ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊಹರಾ’ ಕನ್ನಡಿಯಲ್ಲಿ ಅಸ್ಸಾಂ ಸಿರಿ

Last Updated 11 ಜೂನ್ 2016, 19:30 IST
ಅಕ್ಷರ ಗಾತ್ರ

ಕರ್ಬಿ ಅಂಗ್ಲೊಂಗ್ ಜಿಲ್ಲೆಯ ‘ಕೊಹರಾ’ ಪ್ರಕೃತಿಪ್ರಿಯರು ಮತ್ತು ಸಮಾಜಶಾಸ್ತ್ರದ ವಿದ್ಯಾರ್ಥಿಗಳ ಪಾಲಿಗೆ ಒಂದು ಅಪರೂಪದ ಪಠ್ಯ.

ಅಸ್ಸಾಂ ರಾಜ್ಯದ ಕೇಂದ್ರಭಾಗದಲ್ಲಿ ಕರ್ಬಿ ಅಂಗ್ಲೊಂಗ್ ಹೆಸರಿನ ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುವ ಜಿಲ್ಲೆ ಇದೆ. ಆ ಜಿಲ್ಲೆಯ ಹೆಚ್ಚಿನ ಭೂಭಾಗದಲ್ಲಿ ಸದಾ ಹಸಿರು ಹಸಿರಾಗಿ ನಳನಳಿಸುವ ಬೆಟ್ಟಗಳು, ದಟ್ಟವಾದ ಕಾಡುಗಳು ಮತ್ತು ಜುಳುಜುಳು ನಿನಾದದಿಂದ ಹರಿಯುವ ನದಿಗಳಿವೆ.

ಅಪರೂಪದ ಸಸ್ಯ ಸಂಪತ್ತು, ಗಿಡಮೂಲಿಕೆಗಳು ಹಾಗೂ ಅಪಾಯದ ಅಂಚಿನಲ್ಲಿರುವ ನಿಸರ್ಗ ಸಹಜವಾಗಿರುವ ಜೀವಜಾಲಗಳಿಂದ ಅಸ್ಸಾಂನ ಕರ್ಬಿ ಅಂಗ್ಲೊಂಗ್ ಪರಿಸರ ಆವೃತವಾಗಿದೆ. ‘ಪರಿಸರವಾದಿಗಳ ಪ್ರಯೋಗಶಾಲೆ’ ಮತ್ತು ‘ನಿಸರ್ಗಪ್ರೇಮಿಗಳ ಸ್ವರ್ಗ’ ಎನ್ನುವುದು ಇದರ ಅಗ್ಗಳಿಕೆ. ‘ಎಥ್ನಿಕ್ ವಿಲೇಜ್’ ಅಸ್ಸಾಂನ ಮತ್ತೊಂದು ವಿಶೇಷ.

ಕಾಜಿರಂಗ ರಾಷ್ಟ್ರೀಯ ಉದ್ಯಾನದಿಂದ 16 ಕಿ.ಮೀ. ದೂರದಲ್ಲಿ ‘ಎಥ್ನಿಕ್ ವಿಲೇಜ್’ ಎಂಬ ಪ್ರೇಕ್ಷಣೀಯ ಮತ್ತು ಅಧ್ಯಯನಕ್ಕೆ ಪ್ರಶಸ್ತವಾದ ಸ್ಥಳವಿದೆ. ಆ ಪ್ರದೇಶವನ್ನು ನೋಡದೆ ಇದ್ದರೆ ಪ್ರವಾಸಿಗರು ಅಸ್ಸಾಂ ಪ್ರವಾಸದ ವಿಶೇಷ ಅನುಭವವೊಂದನ್ನು ಕಳೆದುಕೊಂಡಂತೆಯೇ ಸರಿ. ಅಂದಹಾಗೆ, ಈ ಪ್ರದೇಶವನ್ನು ‘ಕೊಹರಾ’ ಎಂದು ಕರೆಯಲಾಗುತ್ತದೆ.

ಕರ್ಬಿ ಅಂಗ್ಲೊಂಗ್ ಜಿಲ್ಲೆಯ ಎಲ್ಲ ಬುಡಕಟ್ಟು ಜನಾಂಗದವರ ಸಾಂಪ್ರದಾಯಿಕ ಮನೆಗಳು, ವಿಶಾಲವಾದ ಮಲಗುಕೋಣೆಗಳನ್ನು ‘ಕೊಹರಾ’ದಲ್ಲಿ ಕಾಣಬಹುದು. ಬುಡಕಟ್ಟು ಜನಾಂಗದವರ ಸಾಂಸ್ಕೃತಿಕ ಪ್ರದೇಶದ ರೂಪದಲ್ಲೂ ಇದನ್ನು ಕಾಣಬಹುದು.

ಬುಡಕಟ್ಟು ಜನಾಂಗದವರ ಕೃಷಿ ಚಟುವಟಿಕೆಗಳ ಮೂರ್ತರೂಪವಾಗಿ ಆಕರ್ಷಕ ಕಲ್ಲಿನ ಮೂರ್ತಿಗಳನ್ನು ಇಲ್ಲಿ ಸ್ಥಾಪಿಸಲಾಗಿದೆ.

ಏಪ್ರಿಲ್‌ನಿಂದ ಅಕ್ಟೋಬರ್‌ವರೆಗಿನ ಅವಧಿ ಕರ್ಬಿ ಅಂಗ್ಲೊಂಗ್ ಜಿಲ್ಲೆಯ ಭೇಟಿಗೆ ಪ್ರಶಸ್ತವಾದುದು. ಬುಡಕಟ್ಟು ಸಮುದಾಯಕ್ಕೆ ಸೇರಿದ ಮನೆಗಳ ವಾಸ್ತು ಅಧ್ಯಯನ ಮಾಡಲು ಕೂಡ ಈ ಸ್ಥಳ ಯೋಗ್ಯವಾಗಿದೆ.

ಸುಂದರವಾದ ಜಲಪಾತಗಳು ಮತ್ತು ಅಂಕುಡೊಂಕಾಗಿ ಹರಿಯುವ ನದಿಗಳನ್ನು ಒಳಗೊಂಡಿರುವ ಕರ್ಬಿ ಅಂಗ್ಲೊಂಗ್  ಚಾರಣಪ್ರಿಯರ ಮತ್ತು ಸಾಹಸಿಗರ ಸ್ವರ್ಗ ಎಂದೂ ಪ್ರಸಿದ್ಧವಾದುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT