ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳಿಸಿಹೋಗುವುದೆಂದರೆ...

ಕವಿತೆ
Last Updated 22 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಮೇಣದ ಬತ್ತಿ
ಬೆಳಕ ಬಿತ್ತಿ
ಕೊನೆಗೂ
ಉರಿದುಹೋಯಿತು
ತನಗಾದರೂ ತುಸು ಬೆಳಕ ಉಳಿಸಿಕೊಳ್ಳದೆ!

ಕರ್ಪೂರದಾರತಿ
ಕಂಪ ಹರಡಿ
ಕೊನೆಗೂ
ಕರಗಿಹೋಯಿತು
ತನಗಾದರೂ ತುಸು ಕಂಪ ಉಳಿಸಿಕೊಳ್ಳದೆ!

ಒರಳಕಲ್ಲು
ಸವಿಯ ಸೂಸಿ
ಕೊನೆಗೂ
ಸವೆದುಹೋಯಿತು
ತನಗಾದರೂ ತುಸು ರುಚಿ ಉಳಿಸಿಕೊಳ್ಳದೇ!

ಹರಿದ ನದಿ
ದಾಹ ನೀಗಿಸಿ
ಕೊನೆಗೂ
ಬತ್ತಿಹೋಯಿತು
ತನಗಾದರೂ ತುಸು ಪಸೆ ಉಳಿಸಿಕೊಳ್ಳದೇ!

ಕೆಲವರು
ಜೀವತೇದು
ಕೊನೆಗೂ
ಸಂದುಹೋದರು
ತಮಗಾದರೂ ತುಸು ಬದುಕ ಉಳಿಸಿಕೊಳ್ಳದೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT