ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಶೋಕ ಹೊಸಮನಿ ಅವರ ಕವನ: ಕೂಸಿನಂತೆ

ಅಶೋಕ ಹೊಸಮನಿ ಅವರ ಕವನ
ಅಶೋಕ ಹೊಸಮನಿ
Published 22 ಜೂನ್ 2024, 23:38 IST
Last Updated 22 ಜೂನ್ 2024, 23:38 IST
ಅಕ್ಷರ ಗಾತ್ರ

ಕೂಸಿನಂತೆ
ಚಿಟ್ಟನೆ ಚೀರಿತು
ಹೃದಯ

ಹಣ್ಣಿನ ಗಾಯಗಳು
ಮುಕ್ಕಳಿಸತೊಡಗಿದವು
ನದಿಗಳು

ಹೃದಯವನ್ನೆ ಗುರಿಯಾಗಿಸಿಕೊಂಡ
ಕದನಗಳು
ಕದನ ವಿರಾಮಗಳು
ಛಿದ್ರ ಛಿದ್ರ ಹೂವುಗಳು

ಪಾದಗಳ ಕವುಚಿ
ರಕ್ತ ಸಿಕ್ತ ಬೆಳದಿಂಗಳ
ಹೆಗಲಿಗೇರಿಸಿ
ಮತ್ತದೇ ಬಾಂಬು ಬಂದೂಕು
ಬೊಬ್ಬಿಡುವಾಗ
ಕೂಸಿನಂತೆ
ಚಿಟ್ಟನೆ ಚೀರಿತು
ಹೃದಯ

ಇನ್ನೇನು ಧ್ಯಾನಿಸಲಿ
ನೆತ್ತರ ಕಡಲಲಿ
ಈಜಿ
ಹೊತ್ತು ಕಳೆದೀತು ಹೇಗೆ?
ಕನಸಿದ ಕನಸ ಮುರುಟಿ
ನಿರಿಗೆಗಳು ಚೂರು ಚೂರಾಗುವಾಗ
ಕೂಸಿನಂತೆ
ಚಿಟ್ಟನೆ ಚೀರಿತು
ಹೃದಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT