ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾಸಿ

Last Updated 2 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಮಾತಾಡಿಕೊಳ್ಳುತ್ತಿದ್ದಾನೆ
ನೋಡುತ್ತ ಪುಟ್ಟ ಕಿಟಕಿಯಿಂದಾಚೆ ಅಗಾಧ ಆಕಾಶ
ಅಲ್ಲಿ ವಿಹರಿಸುತಿರುವ ದೇವಗನ್ನಿಕೆಯರ
ಹಾಗೆ ಕಾಣುತಿರುವ ಮೋಡಗಳ ಹೊರಗೆ

ಒಳಗೆ ಕಾಣುವ ದೃಶ್ಯ
ತೇಲಿಹೋಗುವ ಶವ
ಹೊಸ ಖಂಡಗಳಾವಿಷ್ಕರಿಸಿಕೊಂಡು ಸಾಗುತಿರುವ ನೌಕೆಯಂತೆ.
ಅಲ್ಲಿ ಕಾಯುತಿದೆ ಹೊಸದಾಗಿ ಇದಕಾಗಿಯೇ ತಯಾರಿಸಿರುವ
ನುಣುಪು ನುಣುಪು ಸುಂದರವಾಗಿ ಅದು
ನೋಯಿಸದೆ ಸಾಯಿಸಲು

ಊರ ನಾಶ ಮಾಡಿ ಹೊಳೆಯುತಿರುವ ಚತುಷ್ಪಥ ರಸ್ತೆಯಾಗಿ.
ಕೊನೆಯ ಅಗುಳನ್ನು ನಿತ್ಯ ಹಾಕುವಂತೆ ಅವುಗಳಿಗೆ ಹಾಕಿ ನಡೆಯುತ್ತಿದ್ದಾನೆ.
ಅವೋ ಸುಮ್ಮನಿವೆ ಅಸಹಜವಾಗಿ ಒಂದನೂ ಮೂಸದೆ.
ಒಂದೊಂದೇ ಹೆಜ್ಜೆ ಅದರತ್ತ.
ಸಂತರ, ದಾರ್ಶನಿಕರ, ಪ್ರವಾದಿಗಳ ನುಡಿ ಮೂಕಸಾಕ್ಷಿಯಾಗಿ ಅದುರುತ್ತಿವೆ.
ಈಗಾಗಲೇ ಎಷ್ಟೋ ಬಾರಿ ಸತ್ತು ಹೋಗಿ ಆಗಿದೆ.

ಮತ್ತೊಮ್ಮೆ ಸಭ್ಯವಾಗಿ ಕೊಲೆ.
ಕಣ್ಣ ತೂಬಿನಿಂದ ಕಾಣುತಿದೆ ಒಳಗೆ ದುಃಖದ ಜಲ
ಬತ್ತುತ್ತಾ ಮರುಭೂಮಿಯಾಗುತಿರುವುದು.
ನಡೆದಂತೆಲ್ಲಾ ಅದರತ್ತ ಅವರ ನುಡಿಗಳು ಒದ್ದೆಯಾಗುತಿವೆ.

ಸುಂದರವಾಗಿ ವಿನ್ಯಾಸ ಮಾಡಿರುವ ಅದರೊಳಗೆ
ನಾಗರೀಕವಾಗಿ
ನಾಗರೀಕರ ಬೇಡಿಕೆಗಾಗಿ
ಕೊಲೆಮಾಡಲಾಗುತ್ತಿದೆ
ಜೀವ ಹೋಗುವುದ ಖಾತ್ರಿ ಪಡಿಸಿಕೊಳ್ಳಲು ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT