ಬಾಚಿ ಹಲ್ಲು ಇರುವ ವಿಶ್ವದ ದೊಡ್ಡ ಪ್ರಾಣಿ ಕ್ಯಾಪಿಬರಾ. ಇದು ದಕ್ಷಿಣ ಅಮೆರಿಕದಲ್ಲಿ ಕಂಡುಬರುವ ಪ್ರಾಣಿ. ಗಿನಿ ಹಂದಿಗಳ ಸಂಬಂಧಿ ಎನಿಸಿಕೊಂಡರೂ ಶುದ್ಧ ಸಸ್ಯಾಹಾರಿ.

1.22 ಮೀಟರ್ ಎತ್ತರ ಮತ್ತು 65 ಕೆ.ಜಿ ತೂಕ ಇರುವ ಕ್ಯಾಪಿಬರಾಗಳು ಹುಲ್ಲು, ಗಿಡ, ಹಣ್ಣು, ಮರದ ತೊಗಟೆಗಳನ್ನು ತಿನ್ನುತ್ತವೆ. ವಯಸ್ಕ ಕ್ಯಾಪಿಬಾರಾಗಳು ದಿನಕ್ಕೆ ಮೂರೂವರೆ ಕಿಲೋ ಹುಲ್ಲು ತಿನ್ನುತ್ತವೆ. ಕೆಂಪು ಹಳದಿ ಕೂದಲ ನಿರುಪದ್ರವಿ ಕ್ಯಾಪಿಬರಾಗಳಿಗೆ ಬಾಲ ಇರುವುದಿಲ್ಲ.

20 ಬಾಚಿ ಹಲ್ಲುಗಳ ಕ್ಯಾಪಿಬರಾದ ಹಿಂದಿನ ಕಾಲುಗಳು ಮುಂದಿನವಕ್ಕಿಂತ ಕೊಂಚ ಎತ್ತರ ಇರುತ್ತದೆ. ಹೆಣ್ಣು ಗಂಡಿಗಿಂತ ಕೊಂಚ ಹೆಚ್ಚು ತೂಕ ಇರುತ್ತದೆ. ಆಯ್ದ ಸಸ್ಯಗಳನ್ನು ಮಾತ್ರ ಸೇವಿಸುವ ಇವುಗಳ ಮಾಂಸಕ್ಕೆ ದಕ್ಷಿಣ ಅಮೆರಿಕ ಮತ್ತು ವೆನಿಜುವೆಲಾದಲ್ಲಿ ಭಾರಿ ಬೇಡಿಕೆ ಇದೆ. ಅದೇ ಇವಕ್ಕೆ ಕುತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.