರಂತರವಾಗಿ ಮುಂದುವರಿಯುವಂತೆ ನೋಡಿಕೊಂಡರು. ಪ್ರಧಾನ ಮಂತ್ರಿಗಳ ಇಂತಹ ಬೆಂಬಲ ಅತ್ಯಮೂಲ್ಯವಾಗಿತ್ತು. ಇದು ನಮ್ಮ ವಿಜ್ಞಾನಿಗಳಿಗೆ ಅಸಾಧ್ಯ ಎಂಬಂತಿದ್ದ ಕನಸನ್ನು ನನಸಾಗಿಸಲು ಬೇಕಾದ ಧೈರ್ಯ ಒದಗಿಸಿತ್ತು.

ಎಲ್ಲರ ಲೆಕ್ಕಾಚಾರವನ್ನೂ ಭಾರತ ಸುಳ್ಳಾಗಿಸಿದ ದಿನ

ಜನವರಿ 4, 2001ರಂದು, ಅಮೆರಿಕದ ನಿರುತ್ಸಾಹಕರ ಲೇಖನ ಪ್ರಕಟಗೊಂಡ ಕೇವಲ ಒಂದು ತಿಂಗಳ ಬಳಿಕ, ಒಂದು ಅಸಾಧಾರಣ ಬೆಳವಣಿಗೆ ನಡೆಯಿತು. ಭಾರತದ ಲೈಟ್ ಕಾಂಬ್ಯಾಟ್ ಏರ್ಕ್ರಾಫ್ಟ್ ಮೊದಲ ಬಾರಿಗೆ ತನ್ನ ಯಶಸ್ವಿ ಹಾರಾಟ ನಡೆಸಿತು. ಬೆಂಗಳೂರಿನಿಂದ ನಡೆದ ಹಾರಾಟ ಅತ್ಯಂತ ಪರಿಪೂರ್ಣವಾಗಿತ್ತು. ವಿಮಾನ ಆಕಾಶಕ್ಕೆ ಹಾರಿ, ಮೇಲೆ ಮೇಲಕ್ಕೆ ಏರಿ, ಸುಂದರ ಹಾರಾಟ ಪ್ರದರ್ಶನ ನಡೆಸಿ, ಬಳಿಕ ಸುರಕ್ಷಿತವಾಗಿ ಭೂಸ್ಪರ್ಶ ನಡೆಸಿತು. ಟೀಕಾಕಾರರು ಅಸಾಧ್ಯ ಎಂದಿದ್ದನ್ನು ಭಾರತ ಸಾಧ್ಯವಾಗಿಸಿತ್ತು.

ಪ್ರಧಾನ ಮಂತ್ರಿ ವಾಜಪೇಯಿ ಸ್ವತಃ ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ವಿಮಾನದ ಯಶಸ್ವಿ ಹಾರಾಟವನ್ನು ವೀಕ್ಷಿಸಿದ ಬಳಿಕ, ವಿಮಾನಕ್ಕೆ ಒಂದು ಅಧಿಕೃತ ಹೆಸರು ನೀಡುವಂತೆ ಪ್ರಧಾನಿಯವರನ್ನು ಕೋರಲಾಯಿತು. ವಿಮಾನಕ್ಕೆ ಸಂಸ್ಕೃತ ಭಾಷೆಯಿಂದ 20 ಹೆಸರುಗಳ ಪಟ್ಟಿ ತಯಾರಿಸಲಾಗಿತ್ತು. ಅದರಿಂದ ವಾಜಪೇಯಿ 'ತೇಜಸ್' ಎಂಬ ಹೆಸರನ್ನು ಆರಿಸಿದರು. ಈ ಹೆಸರು ಪ್ರಕಾಶ ಎಂಬ ಅರ್ಥವನ್ನು ಹೊಂದಿದೆ. ಈ ಹೆಸರು ವಿಮಾನಕ್ಕೆ ಅತ್ಯಂತ ಸೂಕ್ತವಾಗಿತ್ತು. ಹೇಗೆ ಪ್ರಕಾಶ ಅಂಧಕಾರವನ್ನು ಸೀಳಿ ಸಾಗುತ್ತದೆಯೋ, ಹಾಗೇ ಭಾರತದ ಸಾಧನೆಯೂ ನಿರ್ಬಂಧ ಮತ್ತು ಟೀಕೆಗಳ ಅಂಧಕಾರವನ್ನು ಮೀರಿ ಬೆಳೆದಿತ್ತು.

ಸಮಸ್ಯೆಗಳನ್ನೇ ಶಕ್ತಿಯಾಗಿಸಿದ ಸಾಧನೆ

ಆಸಕ್ತಿಕರ ವಿಚಾರವೆಂದರೆ, ಅಮೆರಿಕದ ನಿರ್ಬಂಧಗಳೇ ಭಾರತಕ್ಕೆ ದೀರ್ಘಾವಧಿಯಲ್ಲಿ ನೆರವಾದವು. ಯಾವಾಗ ವಿದೇಶಗಳು ಭಾರತಕ್ಕೆ ತಂತ್ರಜ್ಞಾನ ಮಾರಾಟ ನಡೆಸಲು ನಿರಾಕರಿಸಿದವೋ, ಆಗ ಭಾರತೀಯ ಎಂಜಿನಿಯರ್ಗಳು ಅವನ್ನು ತಾವೇ ಸ್ವತಃ ನಿರ್ಮಿಸುವ ಒತ್ತಡಕ್ಕೆ ಸಿಲುಕಿದರು. ವಿಮಾನದ ರೇಡಾರ್ ವ್ಯವಸ್ಥೆಗಳು, ಹಾರಾಟ ಕಂಪ್ಯೂಟರ್ಗಳು, ಏವಿಯಾನಿಕ್ಸ್, ಮತ್ತು ಇತರ ಆಧುನಿಕ ಬಿಡಿಭಾಗಗಳನ್ನು ಭಾರತದಲ್ಲೇ ತಯಾರಿಸಲಾಯಿತು. ಒಂದು ಕಾಲದಲ್ಲಿ ಹಿನ್ನಡೆಯಂತೆ ಭಾಸವಾದುದು ಭಾರತಕ್ಕೆ ನೈಜ ಜ್ಞಾನ ಹೊಂದಲು ಮತ್ತು ಸಾಮರ್ಥ್ಯ ವೃದ್ಧಿಸಲು ಪೂರಕ ಅವಕಾಶವಾಯಿತು. ಈ ಜ್ಞಾನ, ನಿರ್ಮಾಣಗಳು ಸಂಪೂರ್ಣವಾಗಿ ಭಾರತದ ಸ್ವಂತವಾದವು.

ಇಂದಿನ ತೇಜಸ್: ಆಗಸದಲ್ಲಿ ಭಾರತದ ಹೆಮ್ಮೆ

ಇಂದು ತೇಜಸ್ ಯುದ್ಧ ವಿಮಾನ ಕೇವಲ ಒಂದು ಕನಸು ಮಾತ್ರವಲ್ಲ. ಬದಲಿಗೆ, ಭಾರತೀಯ ಆಗಸಗಳ ರಕ್ಷಕನಾಗಿದೆ. ಈ ಯುದ್ಧ ವಿಮಾನ ಭಾರತೀಯ ವಾಯು ಸೇನೆಯ 'ಫ್ಲೈಯಿಂಗ್ ಡಾಗರ್ಸ್' ಸ್ಕ್ವಾಡ್ರನ್ನಿನ ಭಾಗವಾಗಿದೆ. ಸರ್ಕಾರ ಈಗಾಗಲೇ 180ಕ್ಕೂ ಹೆಚ್ಚು ತೇಜಸ್ ಯುದ್ಧ ವಿಮಾನಗಳ ಖರೀದಿಗೆ ಆದೇಶ ಸಲ್ಲಿಸಿದೆ. ಇತ್ತೀಚಿನ ಆವೃತ್ತಿಯನ್ನು ತೇಜಸ್ ಎಂಕೆ-1ಎ ಎನ್ನಲಾಗಿದ್ದು, ಇದು ನಿಜಕ್ಕೂ ಒಂದು ಅತ್ಯಾಧುನಿಕ ಯುದ್ಧ ವಿಮಾನವಾಗಿದೆ. ಇದು ಆಧುನಿಕ ರೇಡಾರ್ ವ್ಯವಸ್ಥೆ ಹೊಂದಿದ್ದು, ಏಕಕಾಲದಲ್ಲಿ ಹಲವಾರು ಶತ್ರುಗಳನ್ನು ಪತ್ತೆಹಚ್ಚಬಲ್ಲದು. ಇದರ ಇಲೆಕ್ಟ್ರಾನಿಕ್ ಸಿಸ್ಟಮ್ಗಳು ಶತ್ರುಗಳ ಕ್ಷಿಪಣಿಗಳನ್ನು ಜಾಮ್ ಮಾಡಬಲ್ಲವು. ಹಾರಾಟ ನಡೆಸುತ್ತಲೇ ಇಂಧನ ಮರುಪೂರಣ ನಡೆಸುವ ಸಾಮರ್ಥ್ಯ ಮತ್ತು ಆಧುನಿಕ ಆಯುಧಗಳು ಇದನ್ನು ವಿಶೇಷವಾಗಿಸಿವೆ.

ಎಲ್ಲಕ್ಕಿಂತ ಮುಖ್ಯವಾಗಿ, ತೇಜಸ್ ಯುದ್ಧ ವಿಮಾನದ 50%ಕ್ಕೂ ಹೆಚ್ಚಿನ ಬಿಡಿಭಾಗಗಳು ದೇಶೀಯವಾಗಿ ನಿರ್ಮಾಣಗೊಂಡಿವೆ. ಸಾವಿರಾರು ಭಾರತೀಯ ಎಂಜಿನಿಯರ್ಗಳು, ತಂತ್ರಜ್ಞರು, ಮತ್ತು ಕಾರ್ಮಿಕರು ಈ ಯೋಜನೆಯಿಂದ ಉದ್ಯೋಗ ಪಡೆದುಕೊಂಡಿದ್ದಾರೆ. ಯುವ ಜನರಿಗೆ ಅತ್ಯಾಧುನಿಕ ಏರೋಸ್ಪೇಸ್ ತಂತ್ರಜ್ಞಾನದಲ್ಲಿ ಅನುಭವ ಲಭಿಸಿದೆ. ಭಾರತೀಯ ಕಂಪನಿಗಳು ಅತ್ಯಾಧುನಿಕ ವಿಮಾನ ಬಿಡಿಭಾಗಗಳನ್ನು ನಿರ್ಮಿಸುವುದನ್ನು ಕಲಿತಿವೆ. ಈ ಜ್ಞಾನ ಭಾರತಕ್ಕೆ ತಲೆಮಾರುಗಳ ಕಾಲ ನೆರವಾಗಲಿದೆ.

ನೈಜ ಉಡುಗೊರೆ

ವಾಜಪೇಯಿ ಒಂದು ಅತ್ಯಂತ ಮಹತ್ವದ ವಿಚಾರವನ್ನು ಅರ್ಥ ಮಾಡಿಕೊಂಡಿದ್ದರು: ಒಂದು ದೇಶ ತನ್ನನ್ನು ತಾನು ರಕ್ಷಿಸಿಕೊಳ್ಳಲು ವಿದೇಶಗಳ ಮೇಲೆ ಅವಲಂಬನೆ ಹೊಂದಬೇಕಾದರೆ, ಅದು ನಿಜಕ್ಕೂ ಸ್ವತಂತ್ರವಾಗಿರಲು ಸಾಧ್ಯವಿಲ್ಲ. ಕಷ್ಟಕರ ಸನ್ನಿವೇಶದಲ್ಲಿ ತೇಜಸ್ ವಿಮಾನಕ್ಕೆ ಬೆಂಬಲ ಒದಗಿಸುವ ಮೂಲಕ, ವೈಫಲ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸುವ ಮೂಲಕ, ಭಾರತೀಯ ಸಾಮರ್ಥ್ಯದಲ್ಲಿ ಅಪಾರ ನಂಬಿಕೆ ಇರಿಸುವುದರಿಂದ ವಾಜಪೇಯಿ ಸಂಪೂರ್ಣ ಭಾರತಕ್ಕೆ ಒಂದು ಬಹುಮುಖ್ಯ ಪಾಠವನ್ನು ಬೋಧಿಸಿದ್ದರು. ಬದ್ಧತೆ, ಸ್ವಯಂ ನಂಬಿಕೆಯಿಂದ ನಾವು ಏನನ್ನು ಬೇಕಾದರೂ ಸಾಧಿಸಬಲ್ಲೆವು.

ಪ್ರತಿಯೊಂದು ಬಾರಿಯೂ ತೇಜಸ್ ಹಾರಾಟ ನಡೆಸುವಾಗ, ಅದು ತನ್ನೊಡನೆ ವಾಜಪೇಯಿಯವರ ದೂರದೃಷ್ಟಿಯನ್ನೂ ಹೊತ್ತು ಸಾಗುತ್ತದೆ. ವಾಜಪೇಯಿ ಭಾರತಕ್ಕೆ ಕೇವಲ ಒಂದು ಯುದ್ಧ ವಿಮಾನಕ್ಕಿಂತಲೂ ಹೆಚ್ಚಿನದನ್ನು ನೀಡಿದ್ದಾರೆ. ವಾಜಪೇಯಿ ನಮ್ಮ ಸ್ವಂತ ಸಾಮರ್ಥ್ಯದ ಮೇಲೆ ನಂಬಿಕೆ ಇಡುವುದನ್ನು ಕಲಿಸಿ, ನಮ್ಮ ದೇಶವನ್ನು ನಾವು ಕಾಪಾಡಿಕೊಳ್ಳಲು ಯಾರ ಮೇಲೂ ಅವಲಂಬಿತರಾಗುವ ಅಗತ್ಯವಿಲ್ಲ ಎಂದು ಸಾಬೀತುಪಡಿಸಿದ್ದಾರೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)