ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರುಗವಿತೆಗಳು

Last Updated 31 ಜನವರಿ 2015, 19:30 IST
ಅಕ್ಷರ ಗಾತ್ರ

ಈ ಕತ್ತಲೆಯಲ್ಲಿ
ಮಿನುಗುತ್ತಿವೆ
ನನ್ನ ತಪ್ಪುಗಳು
*
ಈ ಬೊಗಸೆ ಈಗ
ಖಾಲಿಯಲ್ಲ
ಬೆಳಕು ತುಂಬಿದೆ
*
ನನ್ನ ಜೊತೆ ಸಾಗುತ್ತಿದೆ
ಈ ತಿರುವಿನಲ್ಲಿ ಭೇಟಿಯಾದ
ಒಂದು ಅಪರಿಚಿತ ಕ್ಷಣ
*
ಕಾಲ ನಿಂತಿದೆ
ಅವಳ ಎದೆಯಲ್ಲಿ ಉದುರುತ್ತಿವೆ
ಎಲೆಗಳು
*
ನಾನು ಇರುವ ಹಾಗೆಯೇ ಇರುತ್ತದೆ
ಶಾಂತಸಾಗರದ ತಳವೂ
ಆಫ್ರಿಕದ ದಟ್ಟ ಕಾಡೂ
*
ಬಹು ವರ್ಷದ ಬಳಿಕ
ಮುಖದಲ್ಲಿ ಮುಗುಳುನಗು
ಬಿದಿರು ಮೆಳೆಯಲ್ಲೀಗ ಹೂ ಬಿಡುವ ಹೊತ್ತು
*
ದೀಪದ ಬೆಳಕಿನಲ್ಲಿ
ದೀಪ
ನನ್ನ ಕಂಗಳು
*
ಬಿರುಕು ಬಿಟ್ಟಿದೆ ಬದುಕು
ಬೇಸರವಿಲ್ಲ
ಅರಳಿದೆ ಅಲ್ಲೊಂದು ಅರಳಿ
*
ಖುಷಿ ಪಡುತ್ತೇನೆ
ನನ್ನ ಪ್ರತಿಬಿಂಬ ಕಂಡು
ಕನ್ನಡಿಗೆ ಅದರ ಪರಿವೇ ಇಲ್ಲ
*
ಸೆರಗಲ್ಲಿ ಕಟ್ಟಿಕೊಂಡ ಒಂದು
ದುಃಖದ ಕ್ಷಣ
ಈಗ ಮಾಗಿದ ಹಣ್ಣು
*
ಬಸವನ ಹುಳುವಿನ ಕಿವಿಯಲ್ಲಿ
ಪಿಸುಗುಡುತ್ತಿದೆ ಭೂಮಿ
ನೀನು ನನ್ನ ಸಮಾಧಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT