ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಆರೋಗ್ಯ ರಕ್ಷಣೆ ಮಾಹಿತಿಯ ಕಣಜ

Published 6 ಜನವರಿ 2024, 23:32 IST
Last Updated 6 ಜನವರಿ 2024, 23:32 IST
ಅಕ್ಷರ ಗಾತ್ರ

ನಾಡಿನ ವಿವಿಧ ವೈದ್ಯರು ಆರೋಗ್ಯದ ಕುರಿತಾಗಿ ಈವರೆಗೆ ಬರೆದ ಪ್ರಮುಖ ಲೇಖನಗಳನ್ನು ಒಳಗೊಂಡ ಕೃತಿ ‘ಸಮಗ್ರ ಆರೋಗ್ಯಕ್ಕೆ ಸಮೃದ್ಧ ವೈದ್ಯ ಸಾಹಿತ್ಯ’. ಕೃತಿಯಲ್ಲಿ 120 ವೈದ್ಯರ ಲೇಖನಗಳಿದ್ದು, ಡಾ.ಸಿ.ಆರ್‌. ಚಂದ್ರಶೇಖರ್‌, ಡಾ.ನಾ. ಸೋಮೇಶ್ವರ ಒಟ್ಟಾಗಿ ಈ ಕೃತಿಯನ್ನು ಸಂಪಾದಿಸಿದ್ದಾರೆ.

‘ಕನ್ನಡದಲ್ಲಿ 2000ಕ್ಕೂ ಹೆಚ್ಚು ಆರೋಗ್ಯ ಪುಸ್ತಕಗಳು ಪ್ರಕಟಗೊಂಡಿದ್ದರೂ, ಮಾರುಕಟ್ಟೆಯಲ್ಲಿ ದೊರೆಯುವ ಪುಸ್ತಕಗಳ ಸಂಖ್ಯೆ 500 ದಾಟುವುದಿಲ್ಲ. ಏಕೆಂದರೆ ಹಿರಿಯರ ಪುಸ್ತಕಗಳು ಮತ್ತೆ ಮತ್ತೆ ಮರುಮುದ್ರಣವಾಗುತ್ತಿಲ್ಲ. ಹೀಗಾಗಿ ಕನ್ನಡ ವೈದ್ಯಕೀಯ ಸಾಹಿತ್ಯ ಪ್ರಮುಖ ಲೇಖನಗಳನ್ನು ಒಂದೆಡೆ ತರುವುದು ಕೃತಿಯ ಉದ್ದೇಶ. ಆದಾಗ್ಯೂ ಇದು ಸಮಗ್ರವಾಗಿಲ್ಲ. ಹಲವು ವೈದ್ಯರ ಲೇಖನಗಳು ದೊರೆತಿಲ್ಲ’ ಎಂದು ಸಂಪಾದಕರು ಕೃತಿಯ ಪ್ರಾರಂಭದಲ್ಲಿಯೇ ಹೇಳಿದ್ದಾರೆ.

ಕನ್ನಡ ವೈದ್ಯ ಸಾಹಿತ್ಯದ ಅವಲೋಕನದಿಂದ ಹಿಡಿದು ಆರೋಗ್ಯದ ಕುರಿತಾದ ಅನೇಕ ಮಾಹಿತಿಪೂರ್ಣ ಲೇಖನಗಳು ಈ ಕೃತಿಯಲ್ಲಿವೆ. ದೇಹದಲ್ಲಿನ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತಾಗಿ ಆಯಾ ವಿಭಾಗದ ತಜ್ಞರೇ ಮಾಹಿತಿ ನೀಡಿರುವುದು ಅರ್ಥಪೂರ್ಣವಾಗಿದೆ. ಬರಹಗಳು ಸರಳ ಭಾಷೆಯಲ್ಲಿ ಅರ್ಥವಾಗುವಂತಿವೆ. 

ಸಮಗ್ರ ಆರೋಗ್ಯಕ್ಕೆ ಸಮೃದ್ಧ ವೈದ್ಯ ಸಾಹಿತ್ಯ

ಸಂ: ಡಾ.ಸಿ.ಆರ್‌.ಚಂದ್ರಶೇಖರ್‌ ಡಾ.ನಾ.ಸೋಮೇಶ್ವರ

ಪ್ರ: ವಿಕ್ರಮ್‌ ಪ್ರಕಾಶನ

ಸಂ:8971091760

ಪು:583

ಬೆ:600

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT