ವಿಮರ್ಶೆ ಎನ್ನುವುದು ಬಹು ದೊಡ್ಡ ಸಾಂಸೃತಿಕ ಜವಾಬ್ದಾರಿ. ಅದನ್ನು ನಿರ್ವಹಿಸುವವರು ವಿನಯ, ವಿದ್ವತ್ತಿನ ಜೊತೆಗೆ ನಿಖರವಾದ ನಿಲುವನ್ನು ಹೊಂದಿರಬೇಕಾಗುತ್ತದೆ. ಹೀಗೆ ಮುಖ್ಯರಾದವರಲ್ಲಿ, ಇತ್ತೀಚೆಗೆ ನಮ್ಮನ್ನಗಲಿದ ಪ್ರೊ. ಡಿ. ರಘುನಾಥರಾವ್ (ಜ: ಫೆ. 27, 1939– ನಿ: ಮೇ 7, 2015) ಒಬ್ಬರಾಗಿದ್ದರು.

ಅವರ ಮತ್ತು ನನ್ನ ಗೆಳೆತನ ಸುಮಾರು 30-35 ವರ್ಷಗಳಷ್ಟು ಹಿಂದಿನದು. ನಾವಿಬ್ಬರು ಭೇಟಿಯಾದಾಗಲೆಲ್ಲ ಸಾಹಿತ್ಯದ ಚರ್ಚೆ ನಡೆಸುತ್ತಿದ್ದೆವು. ಮುಲ್ಕಿ ವಿಜಯ ಕಾಲೇಜಿನಿಂದ 1997ರಲ್ಲಿ ನಿವೃತ್ತರಾಗಿ ಶಿವಮೊಗ್ಗೆಗೆ ಬಂದು ನೆಲಸಿದರು. ಅಂದಿನಿಂದ ನನ್ನ ಅವರ ಗೆಳೆತನ ಹತ್ತಿರದ್ದಾಗಿ ಕೌಟುಂಬಿಕವೂ ಆಗಿತ್ತು. ಕೌಟುಂಬಿಕ ವಿಚಾರಗಳನ್ನೂ ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಶಿವಮೊಗ್ಗೆಯಲ್ಲಿ ವಾಸಕ್ಕೆ ಪ್ರಿಯವಾಗುವಂತೆ ಮನೆ ಕಟ್ಟಿಕೊಂಡರು.

ಒಬ್ಬಳೇ ಮಗಳಿಗೆ ಮದುವೆ ಮಾಡಿದರು. ಈ ಸಂದರ್ಭದಲ್ಲೆಲ್ಲಾ ಅವರ ಮನೆಯ ಊಟ ಉಪಚಾರದ ರುಚಿಯನ್ನು ಸವಿದಿದ್ದೇವೆ. ಅನಾರೋಗ್ಯ ಕಾರಣದಿಂದ ಮಗಳು ಪ್ರೀತಿ, ಅಳಿಯ ಗುರುರಾಜ್ ಅವರ ಹತ್ತಿರ ಇರಲು ಬೆಂಗಳೂರಿಗೆ ಹೋಗಿ ನೆಲಸಿದರು. (ಅವರು ಮೂಲತಃ ಮಲೆಬೆನ್ನೂರಿನವರು). ಪತ್ನಿ ಕುಸುಮ ಅವರೊಂದಿಗೆ ನೆಮ್ಮದಿಯ ಸಾತ್ವಿಕ ಬಾಳನ್ನು ನಡೆಸುತ್ತಾ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ಸಾಹಿತ್ಯವಲಯದಲ್ಲಿ ಗುರುತಾಗಿದ್ದರು.

ಶಿವಮೊಗ್ಗೆಯಲ್ಲಿದ್ದಷ್ಟು ದಿನಗಳಲ್ಲಿ, ವಾರದಲ್ಲಿ ಎರಡು ಮೂರು ದಿನ ಸಂಜೆಯ ಹೊತ್ತು ಭೇಟಿಯಾಗುತಿದ್ದೆವು. ವಿನೋಬನಗರದ ಗಣಪತಿ ದೇವಾಲಯದ ಪಾರ್ಕಿನ ಪಕ್ಕದ ಶಾಲೆಯೊಂದರ ಅರಳಿಕಟ್ಟೆ ನಮ್ಮ ಸಾಹಿತ್ಯ ಸಲ್ಲಾಪಕ್ಕೆ ಸಾಕ್ಷಿಯಾಗಿದೆ. ನವ್ಯ ಸಂದರ್ಭದ ಕೆಲವು ಕವಿಗಳ ಕುರಿತು ಅಧ್ಯಯನ ನಡೆಸಬೇಕಾದ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ‘ಆ ಕೆಲಸವನ್ನು ಮಾಡಿ ಮುಗಿಸಬೇಕು.

ಅವರೆಲ್ಲರೂ ಸಾಂಸ್ಕೃತಿಕವಾಗಿ ಮಹತ್ವದವರಾಗಿದ್ದಾರೆ’ ಎಂದೆಲ್ಲ ಹೇಳುತ್ತಿದ್ದರು. ಆ ದಿಶೆಯಲ್ಲಿ ಅಧ್ಯಯನ ನಡೆಸುತ್ತಿದ್ದರು. ತಿರುಮಲೇಶರ ‘ಬಿಳಿ ಬೆಕ್ಕು’, ‘ಕರಿ ಬೆಕ್ಕು’, ‘ಪೆಂಟಯ್ಯನ ಅಂಗಿ’ ಕವಿತೆಗಳನ್ನು ಕುರಿತು ಉತ್ಸಾಹದಿಂದ ಮಾತನಾಡುತ್ತಿದ್ದರು. ಬರೆದೂ ಇದ್ದಾರೆ; ಹಾಗೆಯೇ ಮುಂಬೈನಲ್ಲಿ ನೆಲಸಿದ್ದ ಯಶವಂತ ಚಿತ್ತಾಲರ ಕೆಲವು ಕತೆಗಳು ಕಾದಂಬರಿಗಳ ಬಗ್ಗೆಯೂ.

ಚಿತ್ತಾಲರ ‘ಪುರುಷೋತ್ತಮ’ ಕಾದಂಬರಿಯನ್ನು ಕುರಿತು ಅವರು ಬರೆದ ‘ಅನುಭವ - ಆಶಯ ಮತ್ತು ಸಂಶ್ಲೇಷಿತ ರೂಪ’ ಎಂಬ ಲೇಖನ ಅವರ ವಿಮರ್ಶೆಯ ಕೃತಿನಿಷ್ಠತೆ ಮತ್ತು ಅಧ್ಯಯನದ ಸೂಕ್ಷ್ಮತೆಗೆ ಸಾಕ್ಷಿಯಾಗಿದೆ. ಅವರ ಅಧ್ಯಯನದ ಹೊಸ ಹೊಳಹುಗಳು, ಅವುಗಳನ್ನು ಮಂಡಿಸುತ್ತಿದ್ದ ಧಾಟಿಯಲ್ಲಿ ಕೂಡ ಸಂಸ್ಕೃತಿ ವಿಮರ್ಶಕನೊಬ್ಬನ ಜವಾಬ್ದಾರಿಯನ್ನು ಮತ್ತು ಸಭ್ಯತೆಯನ್ನು–ನಿಖರತೆಯನ್ನು ಕಾಣಬಹುದು. ನನ್ನ ಕವಿತೆಗಳನ್ನು ಕೇಳಿಸಿಕೊಂಡು ಅವರು ಪ್ರತಿಕ್ರಿಯಿಸುತ್ತಿದ್ದ ಮಾತುಗಳಿಂದ ಮತ್ತು ಅವರ ಸ್ನೇಹದಿಂದ ನಾನು ಬೆಳೆದಿದ್ದೇನೆ.

ರಘುನಾಥರಾವ್ ಅವರು ಮೈಸೂರಿನಲ್ಲಿ ಎಂ.ಎ. ವಿದ್ಯಾರ್ಥಿಯಾಗಿದ್ದಾಗ ನವ್ಯ ಸಾಹಿತ್ಯದ ಹಿರಿಯರಾದ ಗೋಪಾಲಕೃಷ್ಣ ಅಡಿಗರು, ಅನಂತಮೂರ್ತಿ ಮುಂತಾದವರು ಸೇರಿ ಚರ್ಚಿಸುತ್ತಿದ್ದ ‘ಕಾಫಿಹೌಸ್’ ಚರ್ಚೆಯನ್ನು ಅಂಚಿನಲ್ಲಿ ಕುಳಿತು ಕೇಳಿಸಿಕೊಳ್ಳುತ್ತಿದ್ದರು. ಆ ಸಂದರ್ಭದ ಸಾಹಿತ್ಯ ಸೃಷ್ಟಿ ಮತ್ತು ವಿಮರ್ಶೆಯ ವಾಗ್ವಾದ ಅವರ ಮೇಲೆ ಮಾಡಿದ ಪ್ರಭಾವ, ಕಲಿತದ್ದು, ಮತ್ತು ತಾವೂ ತಮ್ಮದಾಗುವಂತೆ ಬರಹವನ್ನು ರೂಢಿಸಿಕೊಂಡದ್ದರ ಬಗ್ಗೆ ಬಹಳ ವಿನಯದಿಂದ ಹೇಳುತ್ತಿದ್ದರು. ತುಂಬ ಸಂಕೋಚದ ಸ್ವಭಾವ ರಘುನಾಥರಾವ್ ಅವರದು.

ಇವರ ವಿಮರ್ಶೆಯ ಧೋರಣೆ ಮತ್ತು ಧಾಟಿಯನ್ನು ಮೆಚ್ಚಿಕೊಂಡ ಜಿ.ಹೆಚ್. ನಾಯಕ್ ಅವರು ರಘುನಾಥರಾವ್ ಅವರಿಂದ ಕಳೆದ ಶತಮಾನದ ಕಾದಂಬರಿ–ಸಣ್ಣಕಥೆಗಳ ಬಗ್ಗೆ ವಿಮರ್ಶೆಯನ್ನು ಬರೆಸಿದ್ದಾರೆ. ಅವರ ‘ಸಣ್ಣಕತೆ: 1926-1950’, ‘ಕಾದಂಬರಿ: 1975-2000’ ಲೇಖನಗಳ ಮೌಲಿಕತೆ ಎಷ್ಟು ದೊಡ್ಡದು ಎಂಬುದು ಕನ್ನಡ ವಿಮರ್ಶಾಲೋಕ ಗುರುತಿಸಿದೆ. ಅವರ ಇನ್ನೊಂದು ವಿಮರ್ಶಾ ಲೇಖನ ‘ಆಧುನಿಕತೆ ಮತ್ತು ನವ್ಯಕಾದಂಬರಿ’ಯಲ್ಲಿ ಕೂಡ ಮುಖ್ಯವಾದುದು.

‘ತತ್ವಪದಕಾರರು ಮತ್ತು ವಸಾಹತುಶಾಹಿ ವ್ಯವಸ್ಥೆ: ಒಂದು ಅಧ್ಯಯನ’ (2008) ಎನ್ನುವ ಸಂಶೋಧನಾ ಕೃತಿ ಅವರ ಶ್ರದ್ಧೆ ಮತ್ತು ವ್ಯಾಪಕವಾದ ಸಂಶೋಧನೆಯ ಕ್ಷೇತ್ರಕಾರ್ಯದ ಪರಿಶ್ರಮವನ್ನು ತೋರಿಸಿಕೊಡುವಂತಹದ್ದು.
ಅವರ ‘ಪರಿಪ್ರೇಕ್ಷ್ಯ’ ವಿಮರ್ಶಾಸಂಕಲನ ಪ್ರಕಟವಾದ ಸಂದರ್ಭದಲ್ಲಿ ‘ಕಣ್ವ ಪ್ರಕಾಶನ’ದ ಗಿರಿರಾಜು ಪುಸ್ತಕ ಸಿದ್ಧವಾದ ಕೂಡಲೇ ಗೌರವ ಪ್ರತಿಗಳ ಜೊತೆಯಲ್ಲೇ ಸಂಭಾವನೆಯನ್ನು ನೀಡಿದರು.

ಪ್ರಕಾಶಕರೊಬ್ಬರ ಈ ರೀತಿಯ ಪ್ರಾಮಾಣಿಕ ಗೌರವಯುತ ನಡವಳಿಕೆಗೆ, ಅಭಿಮಾನ–ಸಂತೋಷ–ತೃಪ್ತಿಯನ್ನು ಅವರು ದೂರವಾಣಿಯಲ್ಲಿ ನನ್ನೊಂದಿಗೆ ಹಂಚಿಕೊಂಡಿದ್ದರು. ಆ ಸಂದರ್ಭದಲ್ಲಿ ನಾನು ರಘುನಾಥರಾವ್ ಅವರ ಸರಳ ಸಂತೃಪ್ತಿಯ ಮನಸ್ಸನ್ನು ಕಂಡುಕೊಂಡೆ. ಆ ಕೃತಿಯ ಬಿಡುಗಡೆಯ ಬಗ್ಗೆ ಪ್ರಸ್ತಾಪಮಾಡಿದೆ.

ಆಗ ಅವರು ‘ಯಾರು ಮಾಡ್ತಾರೆ ಅಣತಿಯವರೆ. ನಾನೇ ನನ್ನ ಪುಸ್ತಕ ಬಿಡುಗಡೆ ಮಾಡಿಸಿಕೊಳ್ಳುವುದು ಅಷ್ಟು ಚಂದ ಕಾಣುವುದಿಲ್ಲ’ ಅಂದುಬಿಟ್ಟಿದ್ದರು. ಆದರೆ ಮುಂದೊಂದು ದಿನ ‘ಸುಚಿತ್ರ’ ಸಂಸ್ಥೆಯ ವಿಜಯಮ್ಮ, ಆನಂದ ಅವರು ಆ ಕೃತಿಯ ಬಗ್ಗೆ ಓದುಗರೊಂದಿಗೆ ನಡೆಸಿಕೊಟ್ಟ ಸಂವಾದ ಕಾರ್ಯಕ್ರಮ ರಘುನಾಥರಾವ್ ಅವರ ವಿಮರ್ಶೆಯ ಮಹತ್ವವನ್ನು ಬೆಂಗಳೂರಿನ ವಿದ್ವಜ್ಜನರಿಗೆ ಮನವರಿಕೆ ಮಾಡಿಕೊಟ್ಟದ್ದು ಅವರಿಗೆ ತೃಪ್ತಿಯನ್ನು ತಂದುಕೊಟ್ಟಿತ್ತು.

ರಘುನಾಥರಾವ್ ಅವರ ವಿಮರ್ಶೆಯ ಸ್ಪಷ್ಟತೆ ಮತ್ತು ಆಲೋಚನೆಯ ಹೊಸತನದಿಂದಾಗಿ ಅವರು ನಮಗೆ ಪ್ರಮುಖರು. ಸಣ್ಣಕತೆಗಳ ಬಗ್ಗೆ ಬರೆಯುತ್ತಾ, ‘ಮಾಸ್ತಿಯವರ ಸಂಯಮದಿಂದ ಕೂಡಿದ ನಿರುದ್ವಿಗ್ನ ಬರವಣಿಗೆಯಾಗಲಿ, ತಮ್ಮ ಸಂದರ್ಭದ ಸಮತೂಕದ ಗ್ರಹಿಕೆಯಾಗಲೀ ಅವರಿಗೆ (ಪ್ರಭಾವಿತರಾದವರಿಗೆ) ಅವರ-ಮಾಸ್ತಿಯವರ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ. ಮಾಸ್ತಿಯವರ ನೋಟ ಬೀಸುಗಳು ಉಳಿದವರಿಗೆ ಸಾಧ್ಯವಾಗಿಲ್ಲ. ಅಲ್ಲದೆ, ನವೋದಯದ ಮಿತಿ-ಸಂಕೋಚಗಳು ಉಳಿದವರಲ್ಲಿ ಎದ್ದು ಹೊಡೆಯುವಂತಿದೆ.

ಮಾಸ್ತಿಯವರ ಮನೋಧರ್ಮ ಅಭಿಜಾತ ಮಾದರಿಯದಾದರೆ, ಉಳಿದವರದು ಶುದ್ಧ ಅಥವಾ ಅರೆ ರೊಮ್ಯಾಂಟಿಕ್ ಮಾದರಿಯದಾಗಿರುವುದೇ ಇದಕ್ಕೆ ಕಾರಣವಾಗಿರಬೇಕೆನಿಸುತ್ತದೆ. ಆದರೆ ಆದರ್ಶೀಕರಿಸುವ, ವೈಭವೀಕರಿಸುವ ಗೀಳಿನಿಂದ ಅವರ ಕತೆಗಳಲ್ಲಿ ಭಾವುಕತೆ ಅಗತ್ಯಕ್ಕಿಂತ ಹೆಚ್ಚಾಗಿ ಅವರ ಕತೆಗಳ ಪಾಕವನ್ನು ಅವರೇ ಹದಗೆಡಿಸಿಕೊಂಡದ್ದೂ ಇದೆ’ (ಪುಟ 108, ಪರಿಪ್ರೇಕ್ಷ್ಯ) ಎಂದು ಅಭಿಪ್ರಾಯಪಟ್ಟಿದ್ದಾರೆ. ಪಂಪನ ಕುರಿತು ಬರೆಯುತ್ತ–‘ಊಳಿಗಮಾನ್ಯ ಸಾಮಾಜಿಕ ಸಂದರ್ಭ ಅದು.

ಅದನ್ನು ಸೂಕ್ಷ್ಮವಾಗಿ ವೈಭವೀಕರಿಸುವ ಸಾಹಿತ್ಯ ಹುಟ್ಟಿ ಬಂದಿತೆನಿಸುತ್ತದೆ’ (ಪುಟ 158-ಪರಿಪ್ರೇಕ್ಷ್ಯ) ಎನ್ನುತ್ತಾರೆ. ‘ಬಂಡಾಯದ ಬೀಜಗಳು ನವ್ಯ-ನವೋದಯ ಗರ್ಭದಲ್ಲೇ ಇದ್ದವು. ಗಾಳಿ -ಮಳೆ, ಗೊಬ್ಬರಗಳು ಒದಗಿಬಂದಾಗ ಮೇಲಕ್ಕೆ ಚಿಗಿದೆದ್ದವು. ಆದ್ದರಿಂದ ಈ ಸಾಹಿತ್ಯಕ ಪಂಥ/ಒಲವುಗಳು ಹಿಂದಿನವರ ನಂಟನ್ನು ಇಡಿಯಾಗಿ ಕಳಚಿಕೊಂಡು ಸ್ವತಂತ್ರವಾಗಿ ಮೈ ತಾಳಿದವಲ್ಲ’ (ಪುಟ: 164-ಪರಿಪ್ರೇಕ್ಷ್ಯ)–ಇಂಥ ಖಚಿತ ಮತ್ತು ಸಾಹಿತ್ಯ ಓದಿನ ನಿಲುವುಗಳು ಅವರ ವಿಮರ್ಶೆಯ ಧಾಟಿಯಾಗಿತ್ತು.

ರಘುನಾಥರಾವ್ ಅವರು ಮಾಡಿ ಮುಗಿಸಬೇಕಿದ್ದ ಕೆಲಸಗಳಲ್ಲಿ ಹೆಳವನಕಟ್ಟೆ ಗಿರಿಯಮ್ಮನ (ಅವಳ ವಂಶಸ್ಥರು) ಕುರಿತು ಸಂಶೋಧನೆ ಮುಖ್ಯವಾದುದು. ಆ ಕೆಲಸ ಒಂದಿಷ್ಟು ಆಗಿರಬೇಕು. ಕೆಲವು ಸಾಹಿತ್ಯ-ಜೀವನ ವೃತ್ತಾಂತಗಳನ್ನು ಅವರು ಬರೆಯ ಬೇಕೆಂದಿದ್ದರು. ಈಗಾಗಲೇ ಬರೆದಿಟ್ಟಿರುವುದು ಓದುಗರಿಗೆ ಇನ್ನೂ ದೊರೆಯಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.