ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ: ಅಪ್ಸರಕೊಂಡದ ತೆರೆಗಳ ಹಿಂಡು

Last Updated 6 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

1
ನಿದ್ದೆಗೆಟ್ಟು ಎದ್ದ ಹಗಲ ಬಗಲಿಗೆ
ಮೊರಮೊರ ಕಡಲ ಜೋಳಿಗೆ

ಕುತೂಹಲದ ಪರದೆ ಇಣುಕಿ
ಅನಾದಿ ವಿಸ್ಮೃತಿಯ ಹಾದಿ
ಮೆಟ್ಟಿದ ಚಪ್ಪಲಿಗೆ ಎಡವಿದ ಹಾಗೆ
ನಿಸರ್ಗದ ಪಲುಕನ್ನು ಕದ್ದ ಹಾಗೆ

ಗವ್ವೆನುವ ಉದ್ದಾನುದ್ದ ಮರಳ ಹಾಸು
ಬೆಕ್ಕಂತೆ ಕಾಲ ಸುತ್ತುವ ಬಿಂಕದ ತೊರೆ
ಈ ಪರಿ ಸುಳಿಯುತ್ತಿದೆ ಇಲ್ಲಿ
ಹೆದ್ದಾರಿಗೆ ಸುಂಕ ಕಟ್ಟುವ ಆಯಕಟ್ಟಿನಲ್ಲಿ

2
ಪ್ರತಿ ದಿನ ಡೈರಿ ಹಾಲು
ದಿನಪತ್ರಿಕೆಯ ಸಂತೆ
ವಾಹನಗಳ ಅಬ್ಬರ
ಏನೋ ದಡಗು ಎಲ್ಲೋ ಪಿಡುಗು

ಅಲ್ಲಿ

ಪುಟಾಣಿ ಏಡಿ ಮರಿಗಳು
ಗೂಡು ಕಟ್ಟಿ ಕಮಕ್ ಕಿಮಕ್ಕೆನ್ನದೆ
ತಮ್ಮ ಪಾಡಿಗೆ ತಾವು ಕರಗುತ್ತಿವೆ
ಬಾನಂಚಿನ ಪಡಪೋಶಿ ಒಡಲಲ್ಲಿ

3
ಸ್ವರ್ಗ ಕೂಡ ಹೀಗೇ ಇರಬಹುದಲ್ಲವೆ
ರುದ್ರ ರಮಣೀಯ ನಿರ್ಭರ ಮರೆ
ಹಾಲು ಅಲೆಗಳಿಂದ ಒಂದೇ ಸಮನೆ
ಜರ್ಝರಿತ ಒಳಗೊಳಗೆ ಅವಿಶ್ರಾಂತ

ನಿವೃತ್ತ ದೇವತೆಗಳು
ಅಭ್ಯಂಗನಕ್ಕೆ ಇಳಿಯುವರಂತೆ
ಅನಂತತೆಗೆ ಕರ್ಫ್ಯೂ ಜಡಿದಿರುವ
ಈ ಚಂದ್ರ ಶಿಖೆಯಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT