ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ ಆಯ್ಕೆ ಟ್ರಯಲ್ಸ್: ಸಿಫ್ಟ್, ನೀರಜ್ ಗೆ ಜಯ

Published 18 ಮೇ 2024, 19:51 IST
Last Updated 18 ಮೇ 2024, 19:51 IST
ಅಕ್ಷರ ಗಾತ್ರ

ಭೋಪಾಲ್ (ಪಿಟಿಐ): ಏಷ್ಯನ್ ಗೇಮ್ಸ್‌ ಸ್ವರ್ಣ ವಿಜೇತೆ ಸಿಫ್ಟ್ ಕೌರ್ ಸಮ್ರಾ ಅವರು ಒಲಿಂಪಿಕ್‌ ಆಯ್ಕೆ ಟ್ರಯಲ್ಸ್‌ನ ಅಂತಿಮ ದಿನವಾದ ಶನಿವಾರ ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ಸ್ ಸ್ಪರ್ಧೆಯಲ್ಲಿ ಗೆದ್ದರೆ, ಪುರುಷರ ಸ್ಪರ್ಧೆಯಲ್ಲಿ ನೀರಜ್ ಕುಮಾರ್ ಎರಡನೇ ಬಾರಿಗೆ ವಿಜಯಶಾಲಿಯಾದರು.

ಫೈನಲ್‌ನಲ್ಲಿ ಸಿಫ್ಟ್ 461.3 ಅಂಕಗಳನ್ನು ಗಳಿಸಿ ನಿಶ್ಚಲ್ ಅವರನ್ನು ಒಂದು ಅಂಕದಿಂದ ಸೋಲಿಸಿದರು. ಆಶಿ ಚೌಕ್ಸೆ 448.1 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು. ಶ್ರೀಯಂಕಾ ಸದಂಗಿ ಮತ್ತು ಅಂಜುಮ್ ಮೌದ್ಗಿಲ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಗಳಿಸಿದರು.

ಪುರುಷರ 3 ಪೊಸಿಷನ್ಸ್‌ ವಿಭಾಗದಲ್ಲಿ ನೀರಜ್ 462.9 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರು. ಐಶ್ವರ್ಯಾ ತೋಮರ್ 449.8 ಅಂಕಗಳೊಂದಿಗೆ ಮೂರನೇ, ಸ್ವಪ್ನಿಲ್ ಕುಸಾಲೆ ಮತ್ತು ಅಖಿಲ್ ಶಿಯೋರನ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದರು.

ನಾಲ್ಕು ಟ್ರಯಲ್ಸ್‌ನಲ್ಲಿ ಗಳಿಸಿದ ಅತ್ಯುತ್ತಮ ಅಂಕಗಳನ್ನು ಪರಿಗಣಿಸಿ ಸಿಫ್ಟ್ ಅಗ್ರಸ್ಥಾನ ಪಡೆದರೆ, ಅಂಜುಮ್ ಮೌದ್ಗಿಲ್ ಎರಡನೇ ಸ್ಥಾನ ಪಡೆದರು.

ಪುರುಷರ ವಿಭಾಗದಲ್ಲಿ ಐಶ್ವರಿ ತೋಮರ್ ಮತ್ತು ಸ್ವಪ್ನಿಲ್ ಕುಸಾಲೆ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದರು.  

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಶೂಟಿಂಗ್ ತಂಡವನ್ನು ಆಯ್ಕೆ ಮಾಡಲು ಭಾರತ ರಾಷ್ಟ್ರೀಯ ರೈಫಲ್‌ ಅಸೋಸಿಯೇಷನ್‌ (ಎನ್‌ಆರ್‌ಎಐ) ನಾಲ್ಕು ಟ್ರಯಲ್ಸ್‌ಗಳ ಸರಣಿ ನಡೆಸುತ್ತಿದೆ. ಮೊದಲ ಮೂರು ಸ್ಥಾನ ಪಡೆದವರು ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಏರ್‌ ರೈಫಲ್–ಏರ್ ಪಿಸ್ತೂಲ್:  ಪುರುಷರ ಏರ್ ರೈಫಲ್‌ನಲ್ಲಿ ಶ್ರೀ ಕಾರ್ತಿಕ್ ಶಬರಿ ರಾಜ್ 631.6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಮಹಿಳಾ ಏರ್ ರೈಫಲ್‌ನಲ್ಲಿ ರಮಿತಾ ಜಿಂದಾಲ್ 636.4 (ಈ ತಿಂಗಳ ಆರಂಭದಲ್ಲಿ ಬಾಕು ವಿಶ್ವಕಪ್‌ನಲ್ಲಿ ಚೀನಾದ ಹಾನ್ ಜಿಯಾಯು ಸ್ಥಾಪಿಸಿದ ವಿಶ್ವ ದಾಖಲೆಗಿಂತ 0.1 ಹೆಚ್ಚು) ಗಳಿಸಿ ಅಗ್ರಸ್ಥಾನ ಪಡೆದರು. ಮೆಹುಲಿ ಘೋಷ್ (633.1) ಎರಡನೇ ಸ್ಥಾನ ಪಡೆದರೆ, ನ್ಯಾನ್ಸಿ (630.6) ಮತ್ತು ತಿಲೋತ್ತಮ ಸೇನ್ (628.8) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದರು.

ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಒಲಿಂಪಿಯನ್ ಮನು ಭಾಕರ್ 581 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರು. ಸುರಭಿ ರಾವ್ (577) ಹಾಗೂ ಪಾಲಕ್ (572) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು. ರಿದಮ್ ಸಂಗ್ವಾನ್ ನಾಲ್ಕನೇ ಹಾಗೂ ಇಶಾ ಸಿಂಗ್ 572 ಅಂಕಗಳೊಂದಿಗೆ ಐದನೇ ಸ್ಥಾನ ಪಡೆದರು.

ಪುರುಷರ ಏರ್ ಪಿಸ್ತೂಲ್ ವಿಭಾಗದಲ್ಲಿ ಸರಬ್ಜೋತ್ ಸಿಂಗ್ 584 ಅಂಕ ಗಳಿಸಿ ಅಗ್ರಸ್ಥಾನ ಪಡೆದರೆ, ಅರ್ಜುನ್ ಸಿಂಗ್ ಚೀಮಾ 583 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರು. ವರುಣ್ ತೋಮರ್ (577) ಮೂರನೇ, ರವೀಂದರ್ ಸಿಂಗ್ (576) ನಾಲ್ಕನೇ ಮತ್ತು ನವೀನ್ (574) ಐದನೇ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT