ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು | ಪೋಸ್ಟಾಫೀಸಿನಲ್ಲಿ ಅಕ್ಕನ ಜಡ್ಜಮೆಂಟು: ಗ್ರಾಮೀಣ ಬದುಕಿನ ಅನುಭವದ ಕೃತಿ

Published 6 ಜನವರಿ 2024, 23:33 IST
Last Updated 6 ಜನವರಿ 2024, 23:33 IST
ಅಕ್ಷರ ಗಾತ್ರ

ಗಮ್ಯ ಜೀವನವನ್ನು ಬಿಂಬಿಸುವ ಈ ಲಲಿತ ಪ್ರಬಂಧಗಳ ವಸ್ತು ವಿಷಯದಲ್ಲಿ ವೈವಿಧ್ಯವಿದೆ. ದಟ್ಟ ಅನುಭವದ ಜತೆಗೆ ಲೇಖಕರ ಸೂಕ್ಷ್ಮ ಒಳನೋಟಗಳು ಸೇರಿಕೊಂಡಿರುವುದರಿಂದ ಕೆಲವು ಕಡೆಗಳಲ್ಲಿ ವಿಶ್ಲೇಷಣಾತ್ಮಕ ಶೈಲಿಯನ್ನು ನೋಡಬಹುದು.  ಎಲ್ಲರ ಬದುಕಿನ ಕನವರಿಕೆಯ ಭಾಗವಾಗಿರುವ, ಆಹ್ಲಾದ ಭಾವವನ್ನು ತುಂಬಿಕೊಡುವ ಬಾಲ್ಯದ ಸವಿರುಚಿಯನ್ನು ಲೇಖಕರು ಇಲ್ಲಿ ಉಣಬಡಿಸಿದ್ದಾರೆ. ಜೀರಂಡಗಿಯ ಮೇಲಿನ ಆಕರ್ಷಣೆ, ರೇಡಿಯೊದ ಬಗೆಗಿನ ವಿಸ್ಮಯ ಭಾವ, ಕರಡಿಯಾಟ, ಹಗಲುವೇಷಗಾರರ ಮೋಡಿ ಇವೆಲ್ಲದರ ಅನುಭವ ಓದುತ್ತಾ ಹೋದಂತೆ ಓದುಗರನ್ನು ಆವರಿಸಿಕೊಳ್ಳುತ್ತದೆ ಮತ್ತು ತಮ್ಮ ಬಾಲ್ಯದ ಅನುಭವಗಳನ್ನು ನೆನಪಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ. ರಾಯಚೂರು ಸುತ್ತಲ ಗ್ರಾಮೀಣ ಭಾಷೆಯ ಸೊಗಡಿನ ಸಂಭಾಷಣೆಗಳಿರುವ ಈ ಪ್ರಬಂಧಗಳಿಗೆ ದೇಸಿತನವಿದೆ.

ಪುಸ್ತಕ: ಪೋಸ್ಟಾಫೀಸಿನಲಿ ಅಕ್ಕನ ಜಡ್ಜಮೆಂಟು

ಪ್ರಬಂಧಗಳು

ಲೇಖಕ‌: ಅಮರೇಶ ಗಿಣಿವಾರ

ದರ: ₹ 120

ಮೇಘನಾ ಪ್ರಕಾಶನ

ಮೊಬೈಲ್‌ : 7338180848

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT