ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ: ಕಳೆದುದು ಸಿಕ್ಕಿತು

Published 7 ಅಕ್ಟೋಬರ್ 2023, 23:32 IST
Last Updated 7 ಅಕ್ಟೋಬರ್ 2023, 23:32 IST
ಅಕ್ಷರ ಗಾತ್ರ

ಸಾಧನೆಯ ಪಟ್ಟಿ ಸಾಕಷ್ಟು ದೊಡ್ಡದಿತ್ತು
ಪ್ರಶಸ್ತಿ ಪ್ರದಾನ ಸಮಾರಂಭ 
ಸಭಾಂಗಣ ಕಿಕ್ಕಿರಿದು ತುಂಬಿತ್ತು


ಕಿರೀಟದಂತಹದ್ದೇನೋ ತೊಡಿಸಿದರು
ಶಾಲು , ಮಣಿಹಾರ, ಹಣ್ಣಿನ ಬುಟ್ಟಿ,
ಹೊರಲಾರದಷ್ಟು ದೊಡ್ಡ ಫಲಕ,
ಕಟ್ಟು ಹಾಕಿದ ಪ್ರಶಸ್ತಿ ಪತ್ರ


ಪ್ರಶಂಸೆ, ಗುಣಗಾನ, ಚಪ್ಪಾಳೆ
ಬೀಗಿ ಕುಳಿತಿದ್ದೆ ನಾನು...
ತನಗೆ ಸಂಬಂಧಿಸಿದ್ದೇ ಅಲ್ಲ ಎಂಬಂತೆ
ಕವಿತೆ ತನ್ನ ಪಾಡಿಗೆ ತಾನು!


ಕಟ್ಟಕಡೆಗೆ ಧನ್ಯವಾದ ಹೇಳಿ ಸಭೆ ಚದುರಿತು
ಉಳಿದವರಿಬ್ಬರೇ... ಮುಂದೇನು?
ತುಟಿಯಂಚಿನಲ್ಲೇ ಹಗೆಯಿಲ್ಲದ 
ನಗೆಯದು ನಕ್ಕಿತು!
ಉಕ್ಕಿದ್ದು ಝರ್ರೆಂದು ತಗ್ಗಿತು ಬಗ್ಗಿತು
ಹೌದು.... ಕಳೆದುದು ಸಿಕ್ಕಿತು !

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT